ಬೆಂಗಳೂರು -ವಾಸ್ಕೋ ರೈಲಿನ ದಿನಾಂಕ ಇಂದು ನಿರ್ಧಾರ?
ಇಂದಿನಿಂದ ವೇಳಾಪಟ್ಟಿ ಸಮಿತಿ ಸಭೆ
Team Udayavani, Feb 26, 2020, 7:00 AM IST
ಕುಂದಾಪುರ: ಬೆಂಗಳೂರು- ವಾಸ್ಕೋ ರೈಲು ಸಂಚಾರ ಆರಂಭ ಯಾವತ್ತು ಎಂಬ ಪ್ರಶ್ನೆಗೆ ಬುಧವಾರ ಬಹುತೇಕ ಉತ್ತರ ಸಿಗುವ ಸಾಧ್ಯತೆ ಗಳಿವೆ.
ಭಾರತೀಯ ರೈಲ್ವೇಯ ವೇಳಾ ಪಟ್ಟಿ ಸಮಿತಿ (ಐಆರ್‌ಟಿಸಿ)ಯ ಸಭೆ ಫೆ. 26, 27 ಮತ್ತು 28ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಇಲ್ಲಿ ವಾಸ್ಕೋ ರೈಲು ಓಡಾಟ ಆರಂಭ ದಿನಾಂಕ ನಿರ್ಧಾರ ಆಗಲಿದೆ.
ರೈಲಿನ ಕೋಚ್‌ಗಳು ಬೆಂಗಳೂರಿಗೆ ಆಗಮಿಸಿದ್ದು, ವೇಳಾಪಟ್ಟಿ ಪ್ರಕಟವಾಗಿ 15 ದಿನಗಳಾಗಿದ್ದರೂ ರೈಲು ಓಡುತ್ತಿಲ್ಲ. ರೈಲ್ವೇ ಅಧಿಕಾರಿಗಳ ತೊಡರುಗಾಲೇ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ರಾಜಕೀಯ ಇಚ್ಛಾಶಕ್ತಿ ಮತ್ತು ಸಾಮಾಜಿಕ ಬದ್ಧತೆಯ ಮೂಲಕ ಒತ್ತಡ ಹೇರಲಾಗುತ್ತಿದೆ.
ಏನಿದು ಸಭೆ?
ಎಲ್ಲ ರೈಲ್ವೇ ವಿಭಾಗ ಮುಖ್ಯಸ್ಥರು, ಪ್ರತಿನಿಧಿಗಳು ಸಭೆಗೆ ಆಗಮಿಸುತ್ತಾರೆ. ವಿವಿಧ ವಲಯಗಳ ಮಾರ್ಗಗಳಲ್ಲಿ ಹೊಸ ರೈಲುಗಳ ಕುರಿತು ಮಾಹಿತಿ ವಿನಿಮಯ ನಡೆಸಿ, ಹಾಲಿ ರೈಲು, ಗೂಡ್ಸ್ ರೈಲುಗಳ ಸಮಯ ಹೊಂದಾಣಿಕೆ ಮಾಡಿ, ಹಳಿ ಬಿಟ್ಟು ಕೊಡುವ ಬಗ್ಗೆ ಸಮಾಲೋಚನೆ ನಡೆಯುತ್ತದೆ. ಬೆಂಗಳೂರು – ವಾಸ್ಕೊ ರೈಲಿನ ಬಗೆಗೂ ಚರ್ಚೆ ನಡೆಯಲಿದೆ. ಇಲ್ಲಿ ಒಪ್ಪಿಗೆ ದೊರೆತರೆ ಸಮಸ್ಯೆ ಸುಲಭ ವಾಗಿ ಬಗೆಹರಿದಂತೆ. ಇಲ್ಲದಿದ್ದರೆ ಮಾ. 2ರಂದು ಸಚಿವರ ಉಪಸ್ಥಿತಿಯಲ್ಲಿ ದಿಲ್ಲಿಯಲ್ಲಿ ನಡೆಯುವ ಸಭೆಯಲ್ಲಿ ಹಗ್ಗಜಗ್ಗಾಟ ನಡೆಯುತ್ತದೆ. ಹೀಗಾಗಿ ಈ ದಿನ ಮಹತ್ವದ್ದಾಗಿದೆ.
ಸಮಯ ಕೋರಿಕೆ: ಕೇಂದ್ರ ಸಚಿವರಲ್ಲಿ ರೈಲಿಗೆ ಚಾಲನೆಗೆ ದಿನ ನಿಗದಿಗೆ ಕೇಳಿಕೊಳ್ಳಲಾಗಿದೆ, ಉಡುಪಿ ಅಥವಾ ಬೆಂಗಳೂರಿನಲ್ಲಾದರೂ ಆಗಬಹುದು. ಶೀಘ್ರ ಚಾಲನೆ ನೀಡಲು ವಿನಂತಿಸಿದ್ದೇನೆ ಎಂದು ಸಂಸದೆ ಶೋಭಾ ಹೇಳಿದ್ದಾರೆ.
ರೈಲ್ವೇ ಹಿರಿಯ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಸಚಿವ ಸುರೇಶ್ ಅಂಗಡಿಯವರೂ ಭರವಸೆ ನೀಡಿದ್ದಾರೆ. ಹೊಸ ರೈಲು ಮಂಜೂರಾತಿ ಸಂದರ್ಭದ ಸಭೆಗಳಲ್ಲಿ ನಾನು ಭಾಗವಹಿಸಿದ್ದೆ.
– ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ
ವೇಳಾಪಟ್ಟಿ ನಿಗದಿಯಾದ ಕಾರಣ ಶೀಘ್ರ ಚಾಲನೆ ನೀಡಲಿ. ಎಲ್ಲರಿಗೂ ಪ್ರಯೋಜನ ದೊರೆಯಲಿ.
– ಗಣೇಶ್ ಪುತ್ರನ್, ಅಧ್ಯಕ್ಷರು, ರೈಲು ಪ್ರ. ಹಿತರಕ್ಷಣ ಸಮಿತಿ, ಕುಂದಾಪುರ
ಆರಂಭಕ್ಕೆ ಇರುವ ಅಡ್ಡಿ
ಬೆಂಗಳೂರಿನಿಂದ ವಾಸ್ಕೋಗೆ ಚಲಿಸುವ ರೈಲು ದಕ್ಷಿಣ, ನೈಋತ್ಯ ಮತ್ತು ಕೊಂಕಣ ರೈಲು ಮಾರ್ಗಗಳನ್ನು ಬಳಸಬೇಕು. ಕೊಂಕಣ ರೈಲಿನ ಮಾರ್ಗದಲ್ಲಿ ಹೆಚ್ಚಾಗಿ ಗೂಡ್ಸ್ ರೈಲುಗಳು ಚಲಿಸುವುದರಿಂದ ಹಸಿರು ನಿಶಾನೆ ತೋರಿ ಸಿಲ್ಲ.
ಕೊಂಕಣ ಮಾರ್ಗದ ಮೂಲಕ 40ರಷ್ಟು ರೈಲುಗಳಲ್ಲಿ ಸುಮಾರು 33 ಕೇರಳ, ಉತ್ತರ ಭಾರತಕ್ಕೆ ತೆರಳುತ್ತವೆ. ಜನರ, ಸಂಘಟನೆಗಳ, ಜನಪ್ರತಿನಿಧಿಗಳ ಆಸಕ್ತಿಯಿಂದ ಪ್ರಯಾಣಿಕ ರೈಲು ದೊರೆ ತಿದೆಯೇ ವಿನಾ ನಿಗಮವು ಸ್ವ ಹಿತಾಸಕ್ತಿ ಯಿಂದ ಒಂದು ಪ್ರಯಾಣಿಕರ ರೈಲನ್ನೂ ಆರಂಭಿಸಿಲ್ಲ ಎಂಬ ಆರೋಪವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.