Basroor: ಜಲ್ಲಿ ಕಲ್ಲುಗಳನ್ನು ಸುರಿದರೂ ಪ್ರಯೋಜನ ಶೂನ್ಯ
ಕೋಣಿ-ಬಸ್ರೂರು ಹೆದ್ದಾರಿಯುದ್ದಕ್ಕೂ ಗುಂಡಿಗಳ ಸಾಲು
Team Udayavani, Sep 12, 2024, 1:09 PM IST
ಬಸ್ರೂರು: ಕುಂದಾಪುರದಿಂದ ಬಸ್ರೂರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಕೋಣಿ, ಸಟ್ವಾಡಿ ಮತ್ತಿತರ ಹಲವೆಡೆಗಳಲ್ಲಿ ಮತ್ತೆ ಬೃಹದಾಕಾರವಾದ ಹೊಂಡ- ಗುಂಡಿಗಳು ಸೃಷ್ಟಿಯಾಗಿದ್ದು, ವಾಹನ ಸವಾರರು ಪ್ರಯಾಸಪಟ್ಟು ಸಂಚರಿಸುವಂತಾಗಿದೆ.
ಬಸ್ರೂರಿನಿಂದ ಕುಂದಾಪುರಕ್ಕೆ ಸಾಗುವ ರಸ್ತೆಯ ಸಟ್ವಾಡಿಯ ಸರ್ಕಲ್‌ನ ಸುತ್ತ, ಮುಂದೆ ಕೋಣಿಯ ಎಚ್‌ಎಂಟಿ ರಸ್ತೆಯ ತಿರುವಿನವರೆಗೆ ರಸ್ತೆಯುದ್ದಕ್ಕೂ ಹೊಂಡ ಬಿದ್ದಿದೆ. ಈ ಹೊಂಡದಿಂದಾಗಿ ಇಲ್ಲಿ ಸಂಚರಿಸುವ ವಾಹನಗಳು ಸಂಕಷ್ಟ ಅನುಭವಿಸುತ್ತಿವೆ. ಹಲವು ದ್ವಿಚಕ್ರ ವಾಹನಗಳು ಇಲ್ಲಿ ರಾತ್ರಿ ವೇಳೆ ಪಲ್ಟಿಯಾಗಿವೆ.
ಈ ಹಿಂದೆ ಭಾರೀ ಮಳೆ ಬರುತ್ತಿರುವಾಗಲೇ ಒಂದು ಲಾರಿ ಜಲ್ಲಿ ಕಲ್ಲುಗಳನ್ನು ಹಾಕಲಾಗಿತ್ತು. ಹಲವು ಸಮಯದಿಂದ ಹೊಂಡ ಬಿದ್ದ ಈ ರಸ್ತೆಯ ಹೊಂಡಗಳಿಗೆ ಮತ್ತೆ ಎರಡನೇ ಬಾರಿಗೆ ಸುಮಾರು ಹದಿನೈದು ಬುಟ್ಟಿಗಳಷ್ಟು ಜಲ್ಲಿಕಲ್ಲುಗಳನ್ನು ಹಾಕಲಾಗಿತ್ತು. ಹೊಂಡಕ್ಕೆ ಜಲ್ಲಿಕಲ್ಲುಗಳನ್ನು ತಂದು ಹಾಕುವುದರಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ. ಈ ಹೊಂಡಗಳಿಗೆ ಜಲ್ಲಿ ಕಲ್ಲುಗಳನ್ನು ಹಾಕಿ ಮುಚ್ಚಿ ಮೇಲೆ ಕಾಕ್ರೀಟ್ ಅಥವಾ ಡಾಮರು ಹಾಕಿ ತೇಪೆ ಕಾರ್ಯ ಮಾಡಬೇಕಾಗಿದೆ. ಇಲ್ಲವೇ ಇಡೀ ರಸ್ತೆಯನ್ನೇ ಪುನರ್ ನಿರ್ಮಾಣ ಮಾಡಿ ಸರಿಪಡಿಸಬೇಕಾಗಿದೆ ಎನ್ನುವುದಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈಗಾಗಲೇ ಹಲವು ವಾಹನಗಳು ಪಲ್ಟಿಯಾದ ಈ ಹೊಂಡಗಳಿಗೆ ಶಾಶ್ವತ ಪರಿಹಾರವನ್ನು ತತ್‌ಕ್ಷಣ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.