ಬಸ್ರೂರು – ಹಟ್ಟಿಕುದ್ರು ಸೇತುವೆ ಕಾಮಗಾರಿ ಶೀಘ್ರ ಆರಂಭ ?
ಕೊರೊನಾ, ಮಳೆಯ ಕಾರಣ ಸ್ಥಗಿತಗೊಂಡ ಕಾಮಗಾರಿ
Team Udayavani, Oct 13, 2020, 4:18 AM IST
ಬಸ್ರೂರು: ಮಂಡಿಕೇರಿಯ ಕಳುವಿನ ಬಾಗಿಲಿನಿಂದ 330 ಮೀ. ಉದ್ದದ ಹಟ್ಟಿಕುದ್ರುವಿಗೆ ಹೋಗುವ ಸೇತುವೆಗೆ ಶಿಲಾನ್ಯಾಸ ಜನವರಿಯಲ್ಲಾಗಿದ್ದು, ಆದರೆ ಕೋವಿಡ್ ಕಾರಣದಿಂದ ಸ್ಥಗಿತಗೊಂಡ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಈಗ ಮಳೆ ಕಡಿಮೆಯಾಗಿದ್ದು, ಕಾಮಗಾರಿ ಶೀಘ್ರ ಆರಂಭಗೊಳ್ಳುವ ನಿರೀಕ್ಷೆಯಿದೆ.
ಕೊರೊನಾ, ಮಳೆಯಿಂದಾಗಿ ಸೇತುವೆ ಕಾಮಗಾರಿಯನ್ನು ಮಾರ್ಚ್‌ನಲ್ಲಿ ಸ್ಥಗಿತಗೊಳಿಸಲಾಗಿತ್ತು. ಅದಲ್ಲದೆ ಒಂಭತ್ತು ಪಿಲ್ಲರ್‌ಗಳ ಮುಂದೆ ನೀರಿದ್ದಲ್ಲಿ ಗಟ್ಟಿ ಮಣ್ಣನ್ನು ತುಂಬಿಸಲಾಗಿತ್ತು. ಆದರೆ ನದಿ ತುಂಬಿ ಹರಿಯುವಾಗ ಇಲ್ಲಿ ಮಣ್ಣಿನ ತಡೆಯಿಂದ ಹಟ್ಟಿಕುದ್ರು ಭಾಗದ ನದಿ ಪ್ರದೇಶದಲ್ಲಿ ಕೊರೆತ ಆರಂಭವಾಗುವ ಅಪಾಯವೂ ಇತ್ತು. ಈ ಕಾರಣದಿಂದ ಅಲ್ಲಿ ತುಂಬಿಸಿದ್ದ ಮಣ್ಣನ್ನು ಮಳೆಗಾಲದಲ್ಲಿ ಕಡಿದು ಕೊಡಲಾಗಿತ್ತು.
ಹಟ್ಟಿಕುದ್ರು ಸೇತುವೆ ಜನರ ಬಹು ಹಿಂದಿನ ಕನಸಾಗಿತ್ತು. ಆದರೆ ಇಲ್ಲಿಯವರೆಗೆ ಕಾಲ ಕೂಡಿ ಬಂದಿರಲಿಲ್ಲ. ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರ ಶಿಫಾರಸಿನ ಮೇರೆಗೆ ವಾರಾಹಿ ನೀರಾವರಿ ನಿಗಮದಿಂದ ಈ ಸೇತುವೆ ನಿರ್ಮಾಣಕ್ಕೆ 14.59 ಕೋ.ರೂ. ಮಂಜೂರಾಗುವ ಮೂಲಕ ದಶಕಗಳ ಕನಸು ನನಸಾಗಿತ್ತು.
ಇನ್ನೂ 12 ಪಿಲ್ಲರ್
ಇಲ್ಲಿ ಇನ್ನೂ 12 ಫಿಲ್ಲರ್ ನಿರ್ಮಿಸಬೇಕಾಗಿದ್ದು ಎಷ್ಟು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಈಗಲೇ ಹೇಳುವುದು ಕಷ್ಟ. ಒಟ್ಟು 21 ಪಿಲ್ಲರ್‌ಗಳನ್ನು ನಿರ್ಮಿಸಬೇಕಾಗಿದ್ದು ಒಮ್ಮೆ ಕಾಮಗಾರಿ ಆರಂಭವಾದರೆ ಅನಂತರ ಯಾವ ಕಾರಣಕ್ಕೂ ನಿಲ್ಲದು ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ. ಪ್ರಸ್ತುತ ಶಾಲಾ ಕಾಲೇಜು ಇಲ್ಲದಿದ್ದರೂ ವಿದ್ಯಾಗಮ ತರಗತಿ ಮತ್ತಿತರ ಕೆಲಸಗಳಿಗಾಗಿ ವಿದ್ಯಾರ್ಥಿಗಳು, ಜನರು ಇರುವ ಒಂದೇ ದೋಣಿಯಲ್ಲಿ ಸಾಗಬೇಕಾಗಿದೆ.
ಶೀಘ್ರ ಕಾಮಗಾರಿ
ಕೊರೊನಾ, ಮಳೆಗಾಲದ ಕಾರಣದಿಂದ ಸೇತುವೆ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಸದ್ಯ ಮಳೆ ಕಡಿಮೆಯಾಗಿದೆ. ಈ ಬಗ್ಗೆ ಗುತ್ತಿಗೆದಾರರೊಂದಿಗೆ ಮಾತನಾಡಿದ್ದು ಬಿಹಾರ, ಉತ್ತರ ಪ್ರದೇಶ ಮತ್ತು ಒರಿಸ್ಸಾ ಪ್ರದೇಶದ ಕಾರ್ಮಿಕರು ಆಗಮಿಸಲಿದ್ದು ಸೇತುವೆ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ.
– ರಾಮ್ ಕಿಶನ್ ಹೆಗ್ಡೆ ಬಸ್ರೂರು, ಉಪಾಧ್ಯಕ್ಷ, ತಾ.ಪಂ. ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 153: ವೈಯಕ್ತಿಕ ಅಭಿಪ್ರಾಯ ಬೇರೆ, ಕರ್ತವ್ಯ ಬೇರೆ
BBK11: ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೇನೆ.. ಕಿಚ್ಚನ ಮುಂದೆ ಕಣ್ಣೀರಿಟ್ಟ ಭವ್ಯ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
Chandan Shetty: ಕಾಟನ್ ಕ್ಯಾಂಡಿ ಹಾಡು; ಚಂದನ್‌ಶೆಟ್ಟಿ ವಿರುದ್ಧ ಕೃತಿಚೌರ್ಯ ದೂರು
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.