Beejadi ಪಡು ಕೊಳ: ಈ ಬಾರಿ ಹೂಳೆತ್ತುವರೇ?
23 ಎಕರೆ ವಿಸ್ತೀರ್ಣದ ಕೆರೆ; ನರೇಗಾದಡಿ ಅಭಿವೃದ್ಧಿ ಕಷ; 9 ಕೋಟಿ ಅನುದಾನ ಬೇಕು
Team Udayavani, Dec 8, 2024, 2:37 PM IST
ಕೋಟೇಶ್ವರ: ಗೋಪಾಡಿ ಹಾಗು ಬೀಜಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 35 ಕೆರೆಗಳಿದ್ದು, ಅವುಗಳಲ್ಲಿ ಕೆಲವು ಕೆರೆಗಳಿಗೆ ಹೂಳೆತ್ತುವ ಭಾಗ್ಯ ಇನ್ನೂ ಲಭಿಸದೆ ಇರುವುದರಿಂದ ಮುಂದಿನ ದಿನಗಳಲ್ಲಿ ಅಂತರ್ಜಲದ ಕೊರತೆಯಾಗುವ ಸಾಧ್ಯತೆ ಇದೆ. ಅದರಲ್ಲೂ ಬೃಹತ್ ಗಾತ್ರದ ಬೀಜಾಡಿ ಪಡು ಕೊಳದ ಹೂಳೆತ್ತುವುದು ಒಂದು ಸವಾಲಾಗಿದೆ.
ಗೋಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 12 ಕೆರೆಗಳಿವೆ. ಅವುಗಳಲ್ಲಿ 3 ಕೆರೆಗಳ ಹೂಳೆತ್ತಲಾಗಿದೆ. ಮಿಕ್ಕುಳಿದ ಕೆರೆಗಳ ಹೂಳೆತ್ತಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಿನಗೂಲಿ ಕೆಲಸಕ್ಕೆ ಯಥೇಚ್ಛ ಕಾರ್ಮಿಕರು ಲಭಿಸದಿರುವುದು ಒಂದು ಕಾರಣವಾದರೇ ಗ್ರಾಮೀಣ ಪ್ರದೇಶದ ಗ್ರಾ.ಪಂ.ಗಳಲ್ಲಿ ಸಂಪನ್ಮೂಲದ ಕೊರತೆ ಇನ್ನೊಂದು ಕಾರಣ.
ಬೀಜಾಡಿಯಲ್ಲೊಂದು ಬೃಹತ್ ಕೆರೆ
ಬೀಜಾಡಿಯಲ್ಲಿ ಬೃಹತ್ 20 ಕೊಳಗಳಿವೆ. ಅವುಗಳಲ್ಲಿ ಮೂಡು ಹಾಗೂ ಪಡು ಕೊಳಗಳು ಅವಳಿ ಕೊಳಗಳು. ಇಲ್ಲಿ ಮೂಡು ಕೊಳ ಸೇರಿದಂತೆ 12 ಕೆರೆಗಳ ಹೂಳನ್ನು ಎತ್ತಲಾಗಿದೆ. ಆದರೆ 23 ಎಕರೆ ಪ್ರದೇಶದಲ್ಲಿರುವ ಪಡುಕೊಳ ಸವಾಲಾಗಿದೆ.
ಭಾರೀ ಗಾತ್ರದ ಬೀಜಾಡಿ ಪಡು ಕೊಳದಲ್ಲಿ 10 ಅಡಿ ಆಳದವರೆಗೆ ಹೂಳು ತುಂಬಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಹೂಳೆತ್ತುವ ಕಾಮಗಾರಿಗೆ ಸಂಪನ್ಮೂಲ ಒದಗಿಸುವುದು ಸಣ್ಣ ನೀರಾವರಿ ಇಲಾಖೆಗೆ ಕಷ್ಟಸಾಧ್ಯ. ಈ ದಿಸೆಯಲ್ಲಿ ಸರಕಾರದ ಇನ್ನಿತರ ಯೋಜನೆಯಡಿ ಆರ್ಥಿಕ ಸಹಾಯ ನೀಡಿದಲ್ಲಿ ಕೆರೆಯ ಹೂಳೆತ್ತಲು ಸಾಧ್ಯ ಎಂದು ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಪಡುಕೊಳ ಹೂಳೆತ್ತಲು ಬೇಕು ಅನುದಾನ
ಬೀಜಾಡಿಯ ಪಡು ಕೊಳ ಹೂಳೆತ್ತಲು ಸವಾಲಾಗಿದ್ದು, ಸರಿಸುಮಾರು 9 ಕೋಟಿ ರೂ. ಅನುದಾನ ಒದಗಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ಜಂಟಿಯಾಗಿ ಸರ್ವೇ ಮಾಡಿ ಕ್ರಮ ಕೈಗೊಂಡಲ್ಲಿ ಈ ಭಾಗದ ನಿವಾಸಿಗಳ ಬಹಳಷ್ಟು ವರುಷಗಳ ಬೇಡಿಕೆ ಈಡೇರಿದಂತಾಗುವುದು.
ದೂರು ಕೇಳಿಬರುತ್ತಿದೆ
ಬೀಜಾಡಿ ಪಡುಕೊಳ ಸುಮಾರು 23 ಎಕರೆ ವಿಸ್ತೀರ್ಣ ಹೊಂದಿದ್ದು, ಅದರ ಹೂಳೆತ್ತಲು ಪಂಚಾಯತ್ ಸಂಪನ್ಮೂಲ ಎಲ್ಲಿಯೂ ಸಾಲದು. ಸಂಪೂರ್ಣವಾಗಿ ಹೂಳು ತುಂಬಿದ್ದು, ವಿವಿದೆಢೆ ಒತ್ತುವರಿ ಆಗಿರುವ ಬಗ್ಗೆ ಕೂಡ ದೂರು ಕೇಳಿಬರುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ವಿವಿಧ ಯೋಜನೆಯಡಿ ಸಂಪನ್ಮೂಲ ಒದಗಿಸಿದಲ್ಲಿ ಹೂಳೆತ್ತುವ ಕೆಲಸ ಮಾಡುತ್ತೇವೆ.
– ಪ್ರಕಾಶ ಜಿ. ಪೂಜಾರಿ, ಅಧ್ಯಕ್ಷರು, ಬೀಜಾಡಿ ಗ್ರಾ.ಪಂ.
-ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಡಂಪಿಂಗ್ ಯಾರ್ಡ್ ಆದ ಮಣ್ಣಪಳ್ಳ!
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.