ಬೇಳೂರು: ಜಲಜೀವ ಮಿಷನ್ ಕ್ರಿಯಾ ಯೋಜನೆ ಗ್ರಾಮಸಭೆ
Team Udayavani, May 19, 2020, 5:37 AM IST
ತೆಕ್ಕಟ್ಟೆ: ಬೇಳೂರು ಗ್ರಾಮ ಪಂಚಾಯತ್‌ನಲ್ಲಿ ಜಲ ಜೀವ ಮಿಷನ್ ಕ್ರಿಯಾ ಯೋಜನೆ ತಯಾರಿ ಬಗ್ಗೆ ವಿಶೇಷ ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷ ಬಿ.ಕರುಣಾಕರ ಶೆಟ್ಟಿ ಅವರು ಅಧ್ಯಕ್ಷತೆಯಲ್ಲಿ ಮೇ 18 ರಂದು ಮಹಾತ್ಮ ಗಾಂಧಿ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾರ್ಗದರ್ಶಿ ಅಧಿಕಾರಿ ತುಳಸಿ ಅವರು ಮಾತನಾಡಿ, ಜಲ ಜೀವ ಮಿಷನ್‌ನ ಮೂಲ ಉದ್ದೇಶವನ್ನು ಎಲ್ಲರೂ ಅರಿಯಬೇಕಾದ ಅಗತ್ಯ ಇದೆ. ನಮಗೆ ಈ ಭೂಮಿಯ ಮೇಲೆ ಜೀವಿಸಲು ಮುಖ್ಯವಾಗಿ ಗಾಳಿ, ನೀರು, ಬೆಳಕು ಮುಂದಿನ ಜನಾಂಗಕ್ಕೆ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಾಕೃತಿಕ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಿಂದ ಪ್ರಕೃತಿಯ ವಿರುದ್ಧ ಸೆಣಸಾಟ ಬಿಟ್ಟು , ಪ್ರಕೃತಿಯೊಂದಿಗೆ ಬೆರೆತು ಬಾಳಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಅರಣ್ಯ ಇಲಾಖಾ ವತಿಯಿಂದ ವಿವಿಧ ಜಾತಿಯ ಗಿಡಗಳನ್ನು ವಿತರಿಸುತ್ತಿದ್ದೇವೆ ಎಂದರು.
ಹಿರಿಯರಾದ ಸೂರ್ಯ ಅಡಿಗ, ಬೇಳೂರು ಆರೋಗ್ಯ ಕೇಂದ್ರದ ಸುನಂದಾ ಮಾತನಾಡಿದರು.ಗ್ರಾ.ಪಂ.ಉಪಾಧ್ಯಕ್ಷೆ ಉಷಾ ಕೊಠಾರಿ, ಗ್ರಾ.ಪಂ. ಸದಸ್ಯರಾದ ಪ್ರಭಾವತಿ ಟಿ.ಶೆಟ್ಟಿ, ಸೀತಾನದಿ ಕರುಣಾಕರ ಶೆಟ್ಟಿ, ಸುರೇಶ್ ಮೊಗವೀರ, ಜಯಶೀಲ ಶೆಟ್ಟಿ , ಪ್ರಭಾವತಿ ಶೆಟ್ಟಿ, ಪಿಡಿಒ ಮಾಧವ, ಮತ್ತಿತರರು ಉಪಸ್ಥಿತರಿದ್ದರು.ಪಿಡಿಒ ಮಾಧವ ಅವರು ಸ್ವಾಗತಿಸಿ, ವಂದಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಂಡ ಗ್ರಾಮಸ್ಥರು !
ಜಗತ್ತಿನಾದ್ಯಂತ ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ ಕೋವಿಡ್ 19 ವೈರಸ್ ತಡೆಗಟ್ಟಲು ಇಡೀ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಬೇಳೂರು ಗ್ರಾಮ ಪಂಚಾಯತ್‌ನಲ್ಲಿ ಜಲ ಜೀವ ಮಿಷನ್ ಕ್ರಿಯಾ ಯೋಜನೆ ತಯಾರಿ ಬಗ್ಗೆ ನಡೆದ ವಿಶೇಷ ಗ್ರಾಮ ಸಭೆಗೆ ಆಗಮಿಸಿದ ಗ್ರಾಮಸ್ಥರು ನಿಯಮಾನುಸಾರವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಿಂದ ಗ್ರಾಮಸ್ಥರು ಆಸೀನರಾಗಲು ಇರಿಸಿದ ಸುಮಾರು 50 ಕುರ್ಚಿಗಳನ್ನು ಸುಮಾರು ಒಂದು ಮೀಟರ್ ಅಂತರದಲ್ಲಿ ಇರಿಸಿರುವುದು ಕಂಡು ಬಂತು.
ಕ್ರಿಯಾಯೋಜನೆ ಸಿದ್ಧ
ಜಲ ಜೀವ ಮಿಷನ್ ಅಡಿಯಲ್ಲಿ ಬೇಳೂರು ಗ್ರಾ. ಪಂ.ವ್ಯಾಪ್ತಿಯ ಭೌಗೋಳಿಕವಾಗಿ ಅಧ್ಯಯನ ನಡೆಸಿ, ಜನಸಂಖ್ಯೆಯ ಆಧಾರದ ಮೇಲೆ ಮುಂದಿನ 30 ವರ್ಷಗಳ ದೂರದೃಷ್ಟಿತ್ವದ ಆಧಾರದ ಮೇಲೆ ಈಗಾಗಲೇ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಸುಮಾರು ರೂ. 2ಕೋಟಿ 45 ಲಕ್ಷದ ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ. ಗ್ರಾ.ಪಂ. ವ್ಯಾಪ್ತಿಯ ಪ್ರತಿಯೊಬ್ಬರು ಕೂಡ ಕಡ್ಡಾಯವಾಗಿ ನೀರಿನ ಸಂಪರ್ಕ ಹೊಂದಲೇ ಬೇಕು ಜತೆಗೆ ಗ್ರಾಮದಲ್ಲಿನ ಮದಗ, ಕೆರೆಗಳ ಹೂಳೆತ್ತುವುದು ಹಾಗೂ ಬಾವಿ ನಿರ್ಮಾಣಗಳು ಈ ಯೋಜನೆಗೆ ಒಳಪಟ್ಟಿದೆ.
-ಬಿ.ಕರುಣಾಕರ ಶೆಟ್ಟಿ, ಅಧ್ಯಕ್ಷರು, ಗ್ರಾ.ಪಂ.ಬೇಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.