Belman: ಸಚ್ಚೇರಿಪೇಟೆಯ ಅಪಾಯಕಾರಿ ಟ್ಯಾಂಕ್ ತೆರವು
ಶಿಥಿಲಗೊಂಡು ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದ್ದ ಟ್ಯಾಂಕ್ಗೆ ಮುಕ್ತಿ ಕಲ್ಪಿಸಿದ ಗ್ರಾ.ಪಂ.
Team Udayavani, Dec 8, 2024, 2:31 PM IST
ಬೆಳ್ಮಣ್: ಸಚ್ಚೇರಿಪೇಟೆಯ ಶಿಥಿಲಗೊಂಡಿದ್ದ ಹಳೆಯ ನೀರಿನ ಟ್ಯಾಂಕನ್ನು ಮುಂಡ್ಕೂರು ಗ್ರಾಮ ಪಂಚಾಯತ್ ಆಡಳಿತ ಸೋಮವಾರ ಕೆಡವಿದೆ.
ಸುದಿನ ವರದಿ
ಈ ನೀರಿನ ಟ್ಯಾಂಕ್ ಬೀಳುವ ಸ್ಥಿತಿಯಲ್ಲಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಹಲವಾರು ವರ್ಷಗಳಿಂದ ಬಿರುಕು ಬಿಟ್ಟಿದ್ದ ಈ ಟ್ಯಾಂಕ್ ಬಗ್ಗೆ ಉದಯವಾಣಿ ಸುದಿನ ಹಲವು ಬಾರಿ ಸಚಿತ್ರ ವರದಿ ಪ್ರಕಟಿಸಿತ್ತು. ಈ ಬಗ್ಗೆ ಕಾಳಜಿ ವಹಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ತುರ್ತು ಕ್ರಮ ಕೈಗೊಂಡು ಟ್ಯಾಂಕ್ ಕೆಡವಿ ಆತಂಕ ದೂರ ಮಾಡಿದ್ದಾರೆ.
ನೂತನ ಟ್ಯಾಂಕ್ ಬಗ್ಗೆ ಸುಳಿವು
ಇದೇ ಜಾಗದಲ್ಲಿ ಜಲಜೀವನ್ ಮಿಶನ್ನ ನೂತನ ಟ್ಯಾಂಕ್ ಶೀಘ್ರದಲ್ಲಿಯೇ ನಿರ್ಮಾಣಗೊಳ್ಳಲಿದೆ ಎಂದು ಪಿಡಿಒ ಸತೀಶ್ ತಿಳಿಸಿದ್ದಾರೆ. ಈಗಾಗಲೇ ಮುಂಡ್ಕೂರು ಗ್ರಾಮ ಪಂಚಾಯತ್ನಲ್ಲಿ 1,650 ಕುಟುಂಬಗಳಿದ್ದು 1,200 ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಲಭ್ಯವಾಗಲಿದೆ ಎಂದೂ ಸತೀಶ್ ತಿಳಿಸಿದರು.
ನಾಗರಿಕರಲ್ಲಿ ಆತಂಕ ಮೂಡಿಸಿದ್ದ ಈ ಶಿಥಿಲಗೊಂಡ ಟ್ಯಾಂಕ್ನ ನೆಲಸಮ ಕಾಮಗಾರಿ ಪ್ರಕ್ರಿಯೆಯ ಬಗ್ಗೆ ಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ಪ ಸಪಳಿಗ, ಪಿಡಿಒ ಸತೀಶ್ ಅವರನ್ನು ಗ್ರಾಮಸ್ಥರು ಶ್ಲಾ ಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ
ಕೊಹ್ಲಿ-ರೋಹಿತ್ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ
Alnavar: ಬೈಕ್- ಓಮಿನಿ ಅಪಘಾತ; ಬೈಕ್ ಸವಾರ ಸಾವು
Mangaluru: ಕರಾವಳಿ ಖಗೋಳ ಉತ್ಸವ; ಉಲ್ಕಾ ತುಣುಕು, ನಕ್ಷತ್ರ ವೀಕ್ಷಣೆ ಅವಕಾಶ
Bajpe: ಇನ್ಮುಂದೆ ದೀಪಗಳಿಂದ ಬೆಳಗಲಿದೆ ವಿಮಾನ ನಿಲ್ದಾಣ ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.