ಬೆಳ್ಮಣ್: ಉದ್ಘಾಟನೆಗೆ ಮುನ್ನವೇ ಕಣ್ಮುಚ್ಚುವುದೇ ನೀರಿನ ಘಟಕ!
2 ರೂ. ನಾಣ್ಯ ಹಾಕಿ ನೀರು ಪಡೆಯುವ ಯೋಜನೆ ಇದು
Team Udayavani, Nov 25, 2024, 1:18 PM IST
ಬೆಳ್ಮಣ್: ಬೆಳ್ಮಣ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಂತ್ರ ರಸ್ತೆಯ ಪಕ್ಕದಲ್ಲಿ ಲಕ್ಷಾಂತರ ರೂ. ವ್ಯಯಿಸಿ ನಿರ್ಮಿಸಿದ ಕುಡಿಯುವ ನೀರಿನ ಘಟಕ ಇನ್ನೂ ಉದ್ಘಾಟನೆಗೊಳ್ಳದೆ ನೇಪಥ್ಯಕ್ಕೆ ಸೇರುವ ಎಲ್ಲ ಲಕ್ಷಣಗಳನ್ನು ಹೊಂದಿದೆ.
ಜಿ.ಪಂ.ನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಕಾರ್ಕಳ ತಾ.ಪಂ. ಹಾಗೂ ಬೆಳ್ಮಣ್ ಗ್ರಾ.ಪಂ.ಗಳ ಸಹಯೋಗದ ಉಲ್ಲೇಖೀತ ಫಲಕ ಇರುವ ಈ ಯೋಜನೆಯಲ್ಲಿ 2016-17ನೇ ಸಾಲಿನಲ್ಲಿ ನಿರ್ಮಾಣಗೊಂಡಿದೆ ಎಂದು ಬರೆಯಲಾಗಿದೆ. ಆದರೆ, ಉದ್ಘಾಟನೆ ಮಾತ್ರ ಇನ್ನೂ ಆಗಿಲ್ಲ.
ಏನಿದು ಯೋಜನೆ?
ಬೆಳ್ಮಣ್ ಜಂತ್ರ ಪರಿಸರದ ಸುಮಾರು 15 ಕೊರಗ ಕುಟುಂಬಗಳ ಕುಡಿಯುವ ನೀರಿಗಾಗಿ ಈ ಯೋಜನೆಯನ್ನು ಉಡುಪಿಯ ಕೆಆರ್‌ಡಿಎಲ್ ಅನುಷ್ಠಾನಗೊಳಿಸಿತ್ತು. 2 ರೂ. ನಾಣ್ಯ ಹಾಕಿ ನೀರು ಪಡೆಯುವ ಯೋಜನೆ ಇದು. ಆದರೆ ಇಲ್ಲಿನ ಕೊರಗ ಕುಟುಂಬಗಳ ಮಂದಿ ಇಲ್ಲಿ ಪೂರೈಕೆಯಾಗುವ ನೀರನ್ನು ತಮ್ಮ ಕಾಲನಿಯ ಓವರ್ ಹೆಡ್ ಟ್ಯಾಂಕ್‌ಗೆ ಹಾಯಿಸಿ
ಬಳಸುತ್ತಿರುವುದರಿಂದ ಈ ಯೋಜನೆ ನನೆಗುದಿಗೆ ಬಿದ್ದಿದೆ. ಇತ್ತೀಚೆಗೆ ಬೆಳ್ಮಣ್ ಗೆ ಬಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಈ ಕಟ್ಟಡದ ಮುರಿದ ಬಾಗಿಲುಗಳನ್ನು ಸರಿಪಡಿಸಿ ದುರಸ್ತಿ ನಡೆಸಿದ್ದರೂ ಈ ಯೋಜನೆಯ ನೀರು ಉಪಯೋಗವಾಗಲೇ ಇಲ್ಲ.
ಗ್ರಾಮ ಸಭೆಯಲ್ಲಿ ಚರ್ಚೆ
ಜಂತ್ರ ಭಾಗಕ್ಕೆ ಅನಾವಶ್ಯಕವಾಗಿರುವ ಈ ಯೋಜನೆಯನ್ನು ಬೆಳ್ಮಣ್ ಪೇಟೆಗೆ ವರ್ಗಾಯಿಸಿ ಸದುಪಯೋಗ ಮಾಡುವ ಬಗ್ಗೆ ಸಲಹೆಗಳು ಕೇಳಿ ಬಂದಿದ್ದರೂ ಯೋಜನೆ ಕೊರಗ ಸಮುದಾಯದ ಬಳಕೆಯದಾದ್ದರಿಂದ ಚರ್ಚೆಯೂ ನೇಪಥ್ಯಕ್ಕೆ ಸರಿಯಿತು. ಒಟ್ಟಾರೆಯಾಗಿ ಸಾರ್ವಜನಿಕರ ತೆರಿಗೆ ಹಣ ಈ ರೀತಿಯಲ್ಲೂ ಪೋಲಾಗುತ್ತದಲ್ಲವೇ ಎಂಬ ಅಳಲು ಬೆಳ್ಮಣ್ ಭಾಗದ
ಸಾರ್ವಜನಿಕರದ್ದು.
ಸ್ಥಳಾಂತರ ಕಷ್ಟ
ಈ ಯೋಜನೆ ಕೊರಗರಿಗಾಗಿಯೇ ರೂಪಿತವಾಗಿದ್ದು ಸ್ಥಳಾಂತರ ಕಷ್ಟ. ಜಿಲ್ಲೆಯ ಇತರೆಡೆ ಉತ್ತಮವಾಗಿ ಉಪಯೋಗವಾಗುತ್ತಿದೆ.
*ಮಮತಾ ಶೆಟ್ಟಿ,
ಪಿಡಿಒ ಬೆಳ್ಮಣ್
ಕ್ರಮ ಕೈಗೊಳ್ಳಿ
ಸದ್ಬಳಕೆಯ ಬಗ್ಗೆ ಪಂಚಾಯತ್ ತುರ್ತು ಕ್ರಮ ಕೈಗೊಳ್ಳಬೇಕು. ಅಗತ್ಯ ಬೇಡಿಕೆಯಾಗಿರುವ ನೀರಿನ ಪೂರೈಕೆ ಉತ್ತಮವಾಗಿರಲಿ.
*ಕ್ಸೇವಿಯರ್ ಡಿ’ಮೆಲ್ಲೋ,
ತಾ.ಪಂ. ಮಾಜಿ ಸದಸ್ಯರು
*ಶರತ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.