ಬಳ್ಕೂರು: ಉಪಯೋಗಕ್ಕಿಲ್ಲದೆ ನೆನಪಿನಂಚಿಗೆ ಸರಿದ ಗೋಮಾಳ
Team Udayavani, May 7, 2019, 6:10 AM IST
ಬಸ್ರೂರು: ಕುಂದಾಪುರ ತಾಲೂಕಿನ ಬಳ್ಕೂರಿನ ಸ. ನಂ.66/2 ರಲ್ಲಿ ವಿಸ್ತಾರವಾಗಿ ಹಚ್ಚ ಹಸಿರಿನಿಂದ ಹರಡಿಕೊಂಡಿದ್ದ ಗೋಮಾಳ ಈಗ ಒಣಗಿ, ಹುಲ್ಲು ಸಹ ಇಲ್ಲದೆ ಕೇವಲ ನೆನಪಿನಲ್ಲಿ ಮಾತ್ರ ಉಳಿಯುವ ಸ್ಥಿತಿಗೆ ಬಂದು ತಲುಪಿದೆ. ಈ ಪ್ರದೇಶ ಮತ್ತೆ ಮರುಜೀವ ಪಡೆಯುವುದೇ ಎಂಬ ಕಾತರ ಗ್ರಾಮಸ್ಥರದ್ದು.
ಸಾಕ್ಷಿಗಲ್ಲು
ಸುಮಾರು 90 ವರ್ಷಗಳ ಹಿಂದೆ 30 ಎಕರೆಗಳಿಗೂ ಹೆಚ್ಚು ವಿಸ್ತಾರವಾಗಿದ್ದ ಈ ಗೋಮಾಳದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಗಾಂಧಿ ರಾಮಣ್ಣ ಶೆಟ್ಟಿ ಅವರು ದನ ಕರುಗಳ ಮೈಯುಜ್ಜಲು ಹಾಕಿದ್ದ ಒಂದು ಎತ್ತರದ ಶಿಲೆಗಲ್ಲು ಮಾತ್ರ ಇಲ್ಲಿ ಉಳಿದಿದೆ.
ಉಳಿದದ್ದು 3 ಎಕರೆ
ಗೋಮಾಳ ಜಾಗದ ಬಹುತೇಕ ಕಡೆಗಳಲ್ಲಿ ಮನೆ ನಿರ್ಮಾಣವಾಗಿ ಅವರಿಗೆ ವಾಸಸ್ಥಳದ ಹಕ್ಕು ಪತ್ರವೂ ಸಿಕ್ಕಿದೆ. ಪ್ರಸ್ತುತ ಈ ಗೋಮಾಳದಲ್ಲಿ ಉಳಿದುಕೊಂಡಿರುವುದು ಕೇವಲ ಮೂರು ಎಕರೆ ಜಾಗ! ಈ ಜಾಗ ಕಂದಾಯ ಇಲಾಖೆಗೆ ಒಳಪಟ್ಟಿದೆ.
ಆಟದ ಮೈದಾನ
ಇಲ್ಲೊಂದು ವಾಲಿಬಾಲ್ ಕ್ರೀಡಾಂಗಣವಿದೆ. ಹುಡುಗರು ಸಂಜೆ ವೇಳೆ ವಾಲಿಬಾಲ್ ಆಡುತ್ತಾರೆ. ಈ ಮೈದಾನವನ್ನು ಒಂದು ಉತ್ತಮ ಕ್ರೀಡಾಂಗಣವನ್ನಾಗಿಸಬಹುದು. ಈ ಬಗೆಗೆ ಪಿಡಿಒ ಅವರಲ್ಲಿ ಮಾತನಾಡಿದರೆ ಅವರು ಈಗಾಗಲೇ ಬೇರೊಂದು ಮೈದಾನಕ್ಕೆ ಕ್ರೀಡಾಂಗಣದ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಇದನ್ನು ಕ್ರೀಡಾಂಗಣ ಮಾಡಲು ಅನುದಾನ ಸಾಲದು ಎನ್ನುತ್ತಾರೆ.
ಮರುಜೀವ ಸಾಧ್ಯ
ಇಲಾಖೆ ಮನಸ್ಸು ಮಾಡಿದರೆ ಈ ಜಾಗವನ್ನು ಪುನ: ಗೋಮಾಳವನ್ನಾಗಿ ಮಾಡಲು ಸಾಧ್ಯ.ಇಲ್ಲಿನ ಒಣಗಿದ ನೆಲದ ಮೇಲೆ ಉತ್ತಮವಾದ ಹುಲ್ಲಿನ ಬೀಜವನ್ನು ಹಾಕಿ ನೀರು ಬಿಟ್ಟರೆ ಅಲ್ಲಿ ಹುಲ್ಲು ಹುಟ್ಟಿ ಅವನ್ನು ಮೇಯಲು ದನ ಕರುಗಳು ಬರುತ್ತವೆ. ಸ್ಥಳೀಯಾಡಳಿತ ಈ ಬಗ್ಗೆ ಮನಸ್ಸು ಮಾಡಬೇಕು ಅಷ್ಟೆ
-ನಾಗರಾಜ ಪೂಜಾರಿ, ಸ್ಥಳೀಯ ನಿವಾಸಿ
ಕ್ರೀಡಾಂಗಣ ನಿರ್ಮಿಸಿ
ಬಳ್ಕೂರಿನಲ್ಲಿ ಈಗಾಗಲೇ 90 ದನಕರುಗಳಿವೆ. ಪ್ರತಿದಿನ 600 ಲೀಟರ್ ಹಾಲನ್ನು ಡೇರಿಯಲ್ಲಿ ತೆಗೆದುಕೊಳ್ಳುತ್ತಿದ್ದೇವೆ. ಉಳಿದಂತೆ ನೋಡಿದರೆ ಈ ಗೋಮಾಳ ಹಳೆ ಕುರುಹಿನ ನೆನಪು ಮಾತ್ರವಾಗಿ ಉಳಿದುಕೊಳ್ಳುತ್ತದೆ. ಒಂದು ಉತ್ತಮ ವಾಲಿಬಾಲ್ ಕ್ರೀಡಾಂಗಣ ನಿರ್ಮಿಸಿದರೆ ಗ್ರಾಮೀಣ ಪ್ರದೇಶದ ಉತ್ತಮ ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರಬಹುದು
-ನಾಗೇಶ್ ಎಸ್., ಅಧ್ಯಕ್ಷರು, ಬಳ್ಕೂರು ಹಾ.ಉ. ಸಂಘ, ಬಳ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.