ಪ್ರಗತಿಯಲ್ಲಿ ಬೋಳ್ಕಟ್ಟೆ – ಕಂಡ್ಲೂರು ರಸ್ತೆ ಕಾಮಗಾರಿ
Team Udayavani, May 29, 2020, 5:37 AM IST
ಬಸ್ರೂರು: ಬೋಳ್ಕಟ್ಟೆ -ಕಂಡ್ಲೂರು ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, 45 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.
ಗುಲ್ವಾಡಿ ವೆಂಟೆಡ್ ಡ್ಯಾಮ್‌ನಿಂದ ಮಾವಿನ ಕಟ್ಟೆಯವರೆಗೆ ಈಗಾಗಲೇ 4 ಕಿ.ಮೀ.ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಮಾವಿನಕಟ್ಟೆಯಿಂದ ತುಸು ಹಿಂದೆ ಬೋಳ್ಕಟ್ಟೆ ಕ್ರಾಸ್‌ನಿಂದ ಸೌಕೂರು ಮತ್ತು ಕಂಡ್ಲೂರಿಗೆ ಹೋಗುವ ರಸ್ತೆಗೆ ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಅವರ ಮುತುವರ್ಜಿಯಲ್ಲಿ 45 ಲಕ್ಷ ರೂ. ಅನುದಾನ ಮಂಜೂರಾಗಿದೆ. ಸುಮಾರು ನಾಲ್ಕು ಕಿ.ಮೀ. ಉದ್ದದ ಈ ರಸ್ತೆಯ ಕಾಮಗಾರಿ ಈಗ ಪ್ರಗತಿಯಲ್ಲಿದೆ.
ಆದರೆ ಬೋಳ್ಕಕಟ್ಟೆಯ ತಿರುವಿನಿಂದ ಕಾಂಕ್ರೀಟ್ ಹಾಕಲಾದ ಕಂಡೂÉರು ರಸ್ತೆಯಲ್ಲಿ ತುಸು ಮುಂದೆ ಹೋದರೆ ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಹೋಗುವ ಒಂದು ತಿರುವಿದೆ. ಸುಮಾರು 200 ಮೀ. ದೂರದ ಈ ರಸ್ತೆಯಲ್ಲಿ ಜಲ್ಲಿಕಲ್ಲುಗಳು ಎದ್ದು ಬಂದಿದ್ದು, ಭಕ್ತರಿಗೆ ಸಂಚಾರ ಅಸಾಧ್ಯವಾಗಿದೆ. ಸೌಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕಂಡೂÉರು ಮಾರ್ಗವಾಗಿ ಹೋಗು ವವರಿಗೆ ಈ ನೂತನ ರಸ್ತೆಯಿಂದ ಅನು ಕೂಲವಾಗಲಿದೆ.
ಮಾವಿನಕಟ್ಟೆಯಿಂದ ಸೌಕೂರು ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಈಗಾಗಲೇ ಕಾಂಕ್ರೀಟ್ ಹಾಕಲಾಗಿದೆ. ಈ ಮಾರ್ಗದಲ್ಲಿ ಬಸ್ ಸಂಚಾರ ಮಾತ್ರ ಇನ್ನೂ ಆರಂಭವಾಗಿಲ್ಲ. ಮಾತ್ರವಲ್ಲ ಈಗ ನಿರ್ಮಾಣವಾಗುತ್ತಿರುವ ಬೋಳ್ಕಕಟ್ಟೆ- ಕಂಡ್ಲೂರು ರಸ್ತೆಯಲ್ಲಿಯೂ ಬಸ್ ಸಂಚಾರ ಆರಂಭವಾದರೆ ಸೌಕೂರು ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಅನುಕೂಲವಾಗಲಿದೆ. ಕುಂದಾಪುರದಿಂದ ಮಾವಿನಕಟ್ಟೆಯ ಮೂಲಕ ಗುಲ್ವಾಡಿಗೆ ಹೋಗುವ ಬಸ್ ಒಂದು ಈಗಾಗಲೇ ಈ ಮಾರ್ಗದಲ್ಲಿ ಸಂಚರಿಸುತ್ತಿದೆ. ಮುಂದೆ ಬಸ್ ಮಾವಿನಕಟ್ಟೆಯಿಂದ ಸೌಕೂರು ದೇವಸ್ಥಾನದವರಗೆ ಓಡಿಸಿದರೆ ಭಕ್ತರಿಗೆ ಅನುಕೂಲವಾಗುತ್ತದೆ ಎನ್ನುವುದು
ಜನರ ಅಭಿಪ್ರಾಯ.
ಬಸ್ ಸಂಚರಿಸಲಿ
ನಾನು ಬೋಳ್ಕಕಟ್ಟೆಯ ನಿವಾಸಿಯಾಗಿದ್ದು, ಈಗಾಗಲೇ ಮಾವಿನಕಟ್ಟೆಯಿಂದ ಗುಲ್ವಾಡಿಗೆ ಬಸ್ ಸಂಚರಿಸುತ್ತಿದ್ದು ಈಗ ಲಾಕ್ ಡೌನ್ ಕಾರಣ ನಿಂತಿದೆ. ಈ ಬಸ್ ಸೌಕೂರಿನವರೆಗೂ ಸಂಚರಿಸಿದರೆ ಇಲ್ಲಿಗೆ ಬರುವ ಭಕ್ತರಿಗೆ ಅನುಕೂಲವಾಗುತ್ತದೆ. ಬೋಳ್ಕಕಟ್ಟೆ- ಕಂಡ್ಲೂರು ರಸ್ತೆ ಕಾಮಗಾರಿ ಪೂರ್ಣವಾದ ಮೇಲೆ ಈ ಮಾರ್ಗದಲ್ಲೂ ಬಸ್ ಸಂಚರಿಸಿದರೆ ಸೌಕೂರಿಗೆ ಬರುವ ಭಕ್ತರಿಗೆ ಮತ್ತಷ್ಟು ಅನುಕೂಲವಾಗುತ್ತದೆ.
-ನಾಗರಾಜ ಪೂಜಾರಿ, ಬೋಳ್ಕಕಟ್ಟೆ ನಿವಾಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.