ಬ್ರಹಾವರ: ಹೆದ್ದಾರಿ ಇಕ್ಕೆಲದಲ್ಲಿ ಕೆಸರು ಸಂಕಷ್ಟದಲ್ಲಿ ಜನರು
Team Udayavani, Jul 10, 2024, 5:33 PM IST
ಬ್ರಹ್ಮಾವರ (ಸಾಸ್ತಾನ):ಬ್ರಹ್ಮಾವರ ನಗರದ ಬಹಳಷ್ಟು ಜನನಿಬಿಡ ಪ್ರದೇಶ ಸ್ಥಳ ಹಾಗೂ ಶಾಲಾ ಕಾಲೇಜು, ಆಸ್ಪತ್ರೆ, ಸಭಾಂಗಣಗಳ ಕೇಂದ್ರ ಸ್ಥಳದ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಕೆಸರುಮಯವಾಗಿದ್ದು, ಸ್ಥಳೀಯ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಪಾದಚಾರಿಗಳು ಹೆದ್ದಾರಿ ಮೇಲೆ ಸಂಚರಿಸಬೇಕಾದ ಅನಿವಾರ್ಯತೆ ಬಂದಿದೆ.
ಈ ಸಮಸ್ಯೆಗಳಿಗೆ ಮುಖ್ಯವಾಗಿ ಇಲ್ಲಿ ಸರ್ವಿಸ್ ರಸ್ತೆಯ ನಿರ್ಮಾಣದ ವಿಳಂಬ ನೀತಿಯೇ ಕಾರಣವಾದರೆ ಈ ಹೆದ್ದಾರಿಯ ಇಕ್ಕೆಲಗಳಲ್ಲಿ ರಸ್ತೆ ಕೆಸರು ಮಯವಾಗಿರುವುದರಿಂದ ಜನರು ಅಪಾಯವನ್ನು ಎದುರಿಸಬೇಕಾಗಿದೆ.
ಅಪಾಯಕಾರಿ ಜಂಕ್ಷನ್
ಕುಂದಾಪುರದ ಕಡೆಯಿಂದ ಬ್ರಹ್ಮಾವರದ ಶಾಲಾ ಕಾಲೇಜು ಹಾಗೂ ಇತರ ಸಂಸ್ಥೆಗಳಿಗೆ ತೆರಳಬೇಕಾದ ವಾಹನಗಳು ಈ ಭಾಗದಲ್ಲಿ ಇರುವ ಜಂಕ್ಷನ್ ಮೂಲಕ ತಿರುವು ಪಡೆದು ವಿರುದ್ದ ದಿಕ್ಕಿನಲ್ಲಿ ಸಂಚರಿಸಬೇಕಾಗಿರುವುದರಿಂದ ಈ ಭಾಗದಲ್ಲಿ ಹೆಚ್ಚು ಆಪಘಾತಗಳು ಸಂಭವಿಸುತ್ತಲಿದೆ. ಈ ಭಾಗದಲ್ಲಿ ಇರಿಸಲಾದ ವಾಹನ ತಡೆ ಬ್ಯಾರಿಕೇಡ್‌ಗಳು ಕೆಲವೊಮ್ಮೆ ದ್ವಿಚಕ್ರವಾಹನ ಸವಾರರಿಗೆ ಅಪಾಯವನ್ನು ತಂದೊಡ್ಡಿದ ಘಟನೆಗಳು ನಡೆದಿದೆ.
ಸರ್ವಿಸ್ ರಸ್ತೆಯ ನಿರ್ಮಾಣಕ್ಕೆ ಬೇಡಿಕೆ ಈ ಭಾಗದಲ್ಲಿ ಸರ್ವಿಸ್ ರಸ್ತೆ ನಿರ್ಮಾಣವಾಗದೆ ಇರುವುದು ಮತ್ತು ರಾ.ಹೆ.ಪಕ್ಕದ ಮಾರ್ಗಗಳ ಪಕ್ಕದಲ್ಲಿ ಮಾರ್ಗಗಳು ಕೆಸರು ಹೊಂಡಗಳಾಗಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ದಿನವೂ ಸಂಕಷ್ಟ ಅನುಭವಿಸುವಂತಾಗಿದೆ.
ಉಡುಪಿ, ಕುಂದಾಪುರ ಕಡೆಗೆ ಬರುವ ಆಟೋ ರಿಕ್ಷಾ , ಬೈಕ್, ಕಾರು, ಸರಕು ಸಾಗಣೆ ವಾಹನಗಳು ವಿರುದ್ಧ ದಿಕ್ಕಿ ನಲ್ಲಿ ಬಂದು ಜಂಕ್ಷನ್ ಬಳಿ ತಿರುವು ತೆಗೆದುಕೊಂಡು ಚಲಿಸುವುದರಿಂದ ಈ ಭಾಗದಲ್ಲಿ ನಿತ್ಯವೂ ಅಪಘಾತಗಳು ಸಂಭವಿಸುತ್ತಿದೆ. ಸರ್ವೀಸ್ ರಸ್ತೆ ಇಲ್ಲದ ಕಾರಣ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದು ಅಪಘಾತಗಳು ಯಾವಾಗಲೂ ಸಂಭವಿಸುತ್ತಿವೆ. ಈ ಭಾಗದಲ್ಲಿ ಖಾಸಗಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ಬ್ಯಾಂಕ್, ಎಲ್.ಐ.ಸಿ. ಕಚೇರಿಗಳು ಇದ್ದು , ಹೆಚ್ಚು ಜನ ಸಂಚಾರ ಇರುವುದರಿಂದ ಈ ಭಾಗದಲ್ಲಿ ರಾ.ಹೆ. ಪಕ್ಕದ ಮಾರ್ಗಗಳು ಹಾಗೂ ಚರಂಡಿ ವ್ಯವಸ್ಥೆಗಳ ಅನಿವಾರ್ಯತೆ ಇದೆ ಎನ್ನುವುದು ಹಾಗು ವಿರುದ್ಧ
ದಿಕ್ಕಿನ ವಾಹನ ಸಂಚಾರದ ತಡೆಗೆ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸ್ಥಳೀಯರ ಬೇಡಿಕೆಯಾಗಿದೆ.
ಅವ್ಯವಸ್ಥೆ ಆಗದಂತೆ ಸೂಕ್ತ ಕ್ರಮ
ಹೆದ್ದಾರಿ ಅವ್ಯವಸ್ಥೆ , ಪಕ್ಕದ ಸರ್ವಿಸ್ ರಸ್ತೆಯ ಕುರಿತು ಈಗಾಗಲೇ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಟೋಲ್ ನಿರ್ವಾಹಕ ಪ್ರಮುಖರ ಗಮನಕ್ಕೆ ತರಲಾಗಿದ್ದು ಅವರು ಕೂಡಲೇ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಹೆದ್ದಾರಿಯಲ್ಲಿ ನೀರು ಶೇಖರಣೆ ಹಾಗೂ ಪಕ್ಕದ ಸ್ಥಳದಲ್ಲಿ ಇಂತಹ ಅವ್ಯವಸ್ಥೆಗಳು ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
ದಿವಾಕರ್,, ಪೊಲೀಸ್ ವೃತ್ತ ನಿರೀಕ್ಷಕರು, ಬ್ರಹ್ಮಾವರ
ಕಾಳಜಿ ವಹಿಸುವುದು ಅಗತ್ಯ
ಬ್ರಹ್ಮಾವರದ ಸರ್ವಿಸ್ ರಸ್ತೆ ಮಹೇಶ್ ಆಸ್ಪತ್ರೆ ಬಳಿ ತನಕ ಮಾತ್ರ ಇದ್ದು ಅಲ್ಲೇ 100 ಮೀಟರ್ ಮುಂದಕ್ಕೆ ಎಸ್. ಎಂ. ಕಾಲೇಜು, ಚರ್ಚ್ ಹಾಗೂ ಸಭಾಭವನಗಳಿಗೆ ದಿನಕ್ಕೆ ಕನಿಷ್ಠ 1500ಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತದೆ. ಈ ಹೆದ್ದಾರಿ ಪಕ್ಕದಲ್ಲಿ ಓಡಾಟ ನಡೆಸುವ ಸಾವಿರಾರು ವಿದ್ಯಾರ್ಥಿಗಳು, ಸಿಬಂದಿಗೆ ರಸ್ತೆ ಪಕ್ಕದ ಅವ್ಯವಸ್ಥೆ ತೊಂದರೆ ಉಂಟಾಗಿದೆ. ರಸ್ತೆ ಪಕ್ಕದ ಸ್ಥಳವನ್ನು ರಸ್ತೆಯ ಬಗ್ಗೆ ಕಾಳಜಿ ವಹಿಸಬೇಕಾದ ತುರ್ತು ಅಗತ್ಯ ಇದೆ .
*ಆಲ್ವಿನ್ ಅಂದ್ರಾದೆ ,
ಕಾರ್ಯದರ್ಶಿ ಹೆದ್ದಾರಿ ಜಾಗೃತಿ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.