ಬ್ರಹ್ಮಾವರ ತಾ| ಕೋರ್ಟ್ ಸ್ಥಾಪನೆಗೆ ಹೆಚ್ಚಿದ ಒತ್ತಡ; ಸರಕಾರದಿಂದ ಅನುಮೋದನೆ ನಿರೀಕ್ಷೆ
Team Udayavani, Feb 5, 2022, 5:07 PM IST
ಕೋಟ: ಬ್ರಹ್ಮಾವರ ತಾ| ಕೇಂದ್ರವಾಗಿ ಘೋಷಣೆಯಾಗಿ ಐದು ವರ್ಷ ಹತ್ತಿರವಾಗುತ್ತಿದೆ. ಹೀಗಾಗಿ ತಾಲೂಕು ಕೇಂದ್ರದ ಅಗತ್ಯ ಸೌಲಭ್ಯಗಳಲ್ಲಿ ಒಂದಾದ ತಾ| ನ್ಯಾಯಾಲಯ ಸ್ಥಾಪನೆ ಶೀಘ್ರವಾಗಿ ಆಗಬೇಕು ಎನ್ನುವ ಬೇಡಿಕೆ ಇದೀಗ ಹೆಚ್ಚಿದ್ದು, ಈ ಬಗ್ಗೆ ಪೂರಕ ತಯಾರಿ ಆರಂಭ ಗೊಂಡಿದೆ.
2017ರ ಮಾರ್ಚ್ ಬಜೆಟ್‌ನಲ್ಲಿ ಬ್ರಹ್ಮಾವರ ಸೇರಿದಂತೆ 49 ಹೊಸ ತಾಲೂಕುಗಳ ಘೋಷಣೆ ಮಾಡಲಾಗಿತ್ತು. ಅನಂತರತಾ| ಕೇಂದ್ರಕ್ಕೆ ಅಗತ್ಯವಿರುವ ಒಂದೊಂದೆ ಬೇಡಿಕೆಗಳು ಕಾರ್ಯಗತವಾಗುತ್ತಿದೆ. ಹೀಗಾಗಿ ಮುಂದಿನ ಹಂತದಲ್ಲಿ ತಾ| ಕೋರ್ಟ್‌ನ ಬೇಡಿಕೆಯನ್ನು ಸರಕಾರ ಈಡೇರಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.
ವಕೀಲರಿಂದ ಸಭೆ
ತಾಲೂಕು ಕೋರ್ಟ್ ರಚನೆಯ ಹೋರಾಟ ಚುರುಕುಗೊಳಿಸುವ ನಿಟ್ಟಿನಲ್ಲಿ ಉಡುಪಿ ವಕೀಲರ ಸಂಘದ ಅಧ್ಯಕ್ಷರಾದ ನಾಗರಾಜ್ ಮಾಲ್ತಾರು ಹಾಗೂ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ನಿರಂಜನ್ ಹೆಗ್ಡೆ, ಕಾರ್ಕಳದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಈಗಾಗಲೇ ವಕೀಲರು ಸಭೆ ನಡೆಸಿದ್ದು, ಬ್ರಹ್ಮಾವರ ವಕೀಲರ ಸಮಿತಿ ಎನ್ನುವ ಸಂಸ್ಥೆಯನ್ನು ಕಾಡೂರು ಪ್ರವೀಣ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ರಚಿಸಿದ್ದಾರೆ. ಈ ಸಮಿತಿಯ ನೇತೃತ್ವದಲ್ಲಿ ಮುಂದಿನ ಹೋರಾಟಗಳು ನಡೆಯಲಿದೆ.
52 ಗ್ರಾಮಗಳ ವ್ಯಾಪ್ತಿ
ಬ್ರಹ್ಮಾವರ ತಾ| ಕೇಂದ್ರವು ಬ್ರಹ್ಮಾವರ ಹಾಗೂ ಕೋಟ ಹೋಬಳಿಗಳನ್ನು ಒಳಗೊಂಡಿದೆ. ಬ್ರಹ್ಮಾವರ ಹೋಬಳಿಯ ನಾಲ್ಕೂರು, ನಂಚಾರು, ಕುದಿ, ಕೆಂಜೂರು, ಪೆಜಮಂಗೂರು, ಹೊಸೂರು, ಹಲುವಳ್ಳಿ, ಹಾವಂಜೆ, ಚೇರ್ಕಾಡಿ, ಉಪ್ಪೂರು, ಹೇರೂರು, ಆರೂರು, ನೀಲಾವರ, ಚಾಂತಾರು, ಮಟಪಾಡಿ, ಹಂದಾಡಿ, ಕುಮ್ರಗೋಡು, ವಾರಂಬಳ್ಳಿ, ಹಾರಾಡಿ, ಬೆ„ಕಾಡಿ ಗ್ರಾಮಗಳು ಹಾಗೂ ಕೋಟ ಹೋಬಳಿಯ ಮಣೂರು, ಕೋಟತಟ್ಟು, ಗಿಳಿಯಾರು, ಪಾಂಡೇಶ್ವರ, ಮೂಡಹಡು, ಕೋಡಿ, ಐರೋಡಿ, , ವಡ್ಡರ್ಸೆ, ಅಚ್ಲಾಡಿ, ಬನ್ನಾಡಿ, ಕಾವಡಿ, ಶಿರಿಯಾರ, ಕಾಡೂರು, ನಡೂರು, ಹೇರಾಡಿ, ಯಡ್ತಾಡಿ, ವಂಡಾರು, ಆವರ್ಸೆ, ಕಕ್ಕುಂಜೆ, ಹಿಲಿಯಾಣ, ಹೆಗ್ಗುಂಜೆ, ಶಿರೂರು, ಬಿಲ್ಲಾಡಿ, ಹನೆಹಳ್ಳಿ, ಕಚ್ಚಾರು, ಹೊಸಾಳ ಹಾಗೂ ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಕಾರ್ಕಡ, ಗುಂಡ್ಮಿ, ಚಿತ್ರಪಾಡಿ, ಪಾರಂಪಳ್ಳಿ ಗ್ರಾಮಗಳು ಬ್ರಹ್ಮಾವರ ತಾ| ನ್ಯಾಯಾಲಯದ ವ್ಯಾಪ್ತಿಗೆ ಒಳಪಡಲಿದೆ.
ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ 2.5 ಲಕ್ಷ ಜನಸಂಖ್ಯೆ ಇದ್ದು, ಈ ವ್ಯಾಪ್ತಿಯ ಜನರು ಕಾನೂನಿಗೆ ಸಂಬಂಧಿಸಿದ ಪ್ರಕ್ರಿಯೆಗಳಿಗೆ ಪ್ರಸ್ತುತ ಕುಂದಾಪುರ, ಉಡುಪಿ ನ್ಯಾಯಾಲಯವನ್ನು ಅವಲಂಬಿಸಿದ್ದಾರೆ. ಹೀಗಾಗಿ ಬ್ರಹ್ಮಾವರದಲ್ಲಿ ನ್ಯಾಯಾಲಯ ಸ್ಥಾಪನೆಯಾದಲ್ಲಿ ಇವರಿಗೆ ಸಾಕಷ್ಟು ಅನುಕೂಲವಾಗಲಿದೆ.
ಎಲ್ಲಿ ನಿರ್ಮಾಣವಾಗುತ್ತದೆ?
ಬ್ರಹ್ಮಾವರ ಪ್ರವಾಸಿ ಮಂದಿರದ ಸಮೀಪ ನಿರ್ಮಾಣಗೊಳ್ಳುತ್ತಿರುವ ಮಿನಿ ವಿಧಾನಸೌಧದ ಪಕ್ಕದಲ್ಲೇ 6 ಎಕ್ರೆ ಜಾಗವನ್ನು ನ್ಯಾಯಾಲಯ ಸಂಕೀರ್ಣ ಹಾಗೂ ವಸತಿ ಗೃಹ ನಿರ್ಮಾಣಕ್ಕಾಗಿ ಮೀಸಲಿರಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಸಂಚಾರಿ ಪೀಠದ ಬೇಡಿಕೆ
ಪೂರ್ಣ ಪ್ರಮಾಣದ ನ್ಯಾಯಾಲಯ ಸ್ಥಾಪನೆಗೆ ಅನುಮತಿ ದೊರೆತು, ಕಟ್ಟಡ ನಿರ್ಮಾಣಗೊಂಡು ನ್ಯಾಯಾಲಯ ಕಾರ್ಯಾರಂಭಗೊಳ್ಳಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ. ಆದ್ದರಿಂದ ಮೊದಲಿಗೆ ಸಂಚಾರಿ ಪೀಠವನ್ನು ಆರಂಭಿಸಿ, ಬಾಡಿಗೆ ಕಟ್ಟಡದಲ್ಲಿ ಇದರ ಕಾರ್ಯನಿರ್ವಹಣೆ ಆರಂಭಿಸಬೇಕು ಎನ್ನುವ ಬೇಡಿಕೆ ಇದೆ.
ಸರಕಾರಕ್ಕೆ ಒತ್ತಡ
ಈ ಬಗ್ಗೆ ಈಗಾಗಲೇ ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಶೀಘ್ರದಲ್ಲಿ ಈಡೇರುವ ಭರವಸೆ ಇದೆ. ಪೂರ್ಣಪ್ರಮಾಣದ ನ್ಯಾಯಾಲಯ ಮಂಜೂರು ವಿಳಂಬವಾದಲ್ಲಿ ಸಂಚಾರಿ ಪೀಠವನ್ನು ಶೀಘ್ರ ಆರಂಭಿಸುವಂತೆ ಒತ್ತಡ ಹೇರಲಾಗುವುದು
-ರಘುಪತಿ ಭಟ್,
ಶಾಸಕರು, ಉಡುಪಿ ವಿಧಾನಸಭಾ ಕ್ಷೇತ್ರ
ಪೂರಕ ತಯಾರಿ
ಬೇರೊಂದು ಉದ್ದೇಶಕ್ಕೆ ಮೀಸಲಿರಿಸಿದ 6 ಎಕ್ರೆ ಜಾಗವನ್ನು ವಾಪಾಸು ಪಡೆದು ನ್ಯಾಯಾಲಯ ಸಂಕೀರ್ಣ, ವಸತಿಗೃಹ ನಿರ್ಮಾಣಕ್ಕೆ ಮೀಸಲಿಡಲಾಗುತ್ತಿದೆ ಹಾಗೂ ಕಂದಾಯ ಇಲಾಖೆಯಿಂದ ಕೋರ್ಟ್ ಸ್ಥಾಪನೆಗೆ ಅಗತ್ಯವಿರುವ ಎಲ್ಲ ಸಹಕಾರ ನೀಡಲಾಗುತ್ತದೆ.
-ರಾಜಶೇಖರ್‌ಮೂರ್ತಿ, ಬ್ರಹ್ಮಾವರ ತಹಶೀಲ್ದಾರರು
-ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ISRO: ಜನವರಿ ತಿಂಗಳಲ್ಲಿ 100ನೇ ಉಡಾವಣೆ
Mangaluru: ಅಪರಾಧಿ ಹಿತೇಶ್ ಶೆಟ್ಟಿಗಾರ್‌ಗೆ ಮರಣ ದಂಡನೆ ಶಿಕ್ಷೆ
BJP ರಾಜ್ಯಾಧ್ಯಕ್ಷ ಪಟ್ಟ ಗುಪ್ತ ಸಮರ ಆರಂಭ! ಸ್ಥಾನ ಉಳಿಸಿಕೊಳ್ಳಲು ಬಿವೈವಿ ಕಸರತ್ತು
Covid Vaccine: ಪತ್ನಿ ಕೊಂದಿದ್ದವನ ಪತ್ತೆಗೆ ನೆರವಾದ ಕೋವಿಡ್ ಲಸಿಕೆ!
ಹೊಸ ವರ್ಷಕ್ಕೆ ಪುಷ್ಪಾಲಂಕೃತ ಧರ್ಮಸ್ಥಳ: ಒಂದು ಟನ್ ಹಣ್ಣು, ವಿವಿಧ ಬಗೆಯ ಹೂಗಳಿಂದ ಸಿಂಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.