ಸ್ಥಗಿತಗೊಂಡಿದ್ದ ಸೇತುವೆ, ರಸ್ತೆ ಕಾಮಗಾರಿ ಮತ್ತೆ ಆರಂಭ
Team Udayavani, Apr 28, 2020, 5:11 AM IST
ಕುಂದಾಪುರ: ಬೈಂದೂರು, ಕುಂದಾಪುರ ತಾ | ವ್ಯಾಪ್ತಿಯಲ್ಲಿ ಲಾಕ್‌ಡೌನ್ ಹಿನ್ನೆಲೆ ಯಲ್ಲಿ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಸ್ಥಗಿತಗೊಂಡಿದ್ದ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಕೆಲ ಪ್ರಮುಖ ಸೇತುವೆ, ರಸ್ತೆ ಕಾಮಗಾರಿ ಮತ್ತೆ ಪುನರಾರಂಭಗೊಂಡಿದೆ.
ಆಜ್ರಿ ಗ್ರಾಮದ ಬೆಳ್ಳಾಲ – ಮೋರ್ಟು ಸಂಪರ್ಕಿಸುವ ಸೇತುವೆ, ಬೈಂದೂರಿನ ಕಲ್ಯಾಣಿR ಸೇತುವೆ, ಸಿದ್ದಾಪುರ ಸಮೀಪದ ಸೇತುವೆ ಕಾಮಗಾರಿಗಳು ಈಗಾಗಲೇ ಆರಂಭ ಗೊಂಡಿವೆ. ಇದರೊಂದಿಗೆ ಹೆಮ್ಮಾಡಿ – ಕೊಲ್ಲೂರು ದ್ವಿಪಥ ಕಾಮಗಾರಿಯು ಕೂಡ ಮತ್ತೆ ಚಾಲನೆ ಪಡೆದು ಕೊಂಡಿದೆ.
ಒಂದು ವರ್ಷದ ಹಿಂದೆ ಚಾಲನೆ ಪಡೆದು, ಈಗ ಅರ್ಧಕ್ಕಿಂತ ಹೆಚ್ಚು ಕಾಮಗಾರಿ ಪೂರ್ಣಗೊಂಡ ಸೇತುವೆಗಳಿದ್ದರೆ ಈ ಬಾರಿಯ ಮಳೆಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸಿ, ಸಂಚಾರಕ್ಕೆ ಅವಕಾಶ ಮಾಡಿಕೊಡಲು ಇಲಾಖೆ ಅಧಿಕಾರಿ ಗಳು ಮುಂದಾಗಿದ್ದು, ಅದರಂತೆ ತ್ವರಿತ ಗತಿಯಲ್ಲಿ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.
ಈಗಾಗಲೇ ಚಾಲನೆ ಪಡೆದ ರಸ್ತೆ ಡಾಮರು, ಕಾಂಕ್ರೀಟ್ ಕಾಮಗಾರಿ ಮುಂಗಾರಿಗೆ ಮುನ್ನ ಮುಗಿಸಲು ಕ್ರಮ ಕೈಗೊಳ್ಳ ಲಾಗುತ್ತಿದೆ. ಆದರೆ ಆರಂಭಿಕ ಹಂತದಲ್ಲಿರುವ ಸೇತುವೆ, ರಸ್ತೆ ಕಾಮಗಾರಿ ಮಾತ್ರ ಆರಂಭಗೊಳ್ಳುವುದು ಅನುಮಾನ ವೆನಿಸಿದ್ದು, ಅದೇನಿದ್ದರೂ ಮಳೆಗಾಲ ಕಳೆದ ಬಳಿಕವಷ್ಟೇ ಆರಂಭಗೊಳ್ಳುವ ಸಾಧ್ಯತೆಯಿದೆ.
ಸರಕು- ಸಾಮಗ್ರಿ ಕೊರತೆ
ಎಲ್ಲ ಕಡೆಗಳಲ್ಲಿ ಗುತ್ತಿಗೆದಾರರು ಕಾರ್ಮಿಕರಿಂದ ಕೆಲಸ ಮಾಡಿಸಲು ಮುಂದಾಗಿದ್ದರೂ ಕೂಡ ಜಲ್ಲಿ, ಮರಳು, ಸಿಮೆಂಟ್, ಕಬ್ಬಿಣ ಮತ್ತಿತರ ಅಗತ್ಯದ ಸರಕು – ಸಾಮಗ್ರಿಗಳ ಕೊರತೆ ಕಂಡು ಬರುತ್ತಿದೆ. ಅದರಲ್ಲೂ ಬಹುತೇಕ ಅಂಗಡಿಗಳಲ್ಲಿ ಸಿಮೆಂಟ್ ದಾಸ್ತಾನು ಖಾಲಿಯಾಗಿದ್ದು, ಹೊಸದಾಗಿ ಬೇರೆಡೆಗಳಿಂದ ಇನ್ನಷ್ಟೇ ಬರಬೇಕಿದೆ.
ಮತ್ತೆ ಕೆಲವರಿಗೆ ಕಾರ್ಮಿಕರೆಲ್ಲ ಊರಿಗೆ ಹೋಗಿರುವುದು ಕೂಡ ಸಮಸ್ಯೆಯಾಗಿದೆ. ಲಭ್ಯವಿರುವ ದಾಸ್ತಾನುಗಳು ದುಬಾರಿ ಯಾಗಿರುವುದು ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರಿಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ.
ಕಾಮಗಾರಿ ಆರಂಭಕ್ಕೆ ಸೂಚನೆ
ಈಗಾಗಲೇ ಬೆಳ್ಳಾಲ, ಕಲ್ಯಾಣಿR ಸೇರಿದಂತೆ ಕೆಲ ಸೇತುವೆ ಕಾಮಗಾರಿ ಗಳು ಆರಂಭಗೊಂಡಿವೆ. ಮಳೆಗಾಲಕ್ಕೂ ಮುನ್ನ ಸಾಧ್ಯವಾದಷ್ಟು ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಕೊರತೆಯಿದ್ದ ಸೀಮೆಂಟ್, ಕಬ್ಬಿಣ, ಜಲ್ಲಿಗಳನ್ನು ಬೇರೆ ಕಡೆಗಳಿಂದ ತರಿಸಲಾಗಿದೆ. ಆರಂಭಗೊಂಡ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ, ಜನ ಸಂಚಾರಕ್ಕೆ ಅನುವು ಮಾಡಿಕೊಡಲು ಎಲ್ಲ ಪ್ರಯತ್ನ ನಡೆಯುತ್ತಿದೆ.
-ದುರ್ಗಾದಾಸ್,
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Naxal Encounter: ದಕ್ಷಿಣ ಭಾರತದಲ್ಲಿ ಇನ್ನುಳಿದಿರುವುದು ಎಂಟೇ ಮಂದಿ ನಕ್ಸಲರು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.