ಬುಗುರಿಕಡು ರಸ್ತೆಯುದ್ದಕ್ಕೂ ಹೊಂಡ – ಗುಂಡಿ : ಜನರ ನಿತ್ಯ ನರಕಯಾತನೆ
Team Udayavani, Sep 3, 2022, 2:59 PM IST
ಹೆಮ್ಮಾಡಿ: ಸಂತೋಷ ನಗರದಿಂದ ಬುಗುರಿಕಡುವಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಸನಾಡಿ ಬೊಬ್ಬರ್ಯ ದೈವಸ್ಥಾನ ಬಳಿಯಿಂದ ಬುಗುರಿಕಡು ಹಾಲಾಡಿ ಬೊಬ್ಬರ್ಯ ದೈವಸ್ಥಾನದವರೆಗಿನ ರಸ್ತೆ ಸಂಪೂರ್ಣ ಹೊಂಡ-ಗುಂಡಿಮಯವಾಗಿದ್ದು, ವಾಹನ ಸಂಚಾರವೇ ದುಸ್ತರಗೊಂಡಿದೆ.
ಹೆಮ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಸಂತೋಷನಗರದ ಮುಖ್ಯ ರಸ್ತೆಯಿಂದ ಬುಗುರಿಕಡುವರೆಗೆ ಒಟ್ಟು 2.4 ಕಿ.ಮೀ. ದೂರವಿದ್ದು, ಈ ಪೈಕಿ ಅಂದಾಜು 900 ಮೀ.ವರೆಗೆ ಈವರೆಗೆ ಅಭಿವೃದ್ಧಿಯಾಗಿದೆ. ಆದರೆ ಅಲ್ಲಿಂದ ಮುಂದಕ್ಕೆ ಈವರೆಗೆ ಅಭಿವೃದ್ಧಿಯಾಗದೆ ನನೆಗುದಿಗೆ ಬಿದ್ದಿದೆ. ಸುಮಾರು 1 ಕಿ.ಮೀ. ಉದ್ದದ ರಸ್ತೆಯ ಡಾಮರೆಲ್ಲ ಕಿತ್ತು ಹೋಗಿದ್ದು, ಮಳೆ ನೀರು ಹೊಂಡ-ಗುಂಡಿಗಳಲ್ಲಿ ನಿಂತು, ರಸ್ತೆಯೇ ಕಾಣದಂತಾಗಿದೆ. ನಿತ್ಯವೂ ಇದೇ ಮಾರ್ಗದಲ್ಲಿ ವಾಹನಗಳಲ್ಲಿ ಸಂಚರಿಸುವ ಜನ ನರಕಯಾತನೆ ಅನುಭವಿಸುವಂತಾಗಿದೆ.
150ಕ್ಕೂ ಮಿಕ್ಕಿ ಮನೆ
ಸಂತೋಷನಗರ- ಬುಗುರಿಕಡು ರಸ್ತೆಯನ್ನು ಆಶ್ರಯಿಸಿ, ಈ ಪರಿಸರದಲ್ಲಿ 150 ಕ್ಕೂ ಮಿಕ್ಕಿ ಮನೆಗಳಿವೆ. 1,500 ರಿಂದ 1,800ರ ವರೆಗೆ ಜನಸಂಖ್ಯೆಯಿದೆ. ಪ್ರತಿ ನಿತ್ಯ ಹತ್ತಾರು ಶಾಲಾ ವಾಹನಗಳು, ಆಟೋ ರಿಕ್ಷಾ, ಖಾಸಗಿ ವಾಹನಗಳು ಸಂಚರಿಸುತ್ತವೆ.
2 ವರ್ಷಗಳಿಂದ ಸಮಸ್ಯೆ
ಈ ಕಾಸನಾಡಿ ಬೊಬ್ಬರ್ಯ ದೈವಸ್ಥಾನ ಬಳಿಯಿಂದ ಬುಗುರಿಕಡು ಹಾಲಾಡಿ ಬೊಬ್ಬರ್ಯ ದೈವಸ್ಥಾನದ ವರೆಗಿನ ಸುಮಾರು 1 ಕಿ.ಮೀ. ದೂರದ ರಸ್ತೆಗೆ ಮೊದಲ ಬಾರಿಗೆ ಡಾಮರು ಕಾಮಗಾರಿಯಾಗಿದ್ದು ಸುಮಾರು 15 ವರ್ಷಗಳ ಹಿಂದೆ. ಅಲ್ಲಿಂದ ಇಲ್ಲಿಯವರೆಗೆ ಒಂದೇ ಒಂದು ಸಲವೂ ಮರು ಡಾಮರು ಕಾಮಗಾರಿಯೇ ಆಗಿಲ್ಲ. ಆಗಾಗ ರಸ್ತೆಯ ಹೊಂಡ- ಗುಂಡಿಗಳಿಗೆ ತೇಪೆ ಹಾಕಿದ್ದು ಬಿಟ್ಟರೆ, ಈವರೆಗೆ ಬೇರೆ ಯಾವುದೇ ಅಭಿವೃದ್ಧಿಯಾಗಿಲ್ಲ. ಆದರೆ ಕಳೆದ 2 ವರ್ಷದಿಂದ ತೇಪೆ ಕಾರ್ಯವೂ ಆಗಿಲ್ಲ. ಹೊಂಡ-ಗುಂಡಿಮಯ ರಸ್ತೆಯಲ್ಲಿ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ.
ಸಂಕಷ್ಟ ತಪ್ಪಿಲ್ಲ
ಈ ರಸ್ತೆಯ ಅಭಿವೃದ್ಧಿಗೆ ಟೆಂಡರ್ ಆಗಿದೆ ಅಂತ ಸದಸ್ಯರು ಹೇಳುತ್ತಾರೆ. ಆದರೆ ಕಳೆದೊಂದು ವರ್ಷದಿಂದ ಇದೇ ಮಾತನ್ನು ಹೇಳಿಕೊಂಡು ಬರುತ್ತಿದ್ದಾರೆ. ಈವರೆಗೆ ಯಾವುದೇ ಕಾಮಗಾರಿ ಶುರುವಾಗಿಲ್ಲ. ನಾವು ಮಾತ್ರ ನಿತ್ಯವೂ ಸಂಕಷ್ಟಪಡುವುದು ತಪ್ಪಿಲ್ಲ. ಈಗಲಾದರೂ ಈ ರಸ್ತೆಯ ಅಭಿವೃದ್ಧಿಗೆ ಮುಂದಾಗಲಿ.
– ಎಚ್.ಎ. ಕರೀಂ ಸಾಹೇಬ್, ಹಿರಿಯ ನಾಗರಿಕ
ಮನವಿ ಸಲ್ಲಿಕೆ
ಬುಗುರಿಕಡು ರಸ್ತೆಯ ಅಭಿವೃದ್ಧಿಗೆ ಈಗಾಗಲೇ ಹಲವು ಬಾರಿ ಶಾಸಕರಿಗೆ, ತಾ.ಪಂ.ಗೆ ಮನವಿ ಸಲ್ಲಿಸಿದ್ದೇವೆ. ಗ್ರಾಮಸಭೆಯಲ್ಲೂ ನಿರ್ಣಯ ಮಾಡಿ, ಜಿ.ಪಂ.ಗೆ ಕಳುಹಿಸಿದ್ದೇವೆ. ಹೆಚ್ಚಿನ ಅನುದಾನ ಬೇಕಿರುವುದರಿಂದ ವಿಳಂಬವಾಗಿದೆ.
– ಸುಧಾಕರ ದೇವಾಡಿಗ ಕಟ್ಟು, ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.