ಸದೃಢ ಸಮಾಜ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿ
ಕುಂದಾಪುರ ಭಂಡಾರ್‌ಕಾರ್ ಕಾಲೇಜು: ಫಿಟ್ ಇಂಡಿಯಾ ಫ್ರೀಡಂ ಜಾಥಾ
Team Udayavani, Sep 26, 2021, 3:57 AM IST
ಕುಂದಾಪುರ: ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಜವಾಬ್ದಾರನಾಗಿ ರುತ್ತಾನೆ. ಸುಸ್ಥಿರ, ಸುಶಿಕ್ಷಿತ ಸಮಾಜದ ನಿರ್ಮಾಣದಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರವೂ ಅತ್ಯಮೂಲ್ಯ ಎಂದು ಭಂಡಾರ್‌ಕಾರ್ ಕಾಲೇಜಿನ ಪ್ರಾಂಶುಪಾಲ ಡಾ| ಎನ್.ಪಿ. ನಾರಾಯಣ ಶೆಟ್ಟಿ ಹೇಳಿದರು.
ಶನಿವಾರ ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲಿ ನೆಹರೂ ಯುವ ಕೇಂದ್ರ ಉಡುಪಿ ಮತ್ತು ಯೂತ್ ರೆಡ್‌ಕ್ರಾಸ್ ಕುಂದಾಪುರ ತಾಲೂಕು ಘಟಕ ಇವುಗಳ ಸಹಯೋಗದಲ್ಲಿ ಆಯೋಜಿಸಿದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – “ಆಜಾದಿ ಕ ಅಮೃತ ಮಹೋತ್ಸವ’ದ ಪ್ರಯುಕ್ತ ಕೇಂದ್ರ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನಿರ್ದೇಶನದಂತೆ, “ಫಿಟ್ ಇಂಡಿಯಾ ಫ್ರೀಡಂ ರನ್ 2.0′ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ:ತಂದೆ ಹತ್ಯೆ ಮಾಡಿ ಜೈಲು ಪಾಲಾದ ಮಗ:ಅನಾಥಾಶ್ರಮ ಸೇರಿದ ಬುದ್ದಿಮಾಂದ್ಯ ಮಕ್ಕಳು:ತಾಯಿ ಪಾಡು?
ಈ ಫಿಟ್ ಇಂಡಿಯಾ ಫ್ರೀಡಂ ರನ್ ಜಾಥಾದಲ್ಲಿ ಕಾಲೇಜಿನ ಎನ್‌ಸಿಸಿ ನೇವಿ ಮತ್ತು ಆರ್ಮಿ, ಎನ್ನೆಸ್ಸೆಸ್, ಯೂತ್ ರೆಡ್‌ಕ್ರಾಸ್ ಮತ್ತು ಕ್ರೀಡಾ ವಿಭಾಗಗಳ ಸುಮಾರು 150ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಕುಂದಾಪುರದ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಕಾಲೇಜಿನಿಂದ ಆರಂಭಗೊಂಡು, ಪಾರಿಜಾತ ಸರ್ಕಲ್‌ವರೆಗೆ ಕಾಲ್ನಡಿಗೆ ಜಾಥಾ ಸಾಗಿ ಬಂತು.
ಯುವಸ್ಪಂದನ ಕೇಂದ್ರ ಉಡುಪಿಯ ನರಸಿಂಹ ಗಾಣಿಗ, ಯೂತ್ ರೆಡ್‌ಕ್ರಾಸ್‌ನ ಎಸ್. ಜಯಕರ ಶೆಟ್ಟಿ, ಗಣೇಶ್ ಆಚಾರ್ಯ ಉಪಸ್ಥಿತರಿದ್ದರು. ಕಾಲೇಜಿನ ಎನ್‌ಸಿಸಿ ಕೆಡೆಟ್ ವೈಷ್ಣವಿ ಹೆಗ್ಡೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.