ತೀವ್ರ ನ್ಯೂನತೆಯ ಮಕ್ಕಳ ಚಿಕಿತ್ಸೆಗೆ ಕಟ್ಟಡ
Team Udayavani, May 17, 2022, 10:38 AM IST
ಕುಂದಾಪುರ: ತಾಲೂಕು ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರ ಪ್ರಾರಂಭಿಸಲು ತಾತ್ಕಾಲಿಕವಾಗಿ ಕಟ್ಟಡ ನಿರ್ಮಾಣಕ್ಕಾಗಿ ಜಮೀನು ಮಂಜೂರಾತಿ ಮಾಡಬೇಕೆಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಾ.ಪಂ.ಗೆ ಪತ್ರ ಬರೆದಿದ್ದಾರೆ.
ಕುಂದಾಪುರ ಶೈಕ್ಷಣಿಕ ವಲಯದಲ್ಲಿ 1ರಿಂದ 18 ವರ್ಷದ ಶಾಲಾ ಕಲಿಕೆಯ ವಯಸ್ಸಿನ 21 ವಿಧದ ವಿವಿಧ ನ್ಯೂನತೆ ಇರುವ 364 ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ತೀವ್ರ ನ್ಯೂನತೆಯುಳ್ಳ ಈ ವಿದ್ಯಾರ್ಥಿಗಳಿಗೆ ಕೇಂದ್ರದಲ್ಲಿ ಥೆರಪಿ ಅಗತ್ಯವಿದೆ. ಆದರೆ ಸಮನ್ವಯ ಶಿಕ್ಷಣ ಕೇಂದ್ರ ಪ್ರಾರಂಭಿಸಲು ಸ್ವಂತ ಜಮೀನು ಕಟ್ಟಡವಿರುವುದಿಲ್ಲ. ನ್ಯೂನತೆಯುಳ್ಳ ವಿದ್ಯಾರ್ಥಿಗಳಿಗೆ ಬಂದು ಹೋಗಲು ಅನುಕೂಲವಾಗುವ ಸ್ಥಳದ ಅಗತ್ಯವಿದೆ.
ಅನುಕೂಲ
ತಾ.ಪಂ. ಅಧೀನದಲ್ಲಿ ಕ್ಯಾಂಟೀನ್ ಪಕ್ಕದಲ್ಲಿರುವ ಉಗ್ರಾಣವನ್ನು ತಾತ್ಕಾಲಿಕವಾಗಿ ಅಂಗವಿಕಲರಿಗಾಗಿ ಕಾದಿರಿಸುವ ನಿ ಧಿಯಿಂದ ದುರಸ್ತಿಗೊಳಿಸಿ, ಶಿಕ್ಷಣ ಸಂಪನ್ಮೂಲ ಕೇಂದ್ರ (ಸಿಆರ್‌ಪಿ ಕೇಂದ್ರ) 2022-23ನೇ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲು ಅನುವು ಮಾಡಿಕೊಡಬೇಕಾಗಿ, ಇದರಿಂದ ವಿಶೇಷ ನ್ಯೂನತೆಯುಳ್ಳ ವಿದ್ಯಾರ್ಥಿಗಳಿಗೆ ಶಾಸ್ತ್ರಿ ಸರ್ಕಲ್‌ನಿಂದ ಬಸ್ ಇಳಿದು ಚಿಕಿತ್ಸೆಗೆ ಬಂದು ಹೋಗಲು ತುಂಬಾ ಅನುಕೂಲವಾಗುತ್ತದೆ.
ಅನುದಾನ
ಅಂಗವಿಕಲ ಗ್ರಾಮೀಣ ಪುನರ್ವಸತಿ ಯೋಜನೆ ತಾಲೂಕು ಸಂಪನ್ಮೂಲ ಕೇಂದ್ರಕ್ಕೆ ತಾಗಿಕೊಂಡು ಲಭ್ಯವಿರುವ ಜಮೀನನ್ನು ತಾಲೂಕು ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರ (ಸಿಆರ್‌ಪಿ ಕೇಂದ್ರ) ಕಟ್ಟಡ ನಿರ್ಮಿಸಲು ವಿಶೇಷ ನ್ಯೂನತೆಯುಳ್ಳ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಯೋಗ್ಯವಾಗಿರುತ್ತದೆ. ಆದ ಪ್ರಯುಕ್ತ ಲಭ್ಯವಿರುವ ಜಮೀನಿನ ಅಳತೆ ಮಾಡಿಸಿ, ತಾಲೂಕು ಸಂಪನ್ಮೂಲ ಕೇಂದ್ರ ಕಟ್ಟಡ ಕಟ್ಟಲು ಕಾದಿರಿಸಬೇಕು. ಈ ಜಮೀನು ಕಾದಿರಿಸಿದಲ್ಲಿ ಅಥವಾ ಮಂಜೂರು ಮಾಡಿದಲ್ಲಿ, ಕಟ್ಟಡ ಮತ್ತು ಆವರಣ ಗೋಡೆ ನಿರ್ಮಿಸಲು ಅನುದಾನ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕರು ಪತ್ರದಲ್ಲಿ ವಿವರಿಸಿದ್ದಾರೆ.
ಅನುದಾನ ವಾಪಾಸ್
ಚಿಕಿತ್ಸೆಗೆ ಸುಸಜ್ಜಿತ ವ್ಯವಸ್ಥೆ ಮಾಡಲು ಸರಕಾರದಿಂದ 7 ಲಕ್ಷ ರೂ. ಅನುದಾನ ಬಂದುದು ಜಾಗ ಹಾಗೂ ಸೂಕ್ತ ಕಟ್ಟಡ ಇಲ್ಲದ ಕಾರಣ ಮರಳಿ ಹೋಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
MUST WATCH
ಹೊಸ ಸೇರ್ಪಡೆ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.