Bus; ವಾಯವ್ಯ ಸಾರಿಗೆಯಲ್ಲಿ ಯಶಸ್ವಿ ಜಾರಿ; ಕೆಎಸ್ಸಾರ್ಟಿಸಿ ಇನ್ನೂ ತಲುಪದ ಡಿಜಿಟಲ್‌ ಪಾವತಿ


Team Udayavani, Feb 25, 2024, 7:20 AM IST

Bus; ವಾಯವ್ಯ ಸಾರಿಗೆಯಲ್ಲಿ ಯಶಸ್ವಿ ಜಾರಿ; ಕೆಎಸ್ಸಾರ್ಟಿಸಿ ಇನ್ನೂ ತಲುಪದ ಡಿಜಿಟಲ್‌ ಪಾವತಿ

ಕುಂದಾಪುರ: ರಾಜ್ಯ ಸಾರಿಗೆ ಸಂಸ್ಥೆಗಳಲ್ಲಿ ಡಿಜಿಟಲ್‌ ಪಾವತಿಗೆ ಕ್ರಮ ಕೈಗೊಳ್ಳಲಾಗು ತ್ತಿದೆ ಎಂದು ಕಳೆದ ಅಧಿವೇಶನದಲ್ಲಿ ಸಾರಿಗೆ ಸಚಿವ ರಾಮ ಲಿಂಗಾರೆಡ್ಡಿ ಹೇಳಿದ್ದು, ಬಜೆಟ್‌ ಅಧಿವೇಶನ ಅಂತ್ಯಗೊಳ್ಳುತ್ತ ಬಂದರೂ ಎಲ್ಲೆಡೆ ಜಾರಿಯಾಗಿಲ್ಲ.

ಪ್ರಸ್ತುತ ವಾಯವ್ಯ ಸಾರಿಗೆಯಲ್ಲಿ ಬಹುತೇಕ ಅನುಷ್ಠಾನ ಹಂತ ತಲುಪಿದೆ. ಆದರೆ ಅತ್ಯಧಿಕ ಬಸ್‌ಗಳನ್ನು ಹೊಂದಿರುವ ಕೆಎಸ್ಸಾರ್ಟಿಸಿ, ಕಲ್ಯಾಣ ಸಾರಿಗೆ ಇತ್ಯಾದಿ ವಿಭಾಗಗಳಲ್ಲಿ ಇನ್ನೂ ಈ ಹೊಸ ಕ್ರಮ ಜಾರಿಯಾಗಿಲ್ಲ.

ಫೋನ್‌ ಪೇ
ಹುಬ್ಬಳ್ಳಿ ಭಾಗದಿಂದ ಮಂಗಳೂರು ಕಡೆಗೆ ಬರುವ ವಾಯವ್ಯ ಸಾರಿಗೆ ಕಂಡಕ್ಟರ್‌ಗಳನ್ನು ಗಮನಿಸಿದರೆ, ಕ್ಯುಆರ್‌ ಕೋಡ್‌ ಇರುವ ಪಟ್ಟಿಯನ್ನು ಐಡಿ ಕಾರ್ಡ್‌ನಂತೆ ಕೊರಳಿಗೆ ನೇತು ಹಾಕಿಕೊಂಡಿರುತ್ತಾರೆ. ಇದರಲ್ಲಿ ನಿರ್ವಾಹಕನ ಹೆಸರು, ದೂರವಾಣಿ ಸಂಖ್ಯೆ, ಹುದ್ದೆ ಸಂಖ್ಯೆ ವಿವರ ಹಾಗೂ ಕ್ಯುಆರ್‌ ಕೋಡ್‌ ಇರುತ್ತದೆ. ಪ್ರಯಾಣಿಕರು ಇದನ್ನು ಸ್ಕ್ಯಾನ್‌ ಮಾಡಿ ಹಣ ಪಾವತಿಸಿ ಟಿಕೆಟ್‌ ಪಡೆಯಬಹುದು. ಫೋನ್‌ ಪೇ ಆ್ಯಪ್‌ ಮೂಲಕ ಹಣ ಖಾತೆಗೆ ಜಮೆಯಾದ ಕುರಿತು ನಿರ್ವಾಹಕನ ಮೊಬೈಲ್‌ಗೆ ಅಕ್ಷರ ಸಂದೇಶ ಹಾಗೂ ಧ್ವನಿ ಸಂದೇಶ ಬರುತ್ತದೆ.
ಯಶಸ್ವಿ ಪ್ರಯೋಗ: ಸತತ ಮೂರು ತಿಂಗಳ ಕಾಲ ವಾಯವ್ಯ ಸಾರಿಗೆಯ 415 ಬಸ್‌ಗಳಲ್ಲಿ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ. ದೀರ್ಘ‌ ಮಾರ್ಗದಲ್ಲಿ ಚಲಿಸುವ ಬಸ್‌ಗಳನ್ನು ಗುರುತಿಸಿ 5 ಡಿಪೋಗಳ ಮೂಲಕ ಇದನ್ನು ಜಾರಿಗೊಳಿಸಲಾಗಿತ್ತು. ಸೆಪ್ಟಂಬರ್‌ನಲ್ಲಿ ಪ್ರಾಯೋಗಿಕವಾಗಿ ವಾಯುವ್ಯ ಸಾರಿಗೆ ಆರಂಭಿಸಿತ್ತು. ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ ನವೆಂಬರ್‌ನಲ್ಲಿ ಇನ್ನಷ್ಟು ಡಿಪೋಗಳಿಗೆ ವಿಸ್ತರಿಸಲಾಗಿತ್ತು. ಇಲ್ಲಿನ ಬಸ್‌ಗಳಲ್ಲಿ ಸುಮಾರು 1.2 ಲಕ್ಷ ವಹಿವಾಟುಗಳು ಡಿಜಿಟಲ್‌ ಮೂಲಕ ಆಗಿ ಒಟ್ಟು 2.3 ಕೋ.ರೂ. ನೇರವಾಗಿ ವಾಯವ್ಯ ಸಾರಿಗೆ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತಿದೆ. ಈಗ ಕಿತ್ತೂರು ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ವಿಸ್ತರಿಸಿ 4,581 ಬಸ್‌ಗಳಲ್ಲೂ ಸದ್ಯದಲ್ಲೇ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆ ಬರಲಿದೆ.

ಎಲ್ಲೆಲ್ಲಿ?: ಹುಬ್ಬಳ್ಳಿಯಲ್ಲಿ ಫೆ. 3ರಂದು ಸಚಿವರಿಂದ ಹೊಸ ಪದ್ಧತಿ ಉದ್ಘಾಟನೆಯಾಯಿತು. ಬಳಿಕ ಹುಬ್ಬಳ್ಳಿ ಗ್ರಾಮಾಂತರದ 5 ಡಿಪೋಗಳಲ್ಲೂ ಆರಂಭಿಸಲಾಗಿದೆ. ಬೆಳಗಾವಿಯ 1 ಮತ್ತು 3ನೆ ಡಿಪೋ, ಬೈಲಹೊಂಗಲ, ಧಾರವಾಡ, ಹಳಿಯಾಳ, ಚಿಕ್ಕೋಡಿ, ನಿಪ್ಪಾಣಿ, ಗೋಕಾಕ, ಗದಗ, ಶಿರಸಿ ಡಿಪೋಗಳ ಬಸ್‌ಗಳಲ್ಲಿ ಅಳವಡಿಸಿದ್ದು, ಭಟ್ಕಳ, ಕುಮಟಾ ಡಿಪೋದಲ್ಲೂ ಜಾರಿಯಾಗಲಿದೆ. ಡಿಜಿಟಲ್‌ ಪಾವತಿಗೆ ಪ್ರಯಾಣಿಕರಿಂದ ಈವರೆಗೂ ಒಳ್ಳೆಯ ಸ್ಪಂದನೆ ಇದೆ ಎನ್ನುತ್ತಾರೆ ವಾಯುವ್ಯ ಸಾರಿಗೆ ಮುಖ್ಯ ಸಂಚಾರ ವ್ಯವಸ್ಥಾಪಕ ಮಹಂತೇಶ್‌.
ಬಿಎಂಟಿಸಿ: ಡಿಜಿಟಲ್‌ ವ್ಯವಸ್ಥೆಯಲ್ಲಿ ಬಿಎಂಟಿಸಿ ಮುಂಚೂಣಿಯಲ್ಲಿದೆ. ಅಲ್ಲಿ ಹೆಚ್ಚಿನ ಪ್ರಯಾಣಿ ಕರು ಈ ವ್ಯವಸ್ಥೆಯನ್ನು ಬಳಸಿ ಕೊಳ್ಳುತ್ತಿದ್ದು, ಪ್ರತೀ ತಿಂಗಳು 4.5 ಕೋಟಿ ರೂ. ಡಿಜಿಟಿಲ್‌ ಪೇಮೆಂಟ್‌ ಮೂಲಕ ಬಂದರೆ, 13ರಿಂದ 18 ಕೋಟಿ ರೂ. ನೇರ ಪಾವತಿ ಆಗುತ್ತಿದೆ. ಸಾಮಾನ್ಯ ಟಿಕೆಟ್‌ ಜತೆಗೆ ಪಾಸ್‌ಗಳನ್ನು ಹೊಸ ವ್ಯವಸ್ಥೆ ಮೂಲಕ ಖರೀದಿಸಲಾಗುತ್ತಿದೆ.

ಕೆಎಸ್ಸಾರ್ಟಿಸಿಯಲ್ಲಿ ಸಿದ್ಧತೆ: ಹೆಚ್ಚು ಬಸ್‌ ರೂಟ್‌ಗಳನ್ನು ಹೊಂದಿರುವ ಕೆಎಸ್ಸಾರ್ಟಿಸಿ ಇನ್ನೂ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಿರುವ ಟಿಕೆಟ್‌ ವಿತರಣಾ ಯಂತ್ರದಲ್ಲೇ ಹೊಸ ವ್ಯವಸ್ಥೆಯನ್ನು ಅಳವಡಿಸಲು ಯೋಚಿ ಸುತ್ತಿದೆ. ಸದ್ಯ 89 ಟಿಕೆಟ್‌ ಯಂತ್ರಗಳಲ್ಲಿ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯಿದೆ. ಇದನ್ನು ಹಂತ ಹಂತವಾಗಿ ವಿಸ್ತರಿಸುವ ಆಲೋಚನೆ ಇದೆ ಎಂಬುದು ಅಧಿ ಕಾರಿಗಳ ಸ್ಪಷ್ಟನೆ. ಕಲ್ಯಾಣ ಕರ್ನಾಟಕ ಸಾರಿಗೆ ಕೂಡ ಸಿದ್ಧತೆಯ ಹಂತದಲ್ಲಿದೆ. ಬ್ಯಾಂಕ್‌ಗಳೊಂದಿಗೆ ಮೊದಲ ಹಂತವಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ವರ್ಷದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ಗಳಲ್ಲೂ ಹೊಸ ವ್ಯವಸ್ಥೆ ಜಾರಿಗೊಳ್ಳಬಹುದು.

ಬಸ್‌ಗಳು
ಕೆಎಸ್ಸಾರ್ಟಿಸಿ – 8,343
ಬಿಎಂಟಿಸಿ-6,222
ವಾಯವ್ಯ ಸಾರಿಗೆ- 4,857
ಕಲ್ಯಾಣ ಸಾರಿಗೆ- 4,854
ಒಟ್ಟು-24,276
(ಫೆ. 10ರ ವರೆಗಿನ ಅಂಕಿಅಂಶ)

ಕೆಎಸ್ಸಾರ್ಟಿಸಿಯಲ್ಲಿ ಡಿಜಿಟಲ್‌ ಪಾವತಿ ಇನ್ನೂ ಆರಂಭವಾಗಿಲ್ಲ. ಸದ್ಯದಲ್ಲಿಯೇ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ.
– ಜೆ. ಆಂಟನಿ ಜಾರ್ಜ್‌
ಮುಖ್ಯ ಸಂಚಾರ ವ್ಯವಸ್ಥಾಪಕರು, ಕೆಎಸ್ಸಾರ್ಟಿಸಿ, ಬೆಂಗಳೂರು

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

Kota-Shrinivas

Manipal: ಕೇಂದ್ರ ಸರಕಾರದ ಯೋಜನೆ ಫ‌ಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ

puttige-5

Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ

UP-Puttige

Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.