Byndoor ಸಹಾಯ ಮಾಡುವ ನೆಪದಲ್ಲಿ ಗ್ರಾಹಕರಿಗೆ ವಂಚನೆ: ಎಟಿಎಂನಿಂದ ಹಣ ಎಗರಿಸಿದ ಕಳ್ಳರ ಸೆರೆ

Team Udayavani, Jan 11, 2024, 1:49 AM IST

Byndoor ಸಹಾಯ ಮಾಡುವ ನೆಪದಲ್ಲಿ ಗ್ರಾಹಕರಿಗೆ ವಂಚನೆ: ಎಟಿಎಂನಿಂದ ಹಣ ಎಗರಿಸಿದ ಕಳ್ಳರ ಸೆರೆ

ಬೈಂದೂರು: ಎಟಿಎಂನಿಂದ ಹಣ ತೆಗೆಯುಲು ಸಹಾಯ ಮಾಡುವ ನೆಪದಲ್ಲಿ ಗ್ರಾಹಕರ ಕಣ್ಣು ತಪ್ಪಿಸಿ ಅವರ ಎಟಿಎಂ ಕಾರ್ಡ್‌ ಬಳಸಿ ಹಣ ಎಗರಿಸಿದ ಮೂರು ಪ್ರತ್ಯೇಕ ಘಟನೆಗಳಲ್ಲಿ ಹರಿಯಾಣ ಮೂಲದ ಇಬ್ಬರು ಕಳ್ಳರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ಬಲ್ಕಿಸ್‌ ಬಾನು, ಚೈತ್ರಾ ಮತ್ತು ಚಂದ್ರಶೇಖರ ಹಣ ಕಳೆದುಕೊಂಡವರು. ಹರಿಯಾಣದ ಸಂದೀಪ ಹಾಗೂ ರವಿ ಬಂಧಿತರು. ಎಟಿಎಂನಿಂದ ಹಣ ತೆಗೆಯಲು ಸಮಸ್ಯೆ ಎದುರಿಸಿದ ಗ್ರಾಹಕರನ್ನು ಕಳ್ಳರು ಗುರಿಯಾಗಿಸಿಕೊಂಡಿದ್ದರು.

ಮೊದಲ ಪ್ರಕರಣದಲ್ಲಿ ಬಲ್ಕಿಸ್‌ ಬಾನು ಅವರು ಎಟಿಎಂ ಕಾರ್ಡಿನಿಂದ ಹಣ ತೆಗೆಯಲು ಶಿರೂರು ಅರ್ಬನ್‌ ಬ್ಯಾಂಕಿನ ಎಟಿಎಂಗೆ ಹೋಗಿದ್ದ ವೇಳೆ ಇಬ್ಬರು ಒಳಗಿದ್ದರು. ಅವರನ್ನು ಹೊರಗಡೆ ಬರುವಂತೆ ತಿಳಿಸಿದಾಗ ಹೊರಗೆ ಬಂದಿದ್ದು ಕಾರ್ಡ್‌ ಹಾಕಿದಾಗ ಹಣ ಬಾರದೇ ಇದ್ದುದ್ದನ್ನು ಗಮನಿಸಿ ಒಬ್ಬ ವ್ಯಕ್ತಿ ಒಳಗೆ ಬಂದು ಕಾರ್ಡ್‌ ಹಾಗೆ ಹಾಕುವುದು ಅಲ್ಲವೆಂದು ಹೇಳಿ ಕಾರ್ಡ್‌ ಪಡೆದು ಹೀಗೆ ಹಾಕಬೇಕೆಂದು ತಿಳಿಸಿದರೂ ಹಣ ಬಾರದ ಕಾರಣ ಕಾರ್ಡ್‌ ಅನ್ನು ಬಲ್ಕಿಸ್‌ ಬಾನು ಅವರಿಗೆ ಮರಳಿ ನೀಡಿ ಹೊರಗೆ ಹೋದ.

ಬಲ್ಕಿಸ್‌ ಬಾನು ಆಬಳಿಕ ಕರ್ನಾಟಕ ಬ್ಯಾಂಕ್‌ ಎಟಿಎಂಗೆ ಹೋಗಿ ಹಣ ಡ್ರಾ ಮಾಡಲು ಹೋದಾಗ ಕಾರ್ಡ್‌ ಬದಲಾಗಿರುವುದು ತಿಳಿಯಿತು. ತತ್‌ಕ್ಷಣ ಬ್ಯಾಂಕ್‌ ಖಾತೆ ಪರಿಶೀಲಿಸಿದಾಗ ಖಾತೆಯಿಂದ 5 ಸಾವಿರ ರೂ. ತೆಗೆದಿರುವುದು ಕಂಡು ಬಂದಿದೆ. ಸಹಾಯ ಮಾಡಿದ ವ್ಯಕ್ತಿಯೇ ಇನ್ನೊಂದು ಎಟಿಎಂನಿಂದ ಹಣ ಪಡೆದು ಹೋಗಿದ್ದ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಎರಡನೇ ಪ್ರಕರಣದಲ್ಲಿ ಚೈತ್ರಾ ಅವರು ಕೂಡ ಶಿರೂರು ಮಾರ್ಕೆಟ್‌ ಬಳಿ ಇರುವ ಕೆನರಾ ಬ್ಯಾಂಕ್‌ ಎಟಿಎಂಗೆ ಹಣ ತರಲು ಹೋಗಿದ್ದಾಗ ಒಳಗಡೆ ಗ್ರಾಹಕರ ಸೋಗಿನಲ್ಲಿ ಇಬ್ಬರು ವ್ಯಕ್ತಿಗಳು ಇದೇ ರೀತಿಯಾಗಿ ಉಪಾಯ ಹೂಡಿ ಅವರನ್ನು ವಂಚಿಸಿ ಕಾರ್ಡ್‌ ಬದಲಾಯಿಸಿ 21 ಸಾವಿರ ಹಣ ಎಗರಿಸಿದ್ದಾರೆ.

ಮೂರನೇ ಪ್ರಕರಣದಲ್ಲಿ ಚಂದ್ರಶೇಖರ್‌ಅವರು ಬೈಂದೂರು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಎಟಿಎಂಗೆ ಹಣ ತರಲು ಹೋಗಿದ್ದಾಗ ಒಳಗಡೆ ಇದ್ದ ಇಬ್ಬರು ಸಹಾಯ 2ಮಾಡುವ ನೆಪದಲ್ಲಿ ಎಟಿಎಂ ಬದಲಾಯಿಸಿ 2 ಲಕ್ಷ ರೂ. ಎಗರಿಸಿದ್ದಾರೆ.

ಈ ಮೂರು ಪ್ರಕರಣದಲ್ಲಿ ಗ್ರಾಹಕರನ್ನು ವಂಚಿಸಿ ಹಣ ಎಗರಿಸಿದ ಕುರಿತು ಪ್ರತ್ಯೇಕ ಪ್ರಕರಣ ಬೈಂದೂರು ಠಾಣೆಯಲ್ಲಿ ದಾಖಲಾಗಿದೆ.

ಟಾಪ್ ನ್ಯೂಸ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

KMC: New Medical Oncology Outpatient, Chemotherapy Day Care Center inaugurated

KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ

ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್

1-a-JG

Eden Gardens; ‘ಬಿ’ ಬ್ಲಾಕ್‌ಗೆ ಜೂಲನ್‌ ಗೋಸ್ವಾಮಿ ಹೆಸರಿಡಲು ನಿರ್ಧಾರ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

Karnataka Lokayukta: ನಾಲ್ವರಿಗೆ ಲೋಕಾ ಶಾಕ್‌: 27 ಕೋಟಿ ರೂ. ಆಸ್ತಿ ಪತ್ತೆ

PCB

PCB; ಚಾಂಪಿಯನ್ಸ್‌ ಟ್ರೋಫಿಗೆ ಅಧಿಕಾರಿಯ ನೇಮಕ

1-sehwag

Cooch Behar Trophy: ಸೆಹವಾಗ್‌ ಪುತ್ರನಿಂದ ದ್ವಿಶತಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.