ಚುನಾವಣೆಗೆ ಬೈಂದೂರು ಕ್ಷೇತ್ರ ಸರ್ವ ಸಿದ್ಧ
Team Udayavani, Apr 21, 2019, 6:30 AM IST
ಬೈಂದೂರು: ಎ. 23ರ ಚುನಾವಣೆಗೆ ಬೈಂದೂರು ಕ್ಷೇತ್ರವನ್ನು ತಾಲೂಕು ಆಡಳಿತ ಸಿದ್ಧಗೊಳಿಸಿದೆ. ಸಹಾಯಕ ಚುನಾವಣಾಧಿಕಾರಿ ಕುಸುಮಾಧರ ಅವರ ನೇತೃತ್ವದಲ್ಲಿ ತಹಶೀಲ್ದಾರ್ ಬಸಪ್ಪ ಪೂಜಾರ್ ಮತ್ತು ಸಿಬಂದಿಯ ಸಹಕಾರದೊಂದಿಗೆ ಸಿದ್ಧತೆಗಳು ನಡೆದಿವೆ.
ಮತಗಟ್ಟೆಗಳಲ್ಲಿ 75 ಸೂಕ್ಷ್ಮ ಮತ್ತು 171 ಸಾಮಾನ್ಯ ಎಂದು ಗುರುತಿಸಲಾಗಿದೆ. ಹೆಮ್ಮಾಡಿಯಲ್ಲಿ 2 ಮತ್ತು ತಲ್ಲೂರಿನಲ್ಲಿ 3 ಸಖೀ ಮತಗಟ್ಟೆಗಳಿರುತ್ತವೆ. ಎಲ್ಲ ಕೇಂದ್ರಗಳಲ್ಲೂ ವಿಶೇಷ ಚೇತನರಿಗೆ, ಅಶಕ್ತರಿಗೆ, ಗರ್ಭಿಣಿಯರಿಗೆ ಮತ್ತು ಹಿರಿಯ ನಾಗರಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. 1088 ಮತಗಟ್ಟೆ ಸಿಬಂದಿ ಮತ್ತು 246 ಸಹಾಯಕ ಸಿಬಂದಿ ಚುನಾವಣೆಯ ಕರ್ತವ್ಯ ನಿರ್ವಹಿಸುವರು. ಸುರಕ್ಷತೆಯ ಹೊಣೆಯನ್ನು ಮೂವರು ಡಿವೈಎಸ್‌ಪಿ ನೇತೃತ್ವದಲ್ಲಿ 103 ಇನ್‌ಸ್ಪೆಕ್ಟರ್, 33 ಎಸ್‌ಐ, 149 ಎಎಸ್‌ಐ ಹಾಗೂ 523 ಸಿಬಂದಿ ನೋಡಿಕೊಳ್ಳಲಿದ್ದಾರೆ.
ಎ. 22ರ ಬೆಳಗ್ಗೆ ಬೆ„ಂದೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್ ನಡೆಯಲಿದ್ದು, 41 ಬಸ್ ಮತ್ತು 45 ವ್ಯಾನ್‌ಗಳ ಮೂಲಕ 86 ರೂಟ್‌ಗಳಿಗೆ ಹೋಗುವ ಸಿಬಂದಿಯನ್ನು ಸಾಗಿಸುವ ವ್ಯವಸ್ಥೆ ಮಾಡಲಾಗಿದೆ. ಮತದಾನ ಮುಗಿದ ಬಳಿಕ ಡಿಮಸ್ಟರಿಂಗ್ ಕೂಡ ಇಲ್ಲಿಯೇ ನಡೆದು, ಮತಪೆಟ್ಟಿಗೆಗಳನ್ನು ಅದೇ ರಾತ್ರಿ ಶಿವಮೊಗ್ಗಕ್ಕೆ ಕಳುಹಿಸಲಾಗುವುದು.
246 ಮತದಾನ ಕೇಂದ್ರ
ಈ ಕ್ಷೇತ್ರದಲ್ಲಿ ಬೈಂದೂರು ತಾಲೂಕಿನ 26, ಕುಂದಾಪುರ ತಾಲೂಕಿನ 39 ಸೇರಿ 65 ಗ್ರಾಮಗಳು ಇವೆ. 1,10,237 ಪುರುಷ, 1,16,349 ಮಹಿಳಾ ಮತ್ತು 1 ಅನ್ಯ ಸೇರಿ ಒಟ್ಟು 2,26,587 ಮತದಾರರು 246 ಮತದಾನ ಕೇಂದ್ರಗಳಲ್ಲಿ ಹಕ್ಕು ಚಲಾಯಿಸಲಿದ್ದಾರೆ.
ಶಿವಮೊಗ್ಗ ಲೋಕಸಭಾ ಚುನಾವಣೆ : ವಾಹನ ವ್ಯವಸ್ಥೆ
ಕುಂದಾಪುರ: ಶಿವಮೊಗ್ಗ ಲೋಕಸಭಾ ಚುನಾವಣೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಮತದಾನ ಕೆಲಸ ನಿರ್ವಹಿಸಲು ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಅಧಿಕಾರಿ, ಸಿಬಂದಿ, ಪಿಆರ್‌ಒ, ಎಪಿಆರ್‌ಒ, ಪಿಒಗಳನ್ನು ನಿಯೋಜಿಸ ಲಾಗಿದ್ದು, ನಿಯೋಜಿತ ಮತಗಟ್ಟೆ ಅ ಧಿಕಾರಿ, ಸಿಬಂದಿಯು ಮಸ್ಟರಿಂಗ್ ಕೇಂದ್ರವಾದ ಬೈಂದೂರಿನ ಸರಕಾರಿ ಪ.ಪೂ. ಕಾಲೇಜಿಗೆ ಎ. 22 ರಂದು ಹಾಜರಾಗಲು ವಾಹನ ವ್ಯವಸ್ಥೆ ಮಾಡಲಾಗಿದೆ.
ವಿವಿಧ ತಾಲೂಕುಗಳಿಂದ ಚುನಾವಣಾ ಕರ್ತವ್ಯಕ್ಕೆ ಹೊರಡುವ ಸಿಬಂದಿಗೆ ತಾಲೂಕು ಕೇಂದ್ರಗಳಿಂದ ಬೈಂದೂರಿನ ಮಸ್ಟರಿಂಗ್ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಉಡುಪಿ , ಕಾಪು, ಕಾರ್ಕಳ, ಕುಂದಾಪುರ ತಾಲೂಕು ಕೇಂದ್ರಗಳಲ್ಲಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಎ. 22 ರಂದು ಬೆಳಗ್ಗೆ 6.30 ಕ್ಕೆ ಬಸ್ ಹೊರಡಲಿದ್ದು, ಅನಂತರ ಬಸ್ ವ್ಯವಸ್ಥೆ ಇರುವುದಿಲ್ಲ. ಚುನಾವಣೆ ಮುಗಿದು ಡಿ ಮಸ್ಟರಿಂಗ್ ಕೇಂದ್ರದಲ್ಲಿ ಇವಿಎಂ ಮತಯಂತ್ರಗಳನ್ನು ಹಸ್ತಾಂತರಿಸಿದ ಅನಂತರ ವಾಪಸ್ ಕೇಂದ್ರ ಸ್ಥಾನಗಳಿಗೆ ಹೋಗಲು ಬಸ್ ವ್ಯವಸ್ಥೆ ಮಾಡಲಾಗಿದೆ.
ಹೊರಡುವ ಸ್ಥಳ
ಕುಂದಾಪುರದಲ್ಲಿ ತಾಲೂಕು ಕಚೇರಿ ಬಳಿ, ಉಡುಪಿಯಲ್ಲಿ ತಾಲೂಕು ಕಚೇರಿ ಮತ್ತು ಸಿಟಿ ಬಸ್ ನಿಲ್ದಾಣ, ಕಾಪುವಿನಲ್ಲಿ ತಾಲೂಕು ಕಚೇರಿ ಮತ್ತು ಬಸ್ ನಿಲ್ದಾಣ, ಕಾರ್ಕಳದಲ್ಲಿ ತಾಲೂಕು ಕಚೇರಿ ಮತ್ತು ಬಂಡಿಮಠದ ಬಸ್ ನಿಲ್ದಾಣದಿಂದ ಬಸ್ ಹೊರಡಲಿದೆ. ನಿಯೋಜಿತ ಅಧಿಕಾರಿ/ಸಿಬಂದಿ ಪ್ರಯೋಜನ ಪಡೆಯುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.