ಒಕ್ಕಲೆಬ್ಬಿಸುವುದಕ್ಕೆ ನಮ್ಮ ವಿರೋಧವಿದೆ: ಬೈಂದೂರು ಶಾಸಕ  ಬಿ.ಎಂ. ಸುಕುಮಾರ ಶೆಟ್ಟಿ


Team Udayavani, Jul 25, 2022, 7:05 AM IST

ಒಕ್ಕಲೆಬ್ಬಿಸುವುದಕ್ಕೆ ನಮ್ಮ ವಿರೋಧವಿದೆ: ಬೈಂದೂರು ಶಾಸಕ  ಬಿ.ಎಂ. ಸುಕುಮಾರ ಶೆಟ್ಟಿ

ಕುಂದಾಪುರ: ಕಸ್ತೂರಿ ರಂಗನ್‌ ವರದಿ ಇರಬಹುದು, ಇನ್ನಾವುದೇ ಇರಬಹುದು ಅರಣ್ಯದಂಚಿನ ವಾಸಿಗಳ‌ನ್ನು ಒಕ್ಕಲೆಬ್ಬಿಸುವುದಕ್ಕೆ ನನ್ನ ಪ್ರಬಲ ವಿರೋಧವಿದೆ. ಅರಣ್ಯ ವಾಸಿಗಳು ಪರಿಸರ ನಾಶ ಮಾಡುವುದಿಲ್ಲ. ಅವರು ಅರಣ್ಯರಕ್ಷಕರು, ಅರಣ್ಯದ ಜತೆಜತೆಗೇ ಬಾಳುವವರು. ಕಾಡಿನ ನಾಶ, ಪರಿಸರಹಾನಿ ಏನಿದ್ದರೂ ನಾಡಿನ ಜನರಿಂದ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದ್ದಾರೆ.

ಅವರು ಶನಿವಾರ “ಉದಯವಾಣಿ’ ಮಣಿಪಾಲ ಕಚೇರಿಯಲ್ಲಿ ನಡೆದ “ಶಾಸಕರ ಜತೆ ನಮ್ಮ ಮಾತುಕತೆ’ ಸರಣಿಯಲ್ಲಿ ಮಾತನಾಡಿದರು.

ಬೊಮ್ಮಾಯಿ ನೇತೃತ್ವದ ಸರಕಾರ ಈಗಾಗಲೇ ಕಸ್ತೂರಿ ರಂಗನ್‌ ವರದಿಗೆ ವಿರೋಧ ಸೂಚಿ ಸಿದೆ. ಕೇಂದ್ರಕ್ಕೆ ನಿಯೋಗ ವನ್ನೂ ಒಯ್ಯ ಲಿದೆ. ನಾನೂ ಇದರಲ್ಲಿ ಭಾಗಿಯಾಗಿ ಅಭಿಪ್ರಾಯ ಮಂಡಿಸ ಲಿದ್ದೇನೆ. ಬೈಂದೂರು ವಿಧಾನ ಸಭಾ ಕ್ಷೇತ್ರದ 16 ಗ್ರಾಮಗಳು ಈ ವರದಿಯ ವ್ಯಾಪ್ತಿ ಯಲ್ಲಿದ್ದು ಜನರು ಭಯಪಡುವ ಅಗತ್ಯವಿಲ್ಲ. ಕೇಂದ್ರ ಅಭಿಪ್ರಾಯವನ್ನಷ್ಟೇ ಕೇಳಿದ್ದು ಜಾರಿ ಮಾಡಿಲ್ಲ ಎಂದರು.

ಬೈಂದೂರಿನಲ್ಲಿ 100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಕಳೆದ ವಾರ ಆರೋಗ್ಯ ಸಚಿವ ರನ್ನು ಭೇಟಿ ಮಾಡಿ ಮರು ಮನವಿ ಸಲ್ಲಿಸಿದ್ದೇನೆ. ರಾಜ್ಯ ದಲ್ಲಿ 10 ಆಸ್ಪತ್ರೆ ನಿರ್ಮಾಣ ವಾಗಲಿದ್ದು ಬೈಂದೂರನ್ನು ಸೇರಿಸುವಂತೆ ವಿನಂತಿಸಿದ್ದೇನೆ. ಕುಂದಾಪುರ – ಗಂಗೊಳ್ಳಿ ಸೇತುವೆ ನಿರ್ಮಾಣ ನನ್ನ ಬಹುಕಾಲದ ಕನಸು. ಇದ ರಿಂದಾಗಿ 17 ಕಿ.ಮೀ. ಸುತ್ತಾಟ ತಪ್ಪಲಿದೆ. ಆದರೆ ದೊಡ್ಡ ಮೊತ್ತ ಬೇಕಾಗುವ ಕಾರಣ ಕೇಂದ್ರದ ಮೊರೆ ಹೋಗುವುದು ಅನಿವಾರ್ಯ. ಸಂಸದ ಬಿ.ವೈ. ರಾಘವೇಂದ್ರ ಅವರ ಜತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸಲಿದ್ದೇನೆ ಎಂದರು.

ಕೇಬಲ್‌ ಕಾರ್‌ನಿಂದ ಪರಿಸರ ನಾಶವಿಲ್ಲ :

ಕೊಡಚಾದ್ರಿ ಕೇಬಲ್‌ ಕಾರ್‌ ನಿರ್ಮಾಣದಿಂದ ಪರಿಸರ ನಾಶ ಆಗುವುದಿಲ್ಲ. ಕೇಬಲ್‌ ಕಾರಿನಲ್ಲಿ ಸಂಚರಿಸಿ ದೃಶ್ಯ ವೀಕ್ಷಣೆಗೆ ಮಾತ್ರ ಅವಕಾಶ. ಕಾಡಿನಲ್ಲಿ ಇಳಿಯಲು ಅವಕಾಶ ಇಲ್ಲ. ಆದ್ದರಿಂದ ಪರಿಸರ ನಾಶ ಆಗದಂತೆ ಯೋಜನೆ ರೂಪುಗೊಳ್ಳಲಿದೆ. ದಿನಂಪ್ರತಿ 5 ಸಾವಿರ ಮಂದಿ ಅಲ್ಲಿಗೆ ಆಗಮಿಸಿ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ಬೈಂದೂರು ಕ್ಷೇತ್ರಕ್ಕೆ ವಸತಿ ಯೋಜನೆ, ವೈಯಕ್ತಿಕ ಫ‌ಲಾನುಭವಿಗಳ ಹೊರತಾಗಿ 4 ವರ್ಷದಲ್ಲಿ 1,940 ಕೋ.ರೂ. ಅನುದಾನ ಬಂದಿದೆ. ಮನೆಮನೆಗೆ ಕುಡಿಯುವ ನೀರಿಗೆ 737 ಕೋ.ರೂ. ಅನುದಾನ ವಿನಿಯೋಗವಾಗುತ್ತಿದೆ ಎಂದರು.

ಪ್ರವಾಸೋದ್ಯಮ, ಕೃಷಿ, ಕೈಗಾರಿಕೆ, ಉದ್ಯೋಗ ಸೃಜನೆ, ರಸ್ತೆ ಅಭಿವೃದ್ಧಿ ಸೇರಿದಂತೆ ಕ್ಷೇತ್ರವನ್ನು ಮಾದರಿ ಯಾಗಿಸಿ ಅಭಿವೃದ್ಧಿಗೆ ಪಣತೊಡಲಾಗಿದೆ ಎಂದರು.

“ಉದಯವಾಣಿ’ ಪರವಾಗಿ ಶಾಸಕರನ್ನು ಗೌರವಿಸಲಾಯಿತು.

ಟಾಪ್ ನ್ಯೂಸ್

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Kundapura: ಗುಲ್ವಾಡಿ ಪರಿಸರದ ಬಾವಿ ನೀರೆಲ್ಲ ಜನವರಿಯಲ್ಲೇ ಉಪ್ಪು

2

Kundapura: ಅಪಘಾತ ಇಳಿಕೆ, ಅಪರಾಧ ಏರಿಕೆ

Kota: ಎಚ್ಚರ ತಪ್ಪಿದರೆ ತಪ್ಪದು ಆಪತ್ತು; ಹೆಚ್ಚುತ್ತಿರುವ ಹೆಜ್ಜೇನು ದಾಳಿ ಭೀತಿ

Kota: ಎಚ್ಚರ ತಪ್ಪಿದರೆ ತಪ್ಪದು ಆಪತ್ತು; ಹೆಚ್ಚುತ್ತಿರುವ ಹೆಜ್ಜೇನು ದಾಳಿ ಭೀತಿ

Kundapura ಬಸ್ರೂರು: ಯುವಕ ಆತ್ಮಹತ್ಯೆ

Kundapura ಬಸ್ರೂರು: ಯುವಕ ಆತ್ಮಹತ್ಯೆ

5

Network Problem: ಕಾಲ ಬುಡದಲ್ಲಿ ಟವರ್‌ ಇದ್ದರೂ ಕಾಲ್‌ಗಾಗಿ 4 ಕಿ.ಮೀ. ನಡಿಬೇಕು!

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

POlice

Puttur: ಅನಾಥ ಸ್ಥಿತಿಯಲ್ಲಿ ಎರಡು ಬೈಕ್‌; ವಶಕ್ಕೆ ಪಡೆದುಕೊಂಡ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.