Lok Sabha Elections: ಕಾಂಗ್ರೆಸ್ ಪರ ಬೇರೆ ಕ್ಷೇತ್ರದಲ್ಲೂ ಪ್ರಚಾರ; ಶಿವರಾಜ್ ಕುಮಾರ್
Team Udayavani, Mar 21, 2024, 8:22 PM IST
ಕುಂದಾಪುರ: ಶಿವಮೊಗ್ಗದಲ್ಲಿ ಗೀತಾ ಪರ ನಾನು ಈ ಬಾರಿ ಸಂಪೂರ್ಣ ಜತೆಗಿರುತ್ತೇನೆ. ಕಾಂಗ್ರೆಸ್ ಪರ ಶಿವಮೊಗ್ಗದೊಂದಿಗೆ ಬೇರೆ ಕ್ಷೇತ್ರದಲ್ಲೂ ಈ ಬಾರಿ ಪ್ರಚಾರ ಮಾಡುತ್ತೇನೆ. ಸ್ವಲ್ಪ ಶೂಟಿಂಗ್ ಇದೆ. ಅದು ಮುಗಿಸಿಕೊಂಡು ಮತ್ತೆ ಬರುತ್ತೇನೆ. ಗೀತಾ ಪರ ಪ್ರಚಾರಕ್ಕೆ ಚಿತ್ರರಂಗದವರೂ ಬರುತ್ತಾರೆ. ಫೀಲಂ ಚೇಂಬರ್‌ನವರು, ನಿರ್ಮಾಪಕರು, ನಿರ್ದೇಶಕರು ಬರುತ್ತಾರೆ. ಕಲಾವಿದರು ಯಾರೆಲ್ಲ ಬರುತ್ತಾರೆ ಗೊತ್ತಿಲ್ಲ, ಕರೆದರೆ ಖಂಡಿತ ಬರುತ್ತಾರೆ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ಗುರುವಾರ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ವಿಶೇಷ ಪೂಜೆ ಸಲ್ಲಿಸಿ, ಬಳಿಕ ವಂಡ್ಸೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ಎಲ್ಲ ಪಕ್ಷದಲ್ಲೂ ನನ್ನ ಅಭಿಮಾನಿಗಳಿದ್ದಾರೆ. ಎಲ್ಲರಿಗೂ ಅವರದ್ದೇ ನಿರ್ಧಾರ ಕೈಗೊಳ್ಳುವ ಹಕ್ಕಿದೆ. ನಾವು ಹೇಳುವ ಮಾತುಗಳು ಅವರಿಗೆ ಮನವರಿಕೆ ಆದರೆ ನಮ್ಮ ಜತೆ ಬರ್ತಾರೆ. ಯಾರನ್ನೂ ಒತ್ತಡ ಹಾಕಿ, ಎಳೆದುಕೊಂಡು ಬರಲು ಆಗಲ್ಲ. ಮನಸಾರೆ ನಾನು ಅಭಿಮಾನಿಗಳ ಜತೆಗೆ ಇರುತ್ತೇನೆ ಎಂದವರು ತಿಳಿಸಿದರು.
ಅಪ್ಪಾಜಿ ಬಿಟ್ಟರೆ ಕರಾವಳಿಯಲ್ಲಿ ಅತೀ ಹೆಚ್ಚು ಶೂಟಿಂಗ್‌ನಲ್ಲಿ ಪಾಲ್ಗೊಂಡಿರುವುದು ನಾನೇ. ಇಲ್ಲಿನ ಜನ ತುಂಬಾ ಇಷ್ಟ. ಕಾಣೆ, ಅಂಜಲ್, ಬೂತಾಯಿ ಎಲ್ಲವೂ ಇಷ್ಟ ಎಂದ ಅವರು, ಬೈಂದೂರು ಕ್ಷೇತ್ರದ ಎಲ್ಲ ಕಡೆಗೂ ಈ ಸಲ ಹೋಗುತ್ತೇನೆ ಎಂದವರು ಹೇಳಿದರು.
ಗೀತಾ ಖಂಡಿತ ಒಳ್ಳೆಯ ಕೆಲಸ ಮಾಡುವ ವಿಶ್ವಾಸವಿದೆ. ಗೆದ್ದರೆ ಜನರಿಗೆ ಸುಲಭವಾಗಿ ಸಿಗುತ್ತಾರೆ. ಇದಕ್ಕೆ ನಾನು ಗ್ಯಾರಂಟಿ. ಶಕ್ತಿಧಾಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಸಮಾಜದ ಬಗ್ಗೆಯೂ ಆಕೆಗೆ ಒಳ್ಳೆಯ ಕಾಳಜಿಯಿದೆ. ಹೆಣ್ಣು ಮನಸ್ಸು ಮಾಡಿದರೆ ಏನೂ ಬೇಕಾದರೂ ಮಾಡಬಹುದು. ಇಂದಿರಾ ಗಾಂಧಿಯವರಿಗಿಂತ ದೊಡ್ಡ ಉದಾಹರಣೆ ಬೇಕಾ? ಹಿಂದೆ ಗೀತಾ ಜೆಡಿಎಸ್‌ನಿಂದ ಸೋತಿರಬಹುದು. ಆದರೆ ಈ 10 ವರ್ಷದಲ್ಲಿ ಹೊಸ ಮತದಾರರು ಬಂದಿದ್ದಾರೆ. ಹೊಸ ಐಡಿಯಾಗಳು ಬಂದಿವೆ. ಮತದಾರರು ಪ್ರಾಯೋಗಿಕವಾಗಿ ನೋಡುತ್ತಾರೆ. ಜನ ಕಾಂಗ್ರೆಸ್ ಬಗ್ಗೆ ಒಲವು ತೋರುತ್ತಿದ್ದಾರೆ ಎಂದರು.
ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್, ಸಚಿವ ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ್ ಶೆಟ್ಟಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.