ಚಿತ್ತೂರು: ತಲಾ 40 ಲೀ. ನೀರು ಪೂರೈಕೆ
ಬತ್ತಿದ ಜಲ ಮೂಲದಿಂದ ಆತಂಕದಲ್ಲಿ ಕೃಷಿಕರು
Team Udayavani, May 22, 2019, 6:10 AM IST
ಕೊಲ್ಲೂರು: ಒಂದೆಡೆ ಬರಿದಾದ ಬಾವಿ ಇನ್ನೊಂದೆಡೆ ಬತ್ತಿ ಹೋದ ಜಲ ಮೂಲ. ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಗ್ರಾಮದಲ್ಲಿ ಚಿತ್ತೂರು ಗ್ರಾಮ ಪಂಚಾಯತ್ ವತಿಯಿಂದ ಒಬ್ಬ ವ್ಯಕ್ತಿಗೆ ತಲಾ 40 ಲೀ. ನೀರು ಕೊಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ.
ಖಾಸಗಿ ಸ್ವಾಯತ್ತೆಯ ಬೋರ್‌ವೆಲ್‌ನಿಂದ ಟ್ಯಾಂಕರ್ ಮೂಲಕ ನೀರನ್ನು ಸಂಗ್ರಹಿಸಿ ಪಂ. ವ್ಯಾಪ್ತಿಯ 890 ಮನೆಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿ ಒಟ್ಟು 3019 ಜನ ವಾಸ ಮಾಡುತ್ತಿದ್ದಾರೆ. ಕೆಲವೆಡೆ ಬಾವಿಗಳಿದ್ದು ಅದರಲ್ಲಿನ ನೀರನ್ನು ತೀರಾ ಅಗತ್ಯವಿರುವ ಮಂದಿಗೆ ಒದಗಿಸಲಾಗುತ್ತಿದೆ.
ಮಳೆಯ ನಿರೀಕ್ಷೆಯಲ್ಲಿ ಗ್ರಾಮಸ್ಥರು
ಪಂ. ನಿಂದ ನೀರು ಒದಗಿಸಲಾಗುತ್ತಿದ್ದರು, ಇಲ್ಲಿನ ಜನತೆ ಆತಂಕದಲ್ಲಿಯೇ ದಿನ ಕಳೆಯುವಂತಾಗಿದೆ. ನಿತ್ಯ ಬಳಕೆಯ ನೀರಿಗೂ ಬವಣೆ ಪಡುತ್ತಿದ್ದಾರೆ. ಸಮರ್ಪಕ ಮಳೆ ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುವಂತಿದ್ದು ಜನತೆ ಮಳೆಯ ನಿರೀಕ್ಷೆಯಲ್ಲಿದ್ದಾರೆ.
ಕೃಷಿಕರ ಬವಣೆ
ತೀವ್ರ ಜಲ ûಾಮದಿಂದ ಕೃಷಿ ಭೂಮಿ ಬರಡಾಗುತ್ತಿದೆ. ಇದರಿಂದ ಆತಂಕಕ್ಕೆ ಒಳಗಾಗಿರುವ ಇಲ್ಲಿನ ಕೃಷಿಕರು ಮುಂದಿನ ಒಂದು ವಾರದೊಳಗೆ ಮಳೆ ಬಾರದಿದ್ದಲ್ಲಿ ಬೀಜ ಬಿತ್ತನೆ, ಇತರ ಕೃಷಿ ಚಟುವಟಿಕೆಗಳನ್ನು ನಿಭಾಯಿಸುವ ಬಗ್ಗೆ ಚಿಂತಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.