![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 23, 2024, 1:22 PM IST
ಕುಂದಾಪುರ: ಹೆಮ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಮೂವತ್ತುಮುಡಿ, ಕನ್ನಡಕುದ್ರು ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ತೆಂಗಿನ ಮರಗಳು ಕೀಟ ಬಾಧೆಯಿಂದ ಸಂಪೂರ್ಣ ಹಾನಿಗೊಳಗಾದ ಪ್ರದೇಶಕ್ಕೆ ಮತ್ತೆ ಕೃಷಿ ವಿಜ್ಞಾನಿಗಳು ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ, ಕೀಟಶಾಸ್ತ್ರಜ್ಞ ಡಾ| ರೇವಣ್ಣ ರೇವಣ್ಣನವರ್ ಅವರು ಅಲ್ಲಿ ಕಪ್ಪು ತಲೆ ಹುಳ ಬಾಧೆಗೊಳಗಾಗಿರುವ ಮರಗಳನ್ನು ಪರಿಶೀಲಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಅವರು, ನಾವು 10 ಕ್ಕೂ ಹೆಚ್ಚು ಮರಗಳ ಗರಿಗಳನ್ನು ನೋಡಿದ್ದೇವೆ. ಯಾವುದರಲ್ಲೂ ಹುಳಗಳು ಪತ್ತೆಯಾಗಿಲ್ಲ. 4-5 ಹೊಸ ಗರಿಗಳು ಕೂಡ ಬಂದಿವೆ. ತೆಂಗಿನ ಮರಗಳು ಚೇತರಿಕೆ ಕಾಣುತ್ತಿವೆ. ಈ ಹಂತದಲ್ಲಿ ಮಳೆ ಕಡಿಮೆಯಾದಾಗ ಗೊಬ್ಬರ ಹಾಕಿದರೆ ಉತ್ತಮ ನಿರ್ವಹಣೆ ಮಾಡಿದರೆ ಒಳ್ಳೆಯ ಫಸಲು ಪಡೆಯಬಹುದು. ಇನ್ನು ಬಹುಶಃ ಆ ಕಪ್ಪು ತಲೆ ಹುಳಗಳು ಇಲ್ಲಿ ಅದಕ್ಕೆ ಬೇಕಾದ ಆಹಾರ ಸಿಗದಿರುವ ಕಾರಣ ಬೇರೆಡೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯೂ ಇರುತ್ತದೆ ಎಂದವರು ತಿಳಿಸಿದರು.
ಪರೋಪಕಾರಿ ಜೀವಿ ಬಿಡುವ ಪ್ರಸ್ತಾವ
ಕನ್ನಡಕುದ್ರು – ಮೂವತ್ತುಮುಡಿ ಪರಿಸರದಲ್ಲಿ ಸುಮಾರು 5 ಸಾವಿರಕ್ಕೂ ಮಿಕ್ಕಿ ತೆಂಗಿನ ಮರಗಳಿಗೆ ಈ ಕಪ್ಪು ತಲೆ ಹುಳ ಬಾಧೆ ಆವರಿಸಿದ್ದು, ಅದನ್ನು ನಿಯಂತ್ರಿಸುವ ಸಲುವಾಗಿ ಪರೋಪಕಾರಿ ಜೀವಿ (ಗೋನಿಯೋಜಿಸ್ ನೇಫಾಂಟಿಡಿಸ್)ಗಳನ್ನು ಬಿಡಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಯೋಚಿಸಿದ್ದರು. ಈ ಬಗ್ಗೆ ಶಿವಮೊಗ್ಗದ ಜೈವಿಕ ಕೇಂದ್ರ ಎಲೆ ವಿಶ್ಲೇಷಣಾ ಪ್ರಯೋಗಾಲಯವನ್ನು ಸಹ ಸಂಪರ್ಕಿಸಿದ್ದರು. ಆದರೆ ಈಗ ಮರಗಳಲ್ಲಿ ಆ ಹುಳಗಳು ಕಂಡು ಬಾರದಿರುವ ಕಾರಣ ಸದ್ಯಕ್ಕೆ ಈ ಪ್ರಸ್ತಾವವನ್ನು ತಡೆಹಿಡಿಯಲಾಗಿದೆ. ಈ ಹುಳಗಳು ಲಾವ್ರಾ ಅಥವಾ ಪ್ಯೂಪಲ್ ಹಂತದಲ್ಲಿದ್ದರೆ ಪರೋಪಕಾರಿ ಜೀವಿಗಳನ್ನು ಬಿಟ್ಟು ನಿಯಂತ್ರಿಸಬಹುದು. ಆದರೆ ಈಗ ಕಷ್ಟ. ಸ್ವಲ್ಪ ದಿನಗಳ ಬಳಿಕ ಮತ್ತೆ ಪರಿಶೀಲಿಸಿ, ಆ ಬಳಿಕ ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು ಡಾ| ರೇವಣ್ಣ ರೇವಣ್ಣನವರ್ ಹೇಳಿದರು.
ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ನಿಧೀಶ್ ಕೆ.ಜೆ. ಉಪಸ್ಥಿತರಿದ್ದರು.
ಉದಯವಾಣಿ ವರದಿ
ಕನ್ನಡುಕುದ್ರು, ಮೂವತ್ತುಮುಡಿ ಪರಿಸರದಲ್ಲಿ ತೆಂಗಿನಮರಗಳಿಗೆ ಗರಿ ತಿನ್ನುವ ಕಪ್ಪು ತಲೆಯ ಹುಳದ ಬಾಧೆ ಇರುವ ಬಗ್ಗೆ, ಆ ಪರಿಸರದ ತೆಂಗಿನ ಮರಗಳು ಸಾಯುವ ಸ್ಥಿತಿಗೆ ತಲುಪಿರುವ ಕುರಿತಂತೆ “ಉದಯವಾಣಿ’ಯು ಮಾ. 25 ರಂದು ವರದಿ ಪ್ರಕಟಿಸಿ, ಗಮನಸೆಳೆದಿತ್ತು. ಆ ಬಳಿಕ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳು ನಿರಂತರವಾಗಿ ಭೇಟಿ ನೀಡಿ, ಪರಿಶೀಲಿಸಿ, ರೈತರಿಗೆ ಕೆಲವೊಂದು ಅಗತ್ಯ ನಿರ್ದೇಶನಗಳನ್ನು ನೀಡುತ್ತಿದ್ದಾರೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.