ಬೈಂದೂರಿನ ಆಡಳಿತ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ : ಗುರುರಾಜ್ ಗಂಟಿಹೊಳೆ
Team Udayavani, May 4, 2023, 6:48 PM IST
ಉಪ್ಪುಂದ: ಸುಸರ್ಜಿತ ತಾಲೂಕು ಆಸ್ಪತ್ರೆ, ಇಂಡಸ್ಟ್ರಿ ನಿರ್ಮಾಣ, ನೀರಿನ ಸಮಸ್ಯೆಗೆ ಮುಕ್ತಿ, ಉದ್ಯೋಗಾವಕಾಶ ಸೃಷ್ಟಿ ಜೊತೆಗೆ ಕಂದಾಯ, ಸಬ್ ರಿಜಿಸ್ಟರ್ ಸೇರಿದಂತೆ ಆಡಳಿತ ವ್ಯವಸ್ಥೆಯನ್ನು ಪಾರದರ್ಶಕತೆ ನೀಡಲು ಕನಸು ಕಂಡಿದ್ದೇವೆ ಅದರಂತೆ ಕೆಲಸ ಮಾಡಲಿದ್ದೇವೆ ಇದಕ್ಕಾಗಿ ಮತದಾರರು ಹೆಚ್ಚು ಅಂತರದಿಂದ ಗೆಲ್ಲಿಸಬೇಕು ಎಂದು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯದರ್ಶಿ ಡಾ| ಗೋವಿಂದಬಾಬು ಪೂಜಾರಿ ಹೇಳಿದರು.
ಕಾರ್ಯಕರ್ತರಿಗಾಗಿಯೇ ನಾವು
ಕಾರ್ಯಕರ್ತರ ಶ್ರಮ ತಿಳಿದಿದೆ ಅವರಿಗಾಗಿ ಜೀವನವೇ ಮೂಡಿಪಾಗಿಡುತ್ತೇವೆ. ಯಾವುದೇ ಸಮಸ್ಯೆಗಳಿದ್ದರು ಬಿಟ್ಟುಕೊಡುವುದೇ ಇಲ್ಲ, ಕ್ಷೇತ್ರದ ಜನಸಾಮಾನ್ಯರು, ತಾಯಿಯಂದಿರು ಮತ ನೀಡುವ ಮೂಲಕ ಸಾಮಾನ್ಯ ವ್ಯಕ್ತಿಯನ್ನು ಕೈ ಬೀಡುವುದಿಲ್ಲ ಎನ್ನುವುದನ್ನು ದೇಶಕ್ಕೆ ಸಾರಿ ಸಾರಿ ಹೇಳುವ ಅವಕಾಶ ನಮ್ಮ ಮುಂದಿದೆ ಎಂದರು.
ನಿಮ್ಮೊಂದಿಗೆ ಚರ್ಚಿಸಿ ಅನುದಾನ
ವಾರ್ಡ್ ಮತ್ತು ಗ್ರಾಮದಲ್ಲಿ ಪಕ್ಷದ ಬಗ್ಗೆ ಪಂ. ಸದಸ್ಯರು, ಕಾರ್ಯಕರ್ತರು ಇಟ್ಟಿರುವ ವಿಶ್ವಾಸವೇ ಗೆಲುವಿಗೆ ಕಾರಣವಾಗಲಿದೆ. ಸಮಗ್ರ ಅಭಿವೃದ್ಧಿ ಸಾಧ್ಯವಾಗಬೇಕಾದರೆ ಪಂ.ಸದಸ್ಯರು, ಕಾರ್ಯಕರ್ತರು ಯೋಚಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಯೋಜನೆಗಳು ಏನು ಬರುತ್ತದೆ, ಅನುದಾನಗಳನ್ನು ಎಲ್ಲಿ, ಹೇಗೆ ನೀಡಬೇಕು ಎನ್ನುವುದನ್ನು ನಿರ್ಧರಿಸುವರು ನೀವು ಇದು ನನ್ನ ಸಂಕಲ್ಪ. ನಿಮ್ಮೊಂದಿಗೆ ನಿರಂತರವಾಗಿ ಚರ್ಚಿಸಿಯೇ ಅನುದಾನ ಹಂಚಿಕೆಯಾಗುತ್ತದೆ ಎನ್ನುತ್ತಾರೆ ಗುರುರಾಜ್ ಗಂಟಿಹೊಳೆ.
ಬೈಂದೂರಿನ ಜನರು ಕೆಲಸಕ್ಕಾಗಿ ಇಲಾಖೆಗಳ ಅಲೆದಾಟ, ಅನಗತ್ಯ ಕಾಯುವಿಕೆಯನ್ನು ತಪ್ಪಿಸಲು ಆಡಳಿತ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರುತ್ತೇವೆ. ಅನುದಾನದ ಹಂಚಿಕೆ ಜನಪ್ರತಿನಿಧಿಗಳ ಹಾಗೂ ಕಾರ್ಯಕರ್ತ ಜೊತೆಗೆ ಚರ್ಚಿಸಿಯೇ ಹಂಚಿಕೆಯಾಗುತ್ತದೆ ಇದು ನನ್ನ ಸಂಕಲ್ಪ. ನಮ್ಮ ಕಾರ್ಯಕರ್ತರಿಗೆ, ಜನಸಾಮಾನ್ಯರಿಗೆ ತೊಂದರೆ ಆದರೆ ಸಹಿಸುವುದೇ ಇಲ್ಲ ಎಂದು ಗುರುರಾಜ್ ಗಂಟಿಹೊಳೆ ಹೇಳುತ್ತಾರೆ.
ಚಿತ್ರಣ ಬದಲಾಗಿದೆ
ಕೊನೆಯ ದಿನಗಳಲ್ಲಿ ಇದ್ದೇವೆ, ಸುಡುವ ಬಿಸಿಲ್ಲಿನಲ್ಲಿಯೂ ಕಾರ್ಯಕರ್ತರ ಉತ್ಸಾಹ ಡಬಲ್ ಆಗಿದೆ. ಗೆಲುವಿನ ವಾತಾವರಣದಲ್ಲಿ ಸಾಗುತ್ತಿದ್ದೇವೆ. ಕೆಲವು ಕಡೆಗಳಲ್ಲಿ ತಲುಪದ್ದೇ ಇದ್ದಲ್ಲಿಗೆ ಬರುತ್ತೇನೆ. ಗೆಲುವಿನ ಚಿತ್ರಣ ಪಂಚಾಯತ್ ಜನಪ್ರನಿಧಿಗಳ ಶ್ರಮದಲ್ಲಿ ಇದೆ.ಕಾರ್ಯಕರ್ತರ ನೋವಿಗೆ ಜೊತೆಯಾಗಿ ಇರುವುದನ್ನು ಸಂಘಟನೆಯಿಂದಲ್ಲೇ ಕಲಿತಿರುವೆ ನಿಮ್ಮ ಹೋರಾಟ ಮರೆಯುವುದಿಲ್ಲ ಎಂದರು.
ಇದು ಕಾರ್ಯಕರ್ತರ ಚುನಾವಣೆ
ನಮ್ಮದು ಗುರು ಅಣ್ಣನ ಗೆಲ್ಲಿಸುವ ಹೊಣೆ
ಕ್ಷೇತ್ರಕ್ಕೆ ಹೊಸ ಅಭ್ಯರ್ಥಿ ಘೋಷಣೆಗೊಂಡಾಗ ಹೊಸ ಸಂಚಲನ ಸೃಷ್ಟಿಯಾಗಿತ್ತು. ಸುಮಾರು 20ವರ್ಷಗಳಿಂದ ನಮ್ಮಂತೆಯೇ ಚುನಾವಣೆ ಹಾಗೂ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡ ಸಾಮಾನ್ಯ ವ್ಯಕ್ತಿಯನ್ನು ಶಾಸಕರನ್ನಾಗಿ ಮಾಡಲು ಪಕ್ಷ ತಿರ್ಮಾನಿಸಿರುವುದನ್ನೇ ಕಾರ್ಯಕರ್ತರು ಸಂಭ್ರವಿಸಿದ್ದರು. ಹಣ ಇಲ್ಲ, ಕಡಿಮೆ ದಿನಗಳು ಗೆಲುವು ಸಾಧ್ಯವಿಲ್ಲ ಎನ್ನುತ್ತಿರುವಾಗಲೇ ಇದು ಕಾರ್ಯಕರ್ತರ ಚುನಾವಣೆ
ನಮ್ಮದು ಗುರು ಅಣ್ಣನ ಗೆಲ್ಲಿಸುವ ಹೊಣೆ ಎನ್ನುವ ಸಂಕಲ್ಪಕ್ಕೆ ಮುನ್ನುಡಿ ಬರೆದಾಗಿತ್ತು. ಮೊದಲ ಸುತ್ತಿನ ಪ್ರಚಾರದಲ್ಲಿ ರಣ ಬಿಸಲು ಲೆಕ್ಕಿಸದೆ 246 ಬೂತುಗಳಲ್ಲಿ ಮನೆ ಮನೆಗೆ ತಿರುಗಿ ಅಭ್ಯರ್ಥಿಯ ವ್ಯಕಿತ್ವ, ಸರಳತೆ ಬಗ್ಗೆ ಮನದಟ್ಟು ಮಾಡಲಾಗಿತ್ತು. ಪರಿಣಾಮ ಚಿತ್ರಣ ಬದಲಾಗಿದೆ ಕ್ಷೇತ್ರದ ಮೂಲೆ ಮೂಲೆಯಲ್ಲೂ ಬಿಜೆಪಿ ಪರ ಮತದಾರರ ಒಲವು ವ್ಯಕ್ತವಾಗುತ್ತಿದೆ.
ಸುಮಾರು 7 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೋಡಗಿಸಿಕೊಂಡಿರುವೆ. ಬಿಜೆಪಿ ಪಕ್ಷಕ್ಕೆ ಒಲವು ಹೆಚ್ಚುತ್ತಿದ್ದೆ, ಸಾಮಾನ್ಯ ವ್ಯಕ್ತಿಗೆ ಮತ ನೀಡದೆ ಮತ್ಯಾರಿಗೆ ನೀಡುವುದು ಎಂದು ಜನರು ಹೇಳುತ್ತಿದ್ದಾರೆ. ಯಾವುದೇ ಜಾತಿ, ಮತ, ಧರ್ಮ ನೋಡದೆ ಕ್ಷೇತ್ರದ ಸೇವೆಗೆ ಪ್ರಾಮಾಣಿಕ ಕಾಯಕ ಯೋಗಿಯ ಗೆಲುವಿಗೆ ಶ್ರಮಿಸೋಣ.
ಡಾ| ಗೋವಿಂದಬಾಬು ಪೂಜಾರಿ
ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.