ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಭೇರಿ : ಕೆ.ಗೋಪಾಲ ಪೂಜಾರಿ

ಬೈಂದೂರು ಕ್ಷೇತ್ರಕ್ಕೆ ನಿಮ್ಮ ಕೊಡುಗೆಗಳೇನು ಎಂದು ಜನರಿಗೆ ತಿಳಿಸಲಿ

Team Udayavani, May 9, 2023, 4:01 PM IST

ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಭೇರಿ : ಕೆ.ಗೋಪಾಲ ಪೂಜಾರಿ

ಬೈಂದೂರು: ಬೈಂದೂರು ಕ್ಷೇತ್ರದಲ್ಲಿ ಕೊನೆಯ ಹಂತ ಕಾಂಗ್ರೆಸ್‌ ಅಬ್ಬರದ ಚುನಾವಣಾ ಪ್ರಚಾರ ಕೈಗೊಂಡಿದೆ. ಸಿದ್ದಾಪುರ, ತಲ್ಲೂರು, ವಂಡ್ಸೆ, ಬೈಂದೂರು,ಉಪ್ಪುಂದ ಸೇರಿದಂತೆ ವಿವಿಧ ಕಡೆ ನಡೆದ ರೋಡ್‌ ಶೋಗಳಲ್ಲಿ ಜನಸಾಗರ ಸೇರಿದೆ.ಇದು ಕಾಂಗ್ರೆಸ್‌ ಕಾರ್ಯಕರ್ತರ ಹುಮ್ಮಸ್ಸನ್ನು ಹೆಚ್ಚಿಸಿದೆ.

ಪ್ರತಿ ವಾರ್ಡ್‌ಗಳಲ್ಲಿ ಅಚ್ಚುಕಟ್ಟಿನ ಪ್ರಚಾರ ಕೈಗೊಂಡಿರುವುದು ಮತ್ತು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರ ಒಲವಿರುವ ಜೊತೆಗೆ ಅಭ್ಯರ್ಥಿ ಕೆ.ಗೋಪಾಲ ಪೂಜಾರಿ ಯವರನ್ನು ಈ ಬಾರಿ ಗೆಲ್ಲಿಸಬೇಕೆನ್ನುವ ಅನುಕಂಪ ಎದ್ದು ಕಾಣುತ್ತಿದೆ.

ಬೈಂದೂರು ಕ್ಷೇತ್ರದ ವಿವಿಧ ಕಡೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೆ.ಗೋಪಾಲ ಪೂಜಾರಿಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರ ಅಲೆಯಿದೆ. ಸೋಲಿನ ಭೀತಿಯಿಂದ ಹತಾಶರಾದ ಬಿಜೆಪಿ ಸುಳ್ಳುಗಳ ಪ್ರಚಾರದ ಮೂಲಕ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ.ಆದರೆ ಬೈಂದೂರು ಕ್ಷೇತ್ರದ ಜನ ಬಿಜೆಪಿಯ ಸುಳ್ಳು ಪ್ರಚಾರಕ್ಕೆ ಬೆಲೆ ಕೊಡುವುದಿಲ್ಲ.

ಬೈಂದೂರು ಕರಾವಳಿ ಹಾಗೂ ಮಲೆನಾಡು ಭಾಗಗಳನ್ನು ಹೊಂದಿದೆ.ಇಲ್ಲಿ ಪ್ರತಿ ಕುಟುಂಬಗಳು ಕೂಡ ಕಷ್ಟಪಟ್ಟು ಮೇಲೆ ಬಂದವರಾಗಿದ್ದಾರೆ.ನನ್ನ ಬಾಲ್ಯದಲ್ಲಿ ಊಟಕ್ಕೂ ಕೂಡ ಕಷ್ಟಪಡಬೇಕಾಗಿತ್ತು.ಹೋಟೆಲ್‌ಗ‌ಳಲ್ಲಿ ಕೂಲಿ ಮಾಡಿ ಮೇಲೆ ಬಂದ ನನಗೆ ಜೀವನದ ಕಷ್ಟದ ಇಂಚಿಂಚೂ ಕೂಡ ತಿಳಿದಿದೆ.ಆದರೆ ಆ ಕಷ್ಟಗಳನ್ನು ಮಾರ್ಕೆಟಿಂಗ್‌ ಮಾಡಿಕೊಂಡು ಜನರಲ್ಲಿ ಸುಳ್ಳು ಅಪಪ್ರಚಾರ ಮಾಡಿ ಚುನಾವಣೆ ಎದುರಿಸುವಂತ ಕೆಲಸ ನಾನು ಯಾವತ್ತು ಮಾಡಿಲ್ಲ. ಸತ್ಯ ಮತ್ತು ನ್ಯಾಯದ ಜೊತೆ ಜನರ ಬಳಿ ಮತಯಾಚಿಸಿದ್ದೇನೆ.ನನ್ನ ವ್ಯಕ್ತಿತ್ವ ಕ್ಷೇತ್ರದ ಪ್ರತಿ ಮನೆ ಮನೆಯ ಜನರಿಗೂ ತಿಳಿದಿದೆ.ಕ್ಷೇತ್ರಾದ್ಯಂತ ಕಾಂಗ್ರೆಸ್‌ ಪರ ಅಲೆ ಸುನಾಮಿಯಂತೆ ಎದ್ದಿದೆ.ಜನರಿಗೆ ಚುನಾವಣೆ ಬಂದಾಕ್ಷಣ ಪ್ರತ್ಯಕ್ಷವಾಗುವ ನಾಯಕರು ಬೇಕಿಲ್ಲ. ಕ್ಷೇತ್ರದ ಸೇವೆ ಮಾಡಿ ಸಂಕಷ್ಟಗಳಿಗೆ ಸದಾ ಸ್ಪಂಧಿಸುವ ನನ್ನ ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಆಶೀರ್ವಾದ ಮಾಡುತ್ತಾರೆ.ಪ್ರಚಂಡ ಬಹುಮತದಿಂದ ಗೆಲ್ಲಿಸುತ್ತಾರೆ ಎಂದರು.

ಬೈಂದೂರು ಕ್ಷೇತ್ರಕ್ಕೆ ಗಂಟಿಹೊಳೆ ಕೊಡುಗೆ ಏನು,ಜನಸಾಮಾನ್ಯರ ಪ್ರಶ್ನೆ

ಬೈಂದೂರು ಕ್ಷೇತ್ರದಲ್ಲಿ ಸೋಶಿಯಲ್‌ ಮೀಡಿಯಾ ವಾರ್‌ ತಾರಕಕ್ಕೇರಿದೆ.ಜನಸಾಮಾನ್ಯರು ಮತ್ತು ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೈಂದೂರು ಕ್ಷೇತ್ರದಲ್ಲಿ ಗೋಪಾಲ ಪೂಜಾರಿಯವರು ವಯಕ್ತಿಕ ದೇಣಿಗೆ ನೀಡಿ ಅಭಿವೃದ್ದಿಪಡಿಸಿದಷ್ಟು ದೈವ,ದೇವಸ್ಥಾನಗಳಿಗೆ ನೀವು ಇನ್ನೂ ಬೇಟಿ ಕೂಡ ನೀಡಿಲ್ಲ. ಚುನಾವಣೆಯಲ್ಲಿ ಯಾವ ನೈತಿಕತೆಯಲ್ಲಿ ಮತ ಕೇಳುತ್ತೀರಿ.ಕೋವಿಡ್‌ ಸಂದರ್ಭದಲ್ಲಿ ಬೈಂದೂರು ಕ್ಷೇತ್ರದಲ್ಲಿ ನೀವು ಎಲ್ಲೂ ಕೂಡ ನೆರವಿಗೆ ಬಂದಿಲ್ಲ. ಬೈಂದೂರಿನ ವಿವಿಧ ಕಡೆ ಜಲಾವೃತಗೊಂಡಾಗ, ತಾಲೂಕು ಹೋರಾಟ ಸೇರಿದಂತೆ ಕನಿಷ್ಟ ಪಕ್ಷ ಗ್ರಾ.ಪಂ ಚುನಾವಣೆಯಲ್ಲೂ ಕೂಡ ಭಾಗವಹಿಸದ ನೀವು ಕಳೆದ ಐದು ವರ್ಷಗಳಲ್ಲಿ ಬೈಂದೂರು ಕ್ಷೇತ್ರಕ್ಕೆ ನಿಮ್ಮ ಕೊಡುಗೆಗಳೇನು ಎಂದು ಜನರಿಗೆ ತಿಳಿಸಲಿ ಎನ್ನುವುದು ಮುಖಂಡರ ಅಭಿಪ್ರಾಯವಾಗಿದೆ.

ಕಾರ್ಯಕರ್ತರೆ ಕಾಂಗ್ರೆಸ್‌ನ ಸ್ಟಾರ್‌ ಪ್ರಚಾರಕರು:

ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರ,ರಾಜ್ಯ ನಾಯಕರು,ಸಿನಿಮಾ ತಾರೆಯರು ಸೇರಿ ಅನೇಕ ಸ್ಟಾರ್‌ ಪ್ರಚಾರಕರು ಬಂದಿದ್ದಾರೆ.ಆದರೆ ಬೈಂದೂರು ಕ್ಷೇತ್ರದ ಮನೆ ಮಗನಾದ ನನ್ನ ಬಗ್ಗೆ ಕ್ಷೇತ್ರದ ಜನರ ಪ್ರೀತಿಯ ಶ್ರೀರಕ್ಷೆಯಿದೆ.ನಮ್ಮ ಕಾರ್ಯಕರ್ತರೆ ಪಕ್ಷದ ಪಾಲಿನ ಸ್ಟಾರ್‌ ಪ್ರಚಾರಕರು. ಕಳೆದ ಚುನಾವಣೆಯಲ್ಲಿ ಸುತ್ತಾಡಲು ಕಷ್ಟವಿರಲಿಲ್ಲ.ಆದರೆ ಈ ಚುನಾವಣೆಯಲ್ಲಿ ಜಾಸ್ತಿ ನಡೆದಾಡಬಾರದು ಎಂದು ವೈದ್ಯರು ಹೇಳಿದರೂ ಕೂಡ ಗೋಪಾಲ ಪೂಜಾರಿಯವರು ಆರು ತಿಂಗಳಿನಿಂದ ಪ್ರಚಾರ ಕೈಗೊಂಡು ಐದು ಸಾವಿರ ಕಿ.ಮೀ ಅಧಿಕ ನಡೆದಿದ್ದಾರೆ. 246 ಬೂತ್‌ಗಳಲ್ಲಿ ಸಭೆ ನಡೆಸಿ ಮತದಾರರ ಮನದಾಳದ ಪ್ರೀತಿ ವಿಶ್ವಾಸಗಳಿಸಿದ್ದಾರೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್‌ ಹೇಳಿದ್ದಾರೆ.

ಕೆ.ಗೋಪಾಲ ಪೂಜಾರಿಯವರಿಗೆ ಮೀನುಗಾರರ ವಿಶೇಷ ಒಲವು:

ಕಳೆದ ಐದು ವರ್ಷಗಳಲ್ಲಿ ಕರಾವಳಿ ಭಾಗದಲ್ಲಿ ಮೀನುಗಾರರ ಬಹುತೇಕ ಯೋಜನೆಗಳು ಭರವಸೆಯಾಗಿಯೆ ಉಳಿದಿದೆ.ಸೀಮೆಎಣ್ಣೆ ಸೇರಿದಂತೆ ಬಂದರುಗಳ ನಿರ್ಲಕ್ಷದಿಂದ ಕರಾವಳಿ ಭಾಗದ ಮೀನುಗಾರರು ಸಂಕಷ್ಟದಲ್ಲಿದ್ದಾರೆ.ಕಾಂಗ್ರೆಸ್‌ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳು ಬಿಜೆಪಿ ಅವಧಿಯಲ್ಲಿ ತಟಸ್ಥಗೊಂಡಿದೆ.

ಹೀಗಾಗಿ ಗಂಗೊಳ್ಳಿ, ಮರವಂತೆ, ಕೊಡೇರಿ, ಅಳ್ವೆಗದ್ದೆ ಮೀನುಗಾರಿಕಾ ಬಂದರುಗಳನ್ನು ಆಯ್ಕೆಯಾದ ಮೊದಲ ಹಂತದಲ್ಲಿ ಪ್ರಸ್ತಾವನೆ ಸಲ್ಲಿಸುತ್ತಾರೆ. ಕಾಂಗ್ರೇಸ್‌ ಪ್ರಣಾಳಿಕೆ ಪ್ರಕಾರ ಮೀನುಗಾರರಿಗೆ ಪ್ರತಿ ಲೀಟರ್‌ ಡಿಸೇಲ್‌ಗೆ 25 ರೂಪಾಯಿ ಸಬ್ಸಿಡಿ ತಿಂಗಳಿಗೆ 500 ಲೀಟರ್‌ ಸೀಮೆಎಣ್ಣೆ 94/ಸಿ ಯೋಜನೆ,ಅಕ್ರಮ -ಸಕ್ರಮ ಯೋಜನೆ ಸೇರಿದಂತೆ ಬಹುತೇಕ ಯೋಜನೆಗಳು ಈ ಬಾರಿ ಕರಾವಳಿ ಭಾಗದ ಮೀನುಗಾರರಿಗೆ ಭರವಸೆ ಕೊಟ್ಟಿದೆ.ಮತದಾರರು ಗೋಪಾಲ ಪೂಜಾರಿ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ ಎಂದು ಬೈಂದೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮದನ್‌ ಕುಮಾರ್‌ ಹೇಳಿದ್ದಾರೆ.

ಪ್ರತಿ ಜಿ.ಪಂ ವ್ಯಾಪ್ತಿಯಲ್ಲಿ ಗೋಶಾಲೆ:

ಧರ್ಮಜಾಗೃತಿ ಸೇರಿದಂತೆ ಅಭಿವೃದ್ದಿ ಬಗ್ಗೆ ಕಾಂಗ್ರೆಸ್‌ ಪಕ್ಷ ನೂರಕ್ಕೆ ನೂರು ಪ್ರಾಮಾಣಿಕ ಕರ್ತವ್ಯ ನಿರ್ವಹಿಸುತ್ತಿದೆ. ಜಾತ್ಯಾತೀತ ತತ್ವದೊಂದಿಗೆ ಸರ್ವರನ್ನು ಪ್ರೀತಿಯಿಂದ ಮುನ್ನೆಡೆಸುವ ಜೊತೆಗೆ ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಪಶು ಆಸ್ಪತ್ರೆಗೆ ಸ್ವಂತ ಸ್ಥಳ ಮೀಸಲಿರಿಸಲಾಗಿದೆ ಹಾಗೂ ಅದರಲ್ಲಿ ಕಟ್ಟಡ ಕೂಡ ನಿರ್ಮಾಣವಾಗಿದೆ.ಎಲ್ಲಾ ಗ್ರಾಮದಲ್ಲಿ ಪಶು ಆಸ್ಪತ್ರೆ ಸೇವೆಯ ಜೊತೆಗೆ ಪ್ರತಿ ಜಿ.ಪಂ ವ್ಯಾಪ್ತಿಯಲ್ಲಿ ಗೋಶಾಲೆ ಆರಂಭಿಸುವ ಯೋಜನೆಯಿದೆ ಎಂದು ಗೋಪಾಲ ಪೂಜಾರಿ ತಿಳಿಸಿದ್ದಾರೆ.

ಬಿಜೆಪಿ ಸುಕುಮಾರ ಶೆಟ್ಟಿಯವರನ್ನು ನಿರ್ಲಕ್ಷಿಸಿದ ಬಿಜೆಪಿ:

ವಂಡ್ಸೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಶೆಟ್ಟಿ ಮಾತನಾಡಿ ಬೈಂದೂರು ಕ್ಷೇತ್ರ ವ್ಯಾಪ್ತಿ ಕಾಂಗ್ರೆಸ್‌ ಪರ ವ್ಯಾಪಕ ಬೆಂಬಲವಿದೆ. ಬಿಜೆಪಿಯಲ್ಲಿ ರಿಮೋಟ್‌ ಕಂಟ್ರೋಲ್‌ ವ್ಯವಸ್ಥೆ ಹೊಂದಿದೆ. ಬೆಂಗಳೂರಿನಲ್ಲಿ ಕುಳಿತ ಆರ್‌.ಎಸ್‌.ಎಸ್‌ ನಾಯಕರು ಕಷ್ಟಪಟ್ಟು ಪಕ್ಷ ಕಟ್ಟಿದ ನಾಯಕರನ್ನು ಕಂಟ್ರೋಲ್‌ ಮಾಡುವ ವ್ಯವಸ್ಥೆಯಿದೆ. ಕಾರ್ಯಕರ್ತರ ಶ್ರಮಕ್ಕೆ ಬೆಲೆಯಿಲ್ಲಾ. ಚುನಾವಣೆ ಮುಗಿದ ಬಳಿಕ ಸ್ಥಳೀಯ ನಾಯಕರು ಅತಂತ್ರ. ಹೀಗಾಗಿ ನೂರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura: ಅಂಬರ್‌ಗ್ರೀಸ್‌ ಮಾರಾಟ ಜಾಲ: ಅಧಿಕಾರಿಗಳಿಗೆ ಹಲ್ಲೆಗೈದ ನಾಲ್ವರ ಬಂಧನ

Kundapura: ಅಂಬರ್‌ಗ್ರೀಸ್‌ ಮಾರಾಟ ಜಾಲ: ಅಧಿಕಾರಿಗಳಿಗೆ ಹಲ್ಲೆಗೈದ ನಾಲ್ವರ ಬಂಧನ

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Shiroor: ಡಿವೈಡರ್‌ಗೆ ಕಾರು ಢಿಕ್ಕಿ

Shiroor: ಡಿವೈಡರ್‌ಗೆ ಕಾರು ಢಿಕ್ಕಿ

6(1

Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ

5(1

ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.