ಸಿದ್ದಾಪುರ ಗ್ರಾಮಸ್ಥರಿಗೆ ವಾರಾಹಿ ಕಾಲುವೆಯ ಕಲುಷಿತ ನೀರು ಸರಬರಾಜು
Team Udayavani, Jun 8, 2020, 12:09 PM IST
ಸಿದ್ದಾಪುರ: ಇಲ್ಲಿನ ಗ್ರಾಮಸ್ಥರಿಗೆ ವಾರಾಹಿ ಕಾಲುವೆಯಿಂದ ಕಲುಷಿತ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಜನರಿಗೆ ಬೇಸಿಗೆ ಅಂತ್ಯದಲ್ಲಿ ಕುಡಿಯುವ ನೀರಿನ ಅಭಾವವಿದ್ದು ಜನರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಯ ಟೆಂಡರ್ ತ್ಯಾಗರಾಜ್ ಶೆಟ್ಟಿ ಎನ್ನುವವರಿಗೆ ನೀಡಿದ್ದು, ಈ ನೀರಿನ ಸರಬರಾಜನ್ನು ಸಿದ್ದಾಪುರ ಗ್ರಾಮ ಪಂಚಾಯತ್ ಸದಸ್ಯ ಶೇಖರ್ ಕುಲಾಲ್ ಅವರು ಮಾಡುತ್ತಿದ್ದಾರೆ. ಆದರೆ ಶುದ್ಧ ನೀರನ್ನು ಸರಬರಾಜು ಮಾಡುವ ಬದಲು ಅಶುದ್ಧವಾದ ಕುಡಿಯಲು ಯೋಗ್ಯವಲ್ಲದ ನೀರನ್ನು ಸಿದ್ದಾಪುರ ಸಮೀಪದಲ್ಲಿ ಕಾರೇಬೈಲು ಎನ್ನುವ ಊರಿನಲ್ಲಿ ಹರಿಯುವ ವಾರಾಹಿ ಕಾಲುವೆಯಿಂದ ತುಂಬಿಸಿ ಜನಸಾಮಾನ್ಯರ ಮನೆಗೆ ನೀಡುತ್ತಿದ್ದಾರೆ ಇದರನ್ನು ಸೇವಿಸಿದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದು ಹಾಗೂ ಸಿದ್ದಾಪುರ ಪಂಚಾಯತ್ ನ ಪಿಡಿಓ ಸ್ಥಳ ಪರಿಶೀಲನೆ ಹಾಗೂ ನೀರಿನ ಗುಣಮಟ್ಟ ಪರಿಶೀಲನೆ ಮಾಡದೆ ಇವರೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.