ಕೊಲ್ಲೂರಿನಲ್ಲಿ ಕ್ವಾರಂಟೈನ್‌ನಲ್ಲಿರುವ ಮಂದಿಗೆ ಮತ್ತೆ ಕೋವಿಡ್ 19 ಪಾಸಿಟಿವ್ ಭೀತಿ
Team Udayavani, May 22, 2020, 5:49 AM IST
ಕೊಲ್ಲೂರು: ಮಹಾರಾಷ್ಟ್ರ ದಿಂದ ಕ್ವಾರಂಟೈನ್‌ಗೆ ಕೊಲ್ಲೂರಿಗೆ ಆಗಮಿಸಿದ ಮಂದಿಯಲ್ಲಿ ಮತ್ತೆ ಕೋವಿಡ್ 19 ಪಾಸಿಟಿವ್ ಲಕ್ಷಣ ಮೇ 21 ರಂದು ಕಂಡುಬಂದಿರುವುದರಿಂದ ಕ್ವಾರಂಟೈನ್‌ನಲ್ಲಿರುವವರಲ್ಲಿ ಆತಂಕ ಕಂಡುಬಂದಿದೆ.
ಬೈಂದೂರು ಕ್ಷೇತ್ರದಲ್ಲಿ ಮಹಾರಾಷ್ಟ್ರದಿಂದ ಬಂದವರಲ್ಲಿ ಒಬ್ಬರಿಗೆ ಕೋವಿಡ್ 19 ವೈರಸ್ ಸೋಂಕಿನ ಗುಣಲಕ್ಷಣಗಳು ಕಂಡುಬಂದಿವೆ. ಬಹುತೇಕ ಮಕ್ಕಳು ಹಾಗೂ ಪುರುಷರಲ್ಲಿ ಸೋಂಕಿನ ಸಂಖ್ಯೆ ಹೆಚ್ಚಿದ್ದು ಮಹಿಳೆಯರು ಕೂಡ ಬಾಧೆಗೆ ಒಳಗಾಗಿದ್ದಾರೆ. ಈಗಾಗಲೇ ಕೊಲ್ಲೂರಿನ ವಿವಿಧೆಡೆಗಳಲ್ಲಿ ಕ್ವಾರಂಟೈನ್‌ನಲ್ಲಿರುವ ಹಲವರು 14 ದಿನ ಮುಗಿಸುತ್ತಿದ್ದು ,ಅವರನ್ನು ಮುಂದಿನ ಪರೀಕ್ಷೆಗೆ ಒಳಪಡಿಸಲು ಸಿದ್ಧತೆ ನಡೆಯುತ್ತಿದೆ.
ಕ್ವಾರಂಟೈನ್‌ನಲ್ಲಿರುವ ಅನೇಕರು ರೋಗ ಲಕ್ಷಣವಿಲ್ಲದ ಮಕ್ಕಳು ಹಾಗೂ ಮಹಿಳೆಯರನ್ನು ಹೋಮ್ ಕ್ವಾರಂಟೈನ್‌ಗೆ ಕಳುಹಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿದ್ದಾರೆ. ಆದರೆ ವೈದ್ಯಕೀಯ ಪದ್ಧತಿಯಂತೆ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯ ಇರುವುದರಿಂದ ಐಸೊಲೇಶನ್ ಕ್ರಮದಂತೆ ಮುಂದುವರಿಯಬೇಕಾಗಿದೆ ಎಂದು ಜಿಲ್ಲಾ ಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.