ಕೋವಿಡ್ ಘಾತ: ಯಕ್ಷಗಾನ ಕಲಾವಿದರಿಗೂ ಬೇಕು ನೆರವು

ಮಳೆಗಾಲದಲ್ಲಿ ಜೀವನ ಸಾಗಿಸುವುದೇ ಚಿಂತೆ

Team Udayavani, May 8, 2020, 1:14 PM IST

ಕೋವಿಡ್ ಘಾತ: ಯಕ್ಷಗಾನ ಕಲಾವಿದರಿಗೂ ಬೇಕು ನೆರವು

ಸಾಂದರ್ಭಿಕ ಚಿತ್ರ

ಕೋಟ: ಲಾಕ್‌ಡೌನ್‌ ಕರಾವಳಿಯ ಗಂಡು ಕಲೆ ಯಕ್ಷಗಾನ ಕ್ಷೇತ್ರದ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಈ ಸಾಲಿನ ತಿರುಗಾಟ ಬಹುತೇಕ ಕೊನೆಯಾಗಿದ್ದು, ಇನ್ನು ಲಾಕ್‌ಡೌನ್‌ ಕೊನೆಗೊಂಡರೂ ಸಾಮಾಜಿಕ ಅಂತರದ ಕಾರಣಕ್ಕೆ ಪ್ರದರ್ಶನಗಳು ನಡೆಯುವುದು ಅನುಮಾನ. ಇದರ ಪರಿಣಾಮ ಬೇಸಗೆಯ ಎರಡೂವರೆ ತಿಂಗಳು, ಮಳೆಗಾಲದ 6 ತಿಂಗಳು ಕಲಾವಿದರು ಉದ್ಯೋಗವಿಲ್ಲದೆ ಜೀವನ ಸಾಗಿಸಬೇಕಿದೆ.

ಮುಜರಾಯಿ ಮೇಳಗಳ ಕಲಾವಿದರಿಗೆ ಸರಕಾರ ಸಂಬಳ ನೀಡಲು ಆದೇಶಿಸಿದೆ. ಆದರೆ ಖಾಸಗಿ ಸಂಚಾಲಕತ್ವದ ಮೇಳಗಳ ಕಲಾವಿದರ ಪರಿಸ್ಥಿತಿ ದುಸ್ತರವಾಗಿದೆ. ತೆಂಕು, ಬಡಗು ತಿಟ್ಟಿನ 20ಕ್ಕೂ ಅಧಿಕ ಮೇಳಗಳು  ಖಾಸಗಿ ಸಂಚಾಲಕತ್ವದ ಮೂಲಕ ನಡೆಯಲ್ಪಡು ತ್ತಿವೆ. ಪ್ರದರ್ಶನ ಸ್ಥಗಿತಗೊಂಡಿದ್ದರಿಂದ ಮೇಳದ ಯಜಮಾನರಿಗೂ ಲಕ್ಷಾಂತರ ರೂ. ನಷ್ಟವಾಗಿರು ವುದರಿಂದ ಕಲಾವಿದರಿಗೆ ರಜೆಯ ವೇತನ ನೀಡುವ ಸ್ಥಿತಿಯಲಿಲ್ಲ.

ಮಳೆಗಾಲದ ಜೀವನ ಕಷ್ಟ
ಪ್ರತಿ ಬಾರಿ ಕಲಾವಿದರು ಬೇಸಗೆ ತಿರುಗಾಟ ಮುಗಿಯುತ್ತಿದಂತೆ ಮುಂದಿನ ವರ್ಷದ ತಿರುಗಾಟಕ್ಕೆ ಯಾವುದಾದರು ಮೇಳದೊಂದಿಗೆ ಒಪ್ಪಂದ ಮಾಡಿಕೊಂಡು ಮುಂಗಡ ಹಣ ಪಡೆದು ಹಾಗೂ ಮಳೆಗಾಲದ ಪ್ರದರ್ಶನಗಳಲ್ಲಿ ಭಾಗವಹಿಸಿ ಆರು ತಿಂಗಳು ಜೀವನ ಸಾಗಿಸುತ್ತಾರೆ. ಆದರೆ ಈ ಬಾರಿ ಕಲಾವಿದರಿಗೆ ಮುಂಗಡ ಹಣ ನೀಡಿ ಒಪ್ಪಂದ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಯಜಮಾನರಿಲ್ಲ. ಹೆಚ್ಚಿನ ಕಲಾವಿದರಿಗೆ ಅನ್ಯ ಉದ್ಯೋಗ ತಿಳಿದಿಲ್ಲ. ಎರಡೂವರೆ ತಿಂಗಳು ಕೆಲಸ
ವಿಲ್ಲದೆ ಕಳೆದಿರುವ ಅವರಿಗೆ ಮುಂದೆ ಮಳೆ ಗಾಲದ ಜೀವನ ಹೇಗೆ ಎನ್ನುವುದೇ ಚಿಂತೆಯಾಗಿದೆ.

ಮೇಳ ನಡೆಸುವುದೇ ಸವಾಲು
ತಿರುಗಾಟದ ಆರಂಭದಿಂದಲೇ ಹರಕೆ ಆಟ ಹಾಗೂ ಬುಕ್ಕಿಂಗ್‌ ಪ್ರದರ್ಶನಗಳ ಸಂಖ್ಯೆ ಕಡಿಮೆಯಾಗಿ ನಷ್ಟವಾಗಿತ್ತು. ಇದೀಗ ಪ್ರದರ್ಶನ ಸಂಪೂರ್ಣ ಸ್ಥಗಿತವಾಗಿರುವುದರಿಂದ ಮತ್ತಷ್ಟು ನಷ್ಟವಾ ಗಿದ್ದು ಕಲಾವಿದರಿಗೆ ರಜೆಯ ಸಂಬಳ ನೀಡುವ ಸ್ಥಿತಿ ಇಲ್ಲ. ಮುಂದಿನ ದಿನಗಳಲ್ಲಿ ಮೇಳ ನಡೆಸುವುದೇ ಸವಾಲಾಗಲಿದೆ.
ವಿಟ್ಟಲ ಪೂಜಾರಿ, ಗೋಳಿಗರಡಿ ಮೇಳದ ಸಂಚಾಲಕರು

ಸರಕಾರದ ನೆರವು ಅಗತ್ಯ
ಸ್ಟಾರ್‌ ಕಲಾವಿದರು ಹೊರತು ಪಡಿಸಿ ಬಹುತೇಕರು ಮಳೆಗಾಲದ ಆರು ತಿಂಗಳು ಮೇಳದ ಮುಂಗಡ ಹಣ, ಬೆರಳೆಣಿಕೆಯ ಮಳೆಗಾಲದ ಪ್ರದರ್ಶನ ನಂಬಿ ಜೀವನ ಸಾಗಿಸುತ್ತೇವೆ. ಈ ಬಾರಿ ಎಲ್ಲವೂ ಆಯೋಮಯವಾಗಿದ್ದು, ನಮ್ಮನ್ನೇ ನಂಬಿರುವ ಸಂಸಾರ ಸಂಕಷ್ಟದಲ್ಲಿದೆ. ರಾಜ್ಯ ಸರಕಾರವು ಮೇಳಗಳ ಕಲಾವಿದರಿಗೂ ಸಹಕಾರ ನೀಡಬೇಕು.
ನಾರಾಯಣ ಉಳ್ಳೂರು, ಸೌಕೂರು ಮೇಳದ ಹಿರಿಯ ಕಲಾವಿದ

ಸಹಾಯಧನ ನೀಡಲು ಚಿಂತನೆ
ಮುಜರಾಯಿ ಮೇಳಗಳ ಕಲಾವಿದರಿಗೆ ಸಂಪೂರ್ಣ ವೇತನ ನೀಡಲು ಸೂಚಿಸಲಾಗಿದೆ ಹಾಗೂ ಮುಜರಾಯಿ ದೇವಸ್ಥಾನದ ಹೆಸರಲ್ಲಿ ನಡೆಯುವ ಖಾಸಗಿ ಸಂಚಾಲಕತ್ವದ ಮೇಳ ಗಳ ಕಲಾವಿದರಿಗೂ ಸಹಕಾರ ನೀಡುವ ಯೋಚನೆ ಇದೆ. ಆ ದೇಗುಲಗಳಲ್ಲಿ ಪೂರಕ
ಆದಾಯವಿಲ್ಲದಿರುವುದೇ ಸಮಸ್ಯೆ. ಎಲ್ಲರಿಗೆ ಆಹಾರ, ಸಹಾಯಧನ ನೀಡುವ ಕುರಿತು ಯಕ್ಷಗಾನ ಅಕಾಡೆಮಿ, ಕನ್ನಡ-ಸಂಸ್ಕೃತಿ ಇಲಾ ಖೆಯೊಂದಿಗೆ ಮಾತುಕತೆ ನಡೆಯುತ್ತಿದೆ.
– ಶ್ರೀನಿವಾಸ ಪೂಜಾರಿ, ಮುಜರಾಯಿ ಸಚಿವರು

ಟಾಪ್ ನ್ಯೂಸ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

3

Kundapura: ಟವರ್‌ನ ಬುಡದಲ್ಲೇ ನೆಟ್‌ವರ್ಕ್‌ ಇಲ್ಲ!

3-girish

Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ

16

Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು

1-vvv

ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್‌’ನಲ್ಲಿ ಪಲಿಮಾರು ಶ್ರೀ ಅಭಿಮತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.