ಪಡಿತರ ಅಕ್ಕಿ ಕಳ್ಳ ಸಾಗಾಟ ಮಾಡುತ್ತಿದ್ದ ಲಾರಿ ಢಿಕ್ಕಿಯಾಗಿ ಈಚರ್ ಪಲ್ಟಿ
Team Udayavani, Aug 30, 2022, 12:21 AM IST
ಬೈಂದೂರು: ಪಡಿತರ ಅಕ್ಕಿ ಕಳ್ಳ ಸಾಗಾಟ ಮಾಡುತ್ತಿದ್ದ ಲಾರಿಯು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಈಚರ್ ವಾಹನಕ್ಕೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಈಚರ್ ಪಲ್ಟಿಯಾದ ಘಟನೆ ಅರೆಹೊಳೆ ಕ್ರಾಸ್ ಬಳಿ ಸಂಭವಿಸಿದೆ.
ಭಟ್ಕಳದಿಂದ ಮಂಗಳೂರು ಕಡೆಗೆ ಅಣಬೆ ಸಾಗಿಸುತ್ತಿದ್ದ ಈಚರ್ ವಾಹನವು ಪಲ್ಟಿಯಾದ ಪರಿಣಾಮ ಚಾಲಕನ ಕೈಗೆ ಗಾಯಗಳಾಗಿವೆ.
ಅರೆಹೊಳೆಯ ಗ್ರಾಮೀಣ ಪರಿಸರ ದಿಂದ ಅಕ್ಕಿ ಸಂಗ್ರಹಿಸಿ ತಿರುವಿನಲ್ಲಿ ವೇಗವಾಗಿ ಹೆದ್ದಾರಿಗೆ ನುಗ್ಗಿದಾಗ ಈ ಅಪಘಾತ ಸಂಭವಿಸಿದೆ.
ಲಾರಿಯನ್ನು ಪೊಲೀಸರು ಠಾಣೆಗೆ ಕೊಂಡೊಯ್ದಿದ್ದು, ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾರಕ್ಕೆರಡು ಬಾರಿ
ಅಕ್ರಮ ಅಕ್ಕಿ ಸಾಗಾಟ
ಬೈಂದೂರು ಭಾಗದಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ನಿರಂತರವಾಗಿ ನಡೆಯುತ್ತಿದೆ. ಅರೆಹೊಳೆ ಭಾಗದಲ್ಲಿ ಪ್ರತೀ ವಾರಕ್ಕೆ ಎರಡು ಬಾರಿ ಅಕ್ಕಿ ತುಂಬಿದ ವಾಹನ ಸಾಗುತ್ತದೆ. ಅತೀ ವೇಗವಾಗಿ ಸಾಗುವ ಇವರ ವಿರುದ್ಧ ಹಲವು ಬಾರಿ ಇಲಾಖೆಗೆ ದೂರು ನೀಡಿ ದ್ದರೂ ಸಮರ್ಪಕ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.