“ಬೆಳೆ ವಿಮೆ ಪರಿಹಾರ ಶೀಘ್ರ ರೈತರ ಖಾತೆಗೆ’
Team Udayavani, Oct 13, 2020, 1:26 AM IST
ಸಾಂದರ್ಭಿಕ ಚಿತ್ರ
ಕುಂದಾಪುರ: ಭತ್ತ, ಅಡಿಕೆ ಸಹಿತ ತೋಟಗಾರಿಕಾ ಬೆಳೆಗೆ ನೀಡಲಾಗುವ ಬೆಳೆ ವಿಮಾ ಯೋಜನೆಯ ಪರಿಹಾರ ಮೊತ್ತದ ಹಂಚಿಕೆ ಕಾರ್ಯ ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲೂ ಶೀಘ್ರ ರೈತರ ಖಾತೆಗೆ ಜಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆಯ ರಾಜ್ಯ ಅಪರ ನಿರ್ದೇಶಕ ಆ್ಯಂಟೋನಿ ಮರಿಯಾ ಇಮ್ಯಾನುವೆಲ್ ಭರವಸೆ ನೀಡಿದ್ದಾರೆ.
ಅ. 12ರಂದು “ಉದಯವಾಣಿ’ಯ ಮುಖಪುಟದಲ್ಲಿ ಪ್ರಕಟಗೊಂಡ “ಬೆಲೆ ವಿಮೆ ಪರಿಹಾರಕ್ಕೂ ಕೋವಿಡ್!’ ಎನ್ನುವ ವಿಶೇಷ ವರದಿ ಸಂಬಂಧ ಅವರು ಪ್ರತಿಕ್ರಿಯಿಸಿ, ಉಡುಪಿ ಹಾಗೂ ದ.ಕ. ಜಿಲ್ಲೆಗಳಲ್ಲಿ ಭತ್ತ, ಅಡಿಕೆ, ಕಾಳು ಮೆಣಸು ಬೆಳೆಗೆ ಮಾತ್ರ ವಿಮೆ ಪರಿಹಾರ ನೀಡುತ್ತಿದ್ದು, ಈ ಬೆಳೆಗಳ ಕೊçಲು ಸೀಸನ್ ವ್ಯತ್ಯಾಸವಿರುವುದರಿಂದ, ಇತರ ಜಿಲ್ಲೆಗಳಲ್ಲಿ ವಿವಿಧ ಬೆಳೆಗಳ ಕಟಾವು, ಲೆಕ್ಕಾಚಾರ ಮುಂಚಿತವಾಗಿ ಆಗಿದ್ದರಿಂದ ಇಲ್ಲಿ ಸ್ವಲ್ಪ ವಿಳಂಬವಾಗಿದೆ. ಇನ್ನು 15 ದಿನಗಳಲ್ಲಿ ಈ ಪರಿಹಾರ ಹಣ ಹಂಚಿಕೆ ಆರಂಭವಾಗಲಿದೆ ಎಂದವರು ತಿಳಿಸಿದ್ದಾರೆ.
ಜು. 1ರಿಂದ ಮುಂದಿನ ಜೂನ್ ಕೊನೆಯವರೆಗೆ ಈ ವಿಮೆಯ ಅವಧಿಯಿದ್ದು, ದಾಖಲೆ, ಹವಾಮಾನ ಆಧಾರಿತ ಪರಿಶೀಲನೆ, ಲೆಕ್ಕಾಚಾರಗಳೆಲ್ಲ ಮುಗಿದು ಸೆಪ್ಟಂಬರ್ ವೇಳೆಗೆ ವಿಮೆ ಹಣ ರೈತರ ಖಾತೆಗೆ ಜಮೆಯಾಗುತ್ತಿತ್ತು. ಆದರೆ ಈ ಬಾರಿ ಇನ್ನೂ ರೈತರ ಖಾತೆಗೆ ಪರಿಹಾರ ಮೊತ್ತ ಜಮೆಯಾಗಿಲ್ಲ. ಉಡುಪಿ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 5,841 ಮಂದಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 27,425 ಮಂದಿ ನೋಂದಾಯಿಸಿದ್ದು, ಅವರಿಗೆ ವಿಮೆ ಹಣ ಸಿಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ
ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ
ದೇಶಾಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ : ನ್ಯಾ| ವಿಶ್ವನಾಥ ಶೆಟ್ಟಿ ಕರೆ
ಅಣ್ಣಾಮಲೈರಿಂದ ಬೇರೇನು ನಿರೀಕ್ಷಿಸಬಹುದು: ಸಿಎಂ ಪ್ರಶ್ನೆ
ಮಂಗಳೂರಿನಲ್ಲಿ ಇಂಧನ ಭದ್ರತಾ ಸಮಾವೇಶ ನಡೆಸಿ: ಸಚಿವ ಹರ್ದೀಪ್ ಸಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.