ಅಪಾಯ ಆಹ್ವಾನಿಸುತ್ತಿದೆ ಅಪಾಯಕಾರಿ ತಿರುವು
ಕಟ್‌ಬೆಲ್ತೂರು ರೈಲ್ವೇ ಮೇಲ್ಸೆತುವೆ
Team Udayavani, Oct 25, 2021, 6:02 AM IST
ಹೆಮ್ಮಾಡಿ: ಕೊಲ್ಲೂರು – ಹೆಮ್ಮಾಡಿ ಮುಖ್ಯ ರಸ್ತೆಯ ಕಟ್‌ಬೆಲ್ತೂರಿನಲ್ಲಿರುವ ರೈಲ್ವೇ ಮೇಲ್ಸೆತುವೆಯ ತಿರುವು ಅಪಾಯಕಾರಿಯಾಗಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ. ಈ ತಿರುವನ್ನು ಸರಿಪಡಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎನ್ನುವುದಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹೆಮ್ಮಾಡಿಯಿಂದ ಕೊಲ್ಲೂರುವರೆಗಿನ ಜಿಲ್ಲಾ ಮುಖ್ಯ ರಸ್ತೆಯ ದ್ವಿಪಥ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಯೊಂದಿಗೆ ಈ ತಿರುವನ್ನು ಸಹ ಅಭಿವೃದ್ಧಿಪಡಿಸಿ, ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವ ಬೇಡಿಕೆ ನಾಗರಿಕರದ್ದಾಗಿದೆ.
ಆದಷ್ಟು ಬೇಗ ಈ ತಿರುವಿನ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ, ಅವಘಢ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಈ ತಿರುವನ್ನು ಸರಿಪಡಿಸಬೇಕು ಎನ್ನುವುದಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ದಾಂಡೇಲಿ: ಕಾಳಿ ನದಿ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ.!
ಅಪಾಯವೇನು ?
ಹೆಮ್ಮಾಡಿ ಕಡೆಯಿಂದ ಕೊಲ್ಲೂರು ಕಡೆಗೆ ಸಂಚರಿಸುವಾಗ ಈ ರೈಲ್ವೇ ಮೇಲ್ಸೆತುವೆಯ ತಿರುವಿನಲ್ಲಿ ಹೆಮ್ಮಾಡಿ ಕಡೆಯಿಂದ ಸಂಚರಿಸುವವರಿಗೆ ಕೊಲ್ಲೂರು ಕಡೆಯಿಂದ ವಾಹನಗಳು ಬರುತ್ತಿರುವುದು ಕಾಣಿಸುವುದಿಲ್ಲ. ಇದಲ್ಲದೆ ಮೇಲ್ಸೆತುವೆಯ ಮೇಲೆ ಹುಲ್ಲು, ಗಿಡ ಗಂಟಿ ಬೆಳೆದಿದೆ. ಇದು ಅಪಘಾತಕ್ಕೂ ದಾರಿ ಮಾಡಿಕೊಟ್ಟಂತಿದೆ. ಈ ಹಿಂದೆ ಇಲ್ಲಿ ಸಾಕಷ್ಟು ಅವಘಢಗಳು ಸಂಭವಿಸಿದ್ದು, ಪ್ರಾಣಿಹಾನಿ ಸಹ ಉಂಟಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.