ತೋರಳ್ಳಿಯಲ್ಲಿ ಸೇತುವೆ ಬೇಡಿಕೆ- ರೈಲೇ ಸೇತುವೆಯೇ ಆಧಾರ: ಜೀವಭಯದಲೇ ಸಂಚಾರ
ತೋರಳ್ಳಿ ಕೊಂಕಣ ರೈಲ್ವೇ ಸೇತುವೆಯ ಮೂಲಕ ಹೊಳೆ ದಾಟುತ್ತಿದ್ದಾರೆ.
Team Udayavani, Jan 21, 2023, 2:23 PM IST
ಮುಳ್ಳಿಕಟ್ಟೆ: ಹಕ್ಲಾಡಿ ಗ್ರಾಮದ ಕುಂದಬಾರಂದಾಡಿ ತೋರಳ್ಳಿ ರೈಲ್ವೇ ಮೇಲ್ಸೆತುವೆಯೇ ಈ ಭಾಗದ ವಿದ್ಯಾರ್ಥಿಗಳಿಗೆ, ಕೂಲಿ, ಕೃಷಿ, ಕಟ್ಟಡ ಕಾರ್ಮಿಕರಿಗೆ ದಾಟಿ ದಾಟಿಸುವ ಸಂಪರ್ಕ ಸೇತುವೆಯಾಗಿದೆ. ರೈಲ್ವೇ ಮೇಲ್ಸೇತುವೆಯ ಸಂಚಾರ ಅಪಾಯಕಾರಿಯಾಗಿದ್ದರೂ, ಪರ್ಯಾಯ ವ್ಯವಸ್ಥೆಯಿಲ್ಲದೆ, ಪ್ರಾಣ ಪಣಕ್ಕಿಟ್ಟು ಸಂಚರಿಸಬೇಕಾದ ಅನಿವಾರ್ಯತೆ ಇಲ್ಲಿನ ಜನರದ್ದಾಗಿದೆ.
ಹಿಂದೆ ತೋರಳ್ಳಿ – ಬೇಲೂ¤ರು ನಡುವೆ ದೋಣಿ ಮೂಲಕ ಜನ ಸಂಚರಿಸುತ್ತಿದ್ದರು. ಆದರೆ ಬಾರಂದಾಡಿ, ತೊಪ್ಲು ಪರಿಸರದ ಸೇತುವೆ, ರೈಲ್ವೇ ಸೇತುವೆ ಆದ ಬಳಿಕ ದೋಣಿ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಕಳುವಿನ ಬಾಗಿಲು ಸ್ತಬ್ಧವಾಯಿತು.
ಸೇತುವೆಗೆ ಬೇಡಿಕೆ
ಬಗ್ವಾಡಿ ಸೇತುವೆ, ತೊಪ್ಲು ಕಿರು ಸೇತುವೆ ಸಹಿತ ಕಿಂಡಿ ಅಣೆಕಟ್ಟು, ಕೊಂಕಣ ರೈಲ್ವೇ ಸೇತುವೆ ಅನಂತರ ಕಳುವಿನ ಬಾಗಿಲಲ್ಲಿ ದೋಣಿ ಸಂಚಾರವನ್ನು ಪ್ರಯಾಣಿಕ ರಿಲ್ಲದೆ ಸ್ಥಗಿತಗೊಳಿಸಲಾಯಿತು. ಬಾರಂದಾಡಿ, ಕುಂದಬಾರಂದಾಡಿ, ಬಟ್ಟೆಕುದ್ರು ಹೊಳ್ಮಗೆ ಪ್ರದೇಶದ ನಾಗರಿಕರು ಕಳುವಿನ ಬಾಗಿಲಲ್ಲಿ ದೋಣಿ ದಾಟಿ, ಬೇಲೂ¤ರು ಸೇರಿ ಅಲ್ಲಿಂದ ಬಸ್ ಹಿಡಿದು ಕುಂದಾಪುರ ಇನ್ನಿತರ ಪ್ರದೇಶಕ್ಕೆ ಹೋಗುತ್ತಿದ್ದರು. ಪರಿಸರದ ಕೂಲಿ, ಕೃಷಿಕರು, ಕೂಲಿ ಕಾರ್ಮಿಕರು ದೋಣಿ ದಾಟಿ ಕೆಲಸಕ್ಕೆ ಹೋಗಬೇಕಿತ್ತು. ಬಗ್ವಾಡಿ, ನೂಜಾಡಿ ಪರಿಸರದ ಜನರಿಗೆ ಬಗ್ವಾಡಿ ಸೇತುವೆ ಅವಲಂಬಿಸಿದರೆ, ಬಟ್ಟೆಕುದ್ರು ವಾಸಿಗಳು ತೊಪ್ಲು ಕಿಂಡಿ ಅಣೆಕಟ್ಟು ಮಾರ್ಗ ಬಳಸಿಕೊಂಡರೆ, ಉಳಿದವರು ತೋರಳ್ಳಿ ಕೊಂಕಣ ರೈಲ್ವೇ ಸೇತುವೆಯ ಮೂಲಕ ಹೊಳೆ ದಾಟುತ್ತಿದ್ದಾರೆ. ತೋರಳ್ಳಿ ಗುಡ್ಡದಿಂದ ಹೊಳೆಯವರೆಗೆ ರಸ್ತೆಯಿದೆ. ತೋರಳ್ಳಿಯಲ್ಲಿ ಮೇಲ್ಸೇತುವೆಯಾದರೆ, ಈ ಅಪಾಯಕಾರಿ ಸಂಚಾರ ತಪ್ಪಲಿದೆ. ಇಲ್ಲಿನ ಜನರಿಗೆ ಕುಂದಾಪುರಕ್ಕೆ ಹೋಗಲು 45 ನಿಮಿಷ ಬೇಕಿದ್ದು, ಮೇಲ್ಸೇತುವೆಯಾದರೆ ಕೇವಲ 15 ನಿಮಿಷ ಸಾಕು. ತೋರಳ್ಳಿ ಮೇಲ್ಸೇತುವೆಯು ಹಕ್ಲಾಡಿ ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿದೆ.
ಬಹು ದಿನದ ಬೇಡಿಕೆ
ರೈಲ್ವೇ ಮೇಲ್ಸೇತುವೆ ಕೆಳಗೆ ತೋರಳ್ಳಿ ಸಂಪರ್ಕ ರಸ್ತೆಯಿದ್ದು, ನದಿಗೆ ಸೇತುವೆಯಾಗಬೇಕು ಅನ್ನುವುದು ಈ ಭಾಗದ ಜನರ ಬಹುಕಾಲದ ಬೇಡಿಕೆ. ಪಾದಚಾರಿಗಳಿಗೆ ಹಾಗೂ ಲಘುವಾಹನ ಸಂಚಾರಕ್ಕೆ ಅನುಕೂಲ ಆಗುವಂತೆ ಸೇತುವೆಯಾದರೆ ಆರೇಳು ದೇವಸ್ಥಾನ, ನಾಲ್ಕಾರು ಊರು ಸಂಪರ್ಕಿಸಲು ಅನುಕೂಲವಾಗಲಿದೆ ಎನ್ನುತ್ತಾರೆ ಸ್ಥಳೀಯ ಗ್ರಾ.ಪಂ.
ಸದಸ್ಯ ಸುಭಾಶ್ ಶೆಟ್ಟಿ ಹೊಳ್ಮಗೆ
ನಿತ್ಯ 500+ ಮಂದಿ ಸಂಚಾರ
ಇಲ್ಲಿಂದ ರೈಲ್ವೇ ಸೇತುವೆ ಮೂಲಕ ಪ್ರತಿದಿನ ಶಾಲೆ- ಕಾಲೇಜಿಗೆ ಹೋಗುವ ಮಕ್ಕಳು, ಕೆಲಸಕ್ಕೆ ಹೋಗುವವರು, ಪೇಟೆಗೆ ತೆರಳುವವರು ಸೇರಿದಂತೆ 500ಕ್ಕೂ ಮಿಕ್ಕಿ ಮಂದಿ ಸಂಚರಿಸುತ್ತಾರೆ. ರೈಲ್ವೇ ಮೇಲ್ಸೇತುವೆ ಮೇಲಿನ ನಡಿಗೆ ಈ ಊರಿನ ಜನರಿಗೆ ಹಗ್ಗದ ಮೇಲಿನ ನಡಿಗೆಯಂತಾಗಿದೆ. ಕೆಲವು ವರ್ಷದ ಹಿಂದೆ ಇಲ್ಲಿ ಯುವಕನೋರ್ವ ಹೀಗೆ ನಡೆದುಕೊಂಡು ಹೋಗುವ ವೇಳೆ ಕೆಳಗೆ ಬಿದ್ದು ಸಾವನ್ನಪ್ಪಿದ್ದರು.
ಶೀಘ್ರ ಪ್ರಸ್ತಾವನೆ ಸಲ್ಲಿಕೆ
ತೋರಳ್ಳಿಯ ರೈಲ್ವೇ ಸೇತುವೆಯು ಹಳೆಯದಾಗಿದ್ದು, ಶಿಥಿಲಗೊಂಡಂತಿದೆ. ರೈಲ್ವೇ ಹಾಗೂ ನದಿಗೆ ಹೊಸ ಸೇತುವೆ ಅಗತ್ಯವಿದೆ. ಇದು ಹಕ್ಲಾಡಿ, ಕಟ್‌ಬೆಲ್ತೂರು ಎರಡೂ ಗ್ರಾ.ಪಂ. ವ್ಯಾಪ್ತಿಗೆ ಸಂಬಂಧಪಡುತ್ತಿದ್ದು, ನಮ್ಮ ಪಂಚಾಯತ್‌ನಿಂದ ಸೇತುವೆಗಾಗಿ ಕೊಂಕಣ ರೈಲ್ವೇ, ಶಾಸಕರಿಗೆ, ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
– ಚೇತನ್ ಮೊಗವೀರ, ಹಕ್ಲಾಡಿ ಗ್ರಾ.ಪಂ. ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.