ಗ್ರಾಮೀಣ ಗ್ರಂಥಪಾಲಕರ “ಕನಿಷ್ಠ ವೇತನ’ ಜಾರಿಗೆ ಬೇಡಿಕೆ
ಸಂಕಷ್ಟದಲ್ಲಿ ಉಡುಪಿ ಜಿಲ್ಲೆಯ ನೂರಕ್ಕೂ ಮಿಕ್ಕಿ ಗ್ರಂಥಪಾಲಕರು
Team Udayavani, Oct 3, 2020, 5:30 AM IST
ಸಾಂದರ್ಭಿಕ ಚಿತ್ರ
ಕುಂದಾಪುರ: ಕಳೆದ 32 ವರ್ಷಗಳಿಂದ ಗ್ರಾಮೀಣ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ಈಗಲೂ ಪಡೆಯುತ್ತಿರುವುದು ಅಲ್ಪ ಸಂಬಳ ಮಾತ್ರ. 2016ರಲ್ಲಿ ಮಾಸಿಕ 13,020 ರೂ. ಕನಿಷ್ಠ ವೇತನ ನಿಯಮ ಜಾರಿಗೆ ಸರಕಾರ ಅಧಿಸೂಚನೆ ಹೊರಡಿಸಿದ್ದರೂ, 2017 ರಲ್ಲಿ ಅದೇ ಅಧಿಸೂಚನೆಯನ್ನು ಹಿಂಪಡೆಯುವ ಮೂಲಕ ಗ್ರಂಥಪಾಲಕರ ಆಸೆಗೆ ತಣ್ಣೀರೆರಚಿದೆ. ಅದಾಗಿ 3-4 ವರ್ಷ ಕಳೆದರೂ ಇನ್ನೂ ಗ್ರಾಮೀಣ ಗ್ರಂಥಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉಡುಪಿಯ ನೂರಕ್ಕೂ ಮಿಕ್ಕಿ ಸೇರಿದಂತೆ ರಾಜ್ಯಾದ್ಯಂತ ಒಟ್ಟಾರೆ 6,667 ಮಂದಿ ಗ್ರಂಥಪಾಲಕರು ಅದೇ 7 ಸಾವಿರ ರೂ. ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದಾರೆ.
ಗ್ರಂಥಪಾಲಕರ ಅಳಲು
2019ರಲ್ಲಿ ಗ್ರಾಮೀಣ ಗ್ರಂಥಾ ಲಯಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪಂಚಾಯತ್ ರಾಜ್ ಇಲಾಖೆಗೆ ವರ್ಗಾ ಯಿಸಿದರೂ ಗ್ರಾಮೀಣ ಗ್ರಂಥಾಲಯಗಳ ಮೇಲ್ವಿಚಾರಕರ ದೆಸೆ ಮಾತ್ರ ಬದಲಾಗಲೇ ಇಲ್ಲ. ಕೆಲ ಪಂಚಾಯತ್‌ಗಳು ಗ್ರಂಥಾಲಯ ಕೆಲಸ ಮಾತ್ರವಲ್ಲದೆ ತಮ್ಮ ಪಂಚಾಯತ್ ಕಚೇರಿ ಕೆಲಸವನ್ನು ಮಾಡಿಸಿಕೊಂಡು, ಇಲಾಖೆಯ ಆದೇಶದಂತೆ ಯಾವುದೇ ಭದ್ರತೆ ನೀಡದೇ ಕೊರೊನಾ ಕುರಿತ ಕೆಲಸವನ್ನು ಮಾಡಿಸಿಕೊಂಡರೂ ಹೆಚ್ಚಿನ ವೇತನವಾಗಲಿ, ಗೌರವ ಧನವಾಗಲಿ ನೀಡಲೇ ಇಲ್ಲ ಎನ್ನುವುದು ಗ್ರಂಥಪಾಲಕರ ಅಳಲು.
ಶೋಚನೀಯ ಬದುಕು
ಹಿಂದೆ ಗ್ರಂಥಾಲಯ ಇಲಾಖೆಯೇ ಸ್ವತಃ ಸರಕಾರಿ ಮಾದರಿ ಸೇವಾ ನಿಯಮಾವಳಿ ಅನುಸರಿಸಿ ರೋಸ್ಟರ್ ಪದ್ಧತಿ ಅನ್ವಯವೇ ಗ್ರಾಮೀಣ ಗ್ರಂಥಪಾಲಕರನ್ನು ನೇಮಕ ಮಾಡಿಕೊಂಡರೂ, ಇವರ ಬದುಕು ಮಾತ್ರ ಅತ್ಯಂತ ಶೋಚನೀಯವಾಗಿದೆ. ಗ್ರಂಥಪಾಲಕರಾಗಿ ಕೆಲಸ ಮಾಡುತ್ತಿದ್ದ 500 ಮಂದಿ ಅಕಾಲಿಕ ಸಾವನ್ನಪ್ಪಿದರೂ, ಅವರ ಕುಟುಂಬಸ್ಥರಿಗೆ ಉದ್ಯೋಗವೇ ಕಲ್ಪಿಸಿಲ್ಲ. ನೂರಾರು ಮಂದಿ ನಿವೃತ್ತಿ ಯಾದರೂ ಯಾವುದೇ ಭದ್ರತೆ ಯಿಲ್ಲ. ಒಂದು ಸಾವಿರ ಮಂದಿ ಗ್ರಂಥಪಾಲಕರು ನಿವೃತ್ತಿ ಅಂಚಿನಲ್ಲಿ ದ್ದಾರೆ. ವಯಸ್ಸಿನ ಮಿತಿಯಿಂದ ಬೇರೆ ಕೆಲಸಕ್ಕೆ ಸೇರಲು ಆಗಲ್ಲ. ಮಹಿಳೆ, ಅಂಗವಿಕಲರು, ಪ.ಜಾತಿ/ ಪಂಗಡದ ಶೇ. 50 ರಷ್ಟು ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಶೇ. 90 ರಷ್ಟು ಮಂದಿ ಕೆಲಸ ನಿರ್ವಹಿಸುತ್ತಿದ್ದು, ಈ ಅಲ್ಪ ವೇತನದಿಂದ ಕುಟುಂಬ ನಿರ್ವಹಣೆಯನ್ನು ಮಾಡಲಾಗದೇ ಸಂಕಷ್ಟದಲ್ಲಿದ್ದಾರೆ.
ಎಲ್ಲೆಲ್ಲಿ ಎಷ್ಟು?
ಉಡುಪಿ ಜಿಲ್ಲೆಯಲ್ಲಿ ಒಟ್ಟಾರೆ ಜಿಲ್ಲಾ ಕೇಂದ್ರ, ನಗರ ಕೇಂದ್ರ, ತಾಲೂಕು ಕೇಂದ್ರಗಳಲ್ಲಿರುವ ಗ್ರಂಥಾಲಯಗಳೆಲ್ಲ ಸೇರಿ 157 ಸಾರ್ವಜನಿಕ ಗ್ರಂಥಾಲಯಗಳಿವೆ. ಆದರೆ ಜಿಲ್ಲೆಯಲ್ಲಿ ಗ್ರಾಮೀಣ ಅಂದರೆ ಪಂಚಾಯತ್ ಮಟ್ಟದಲ್ಲಿರುವ ಗ್ರಂಥಾಯಲಗಳು 147. ಕುಂದಾಪುರ ತಾಲೂಕಿನಲ್ಲಿ 56, ಉಡುಪಿ ತಾಲೂಕಿನಲ್ಲಿ 61 ಹಾಗೂ ಕಾರ್ಕಳ ತಾಲೂಕಿನಲ್ಲಿ 30 ಗ್ರಾಮೀಣ ಗ್ರಂಥಾಲಯಗಳಿವೆ.
ಸಮಯವೂ ಕಡಿತ
ಹಿಂದೆ ಬೆಳಗ್ಗೆ 4 ಗಂಟೆ ಹಾಗೂ ಸಂಜೆ 4 ಗಂಟೆ ಒಟ್ಟು 8 ಗಂಟೆ ದಿನಂಪ್ರತಿ ಗ್ರಂಥಾಲಯವನ್ನು ತೆರೆಯಬೇಕು ಎನ್ನುವ ನಿಯಮವಿತ್ತು. ಆದರೆ ಈಗ ಸಮಯವನ್ನು ದಿನಕ್ಕೆ ಕೇವಲ 4 ಗಂಟೆ ಮಾತ್ರ ಅಂದರೆ ಬೆಳಗ್ಗೆ 2 ಹಾಗೂ ಸಂಜೆ 2 ಗಂಟೆ ಮಾತ್ರ ತೆರೆದಿಡಲು ಗ್ರಂಥಾಲಯ ನಿರ್ದೇಶಕರೇ ಆದೇಶಿಸಿದ್ದರು. ಇದರಿಂದ ಗ್ರಾಮೀಣ ಭಾಗದ ಶಾಲಾ – ಕಾಲೇಜು ಹೋಗುವ ಮಕ್ಕಳಿಗೆ, ಸಾರ್ವಜನಿಕರಿಗೆ ಪತ್ರಿಕೆ, ಪುಸ್ತಕಗಳನ್ನು ಓದಲು ತುಂಬಾ ತೊಂದರೆಯಾಗುತ್ತಿದೆ.
ಸಚಿವರಿಗೆ ಮನವಿ ಸಲ್ಲಿಕೆ
ಗ್ರಾಮೀಣ ಗ್ರಂಥಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಂಥಾಲಯ ಮೇಲ್ವಿಚಾರಕರ ಬದುಕು ಸಂಕಷ್ಟದಲ್ಲಿದೆ. 2016 ರಲ್ಲಿ ಹೊರಡಿಸಿದ ಅಧಿಸೂಚನೆಯಂತೆ ಕನಿಷ್ಠ ವೇತನ ಜಾರಿಯಾಗಲಿ. ಸಮಯ ಮಿತಿ ಸಡಿಲಿಸಿ ದಿನಕ್ಕೆ 8 ಗಂಟೆ ತೆರೆದಿರುವಂತೆ ಮಾಡಲಿ. ಕೆಲಸದ ಭದ್ರತೆ ನೀಡಲಿ ಎನ್ನುವುದು ಎಲ್ಲ ಗ್ರಂಥಪಾಲಕರ ಬೇಡಿಕೆಯಾಗಿದೆ. ಈ ಬಗ್ಗೆ ನಮ್ಮ ರಾಜ್ಯ ಸಂಘದಿಂದ ಸಚಿವ ಈಶ್ವರಪ್ಪನವರಿಗೂ ಮನವಿ ಸಲ್ಲಿಸಲಾಗಿದೆ.
– ಸುರೇಶ್ ಹೆಮ್ಮಾಡಿ, ಅಧ್ಯಕ್ಷರು, ಕುಂದಾಪುರ ತಾ| ಗ್ರಾಮೀಣ ಗ್ರಂಥಾಲಯ ನೌಕರರ ಸಂಘ
ಪ್ರಸ್ತಾವ ಸಲ್ಲಿಕೆ
ಗ್ರಾಮೀಣ ಗ್ರಂಥಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಂಥಾಲಯ ಮೇಲ್ವಿಚಾರಕರ ವೇತನ ಹೆಚ್ಚಳ ಹಾಗೂ ಕನಿಷ್ಠ ವೇತನ ನಿಯಮ ಜಾರಿ ಕುರಿತಂತೆ ಈಗಾಗಲೇ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪಂಚಾಯತ್ ರಾಜ್ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ.
– ಸತೀಶ್ ಎಸ್. ಹೊಸಮನಿ, ರಾಜ್ಯ ನಿರ್ದೇಶಕರು, ಗಂಥಾಲಯ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.