ಗುಲ್ವಾಡಿ ಬೈಲ್ಮನೆ ಕೆರೆಗೆ ನೀರು ಹಾಯಿಸಲು ಬೇಡಿಕೆ
ಸೌಕೂರು ಏತ ನೀರಾವರಿ ಯೋಜನೆ
Team Udayavani, May 31, 2022, 12:02 PM IST
ಗುಲ್ವಾಡಿ: ‘ದೀಪದ ಬುಡದಲ್ಲಿ ಕತ್ತಲು’ ಎಂಬಂತೆ ಸೌಕೂರು ಏತ ನೀರಾವರಿ ಯೋಜನೆ ಆರಂಭಗೊಳ್ಳುವ ಗುಲ್ವಾಡಿಯಲ್ಲಿಯೇ ಕೃಷಿಗೆ ಹಾಗೂ ಕುಡಿಯುವ ನೀರಿನ ಸಮಸ್ಯೆಯಿದ್ದು, ಇಲ್ಲಿನ ಬೈಲ್ಮನೆ ಕೆರೆಗೆ ನೀರು ಹಾಯಿಸಿದರೆ ಈ ಸಮಸ್ಯೆ ಪರಿಹಾರವಾಗಲಿದ್ದು, ಈ ಕುರಿತಂತೆ ಇಲ್ಲಿನ ಗ್ರಾಮಸ್ಥರು ಬೇಡಿಕೆಯಿಟ್ಟಿದ್ದಾರೆ.
ಗುಲ್ವಾಡಿಯಲ್ಲಿ ವೆಂಟೆಂಡ್ ಡ್ಯಾಂ ನಿರ್ಮಾಣವಾದ ಬಳಿಕ ಇಲ್ಲಿನ ಬೈಲ್ಮನೆ ಕೆರೆ, ಗುಲ್ವಾಡಿಯ ಕೆಲವು ಭಾಗ, ಗುಡರಹಕ್ಲು ಭಾಗಗಳ ಕೃಷಿಗೆ ಉಪ್ಪು ನೀರಿನ ಸಮಸ್ಯೆ ಎದುರಾಗುತ್ತಿದೆ. ಹಿಂದೆ ಈ ಸಮಸ್ಯೆ ಇರಲಿಲ್ಲ.
ನೀರು ಹಾಯಿಸಿದರೆ ಅನುಕೂಲ
ಗುಲ್ವಾಡಿಯಲ್ಲಿರುವ ಬೆಲ್ಮನೆ ಕೆರೆಯು ವಿಶಾಲವಾಗಿದ್ದು, ಬೇಸಗೆಯಲ್ಲಿಯೂ ಈ ಕೆರೆಯಲ್ಲಿ ನೀರಿದ್ದರೂ, ಉಪ್ಪಿನ ಅಂಶ ಇರುತ್ತದೆ. ಇದನ್ನು ಕೃಷಿಗೆ ಬಳಸಲು ಸಾಧ್ಯವಿಲ್ಲ. ಆ ಕಾರಣಕ್ಕೆ ಈಗಿನ ಸೌಕೂರು ಏತ ನೀರಾವರಿ ಯೋಜನೆಯಡಿ ಹತ್ತಾರು ಗ್ರಾಮಗಳು, ದೂರದ ಬೇರೆ ಬೇರೆ ಊರುಗಳಿಗೆ ನೀರು ಕೊಂಡೊಯ್ಯಲಾಗುತ್ತಿದ್ದು, ಆದರೆ ಇಲ್ಲೇ ಇರುವ ಈ ಕೆರೆಗೆ ನೀರು ಹಾಯಿಸಿ ದರೆ ಬಹಳಷ್ಟು ಪ್ರಯೋಜನವಾಗಲಿದೆ ಎನ್ನುವುದು ಇಲ್ಲಿನ ರೈತರ ಬೇಡಿಕೆಯಾಗಿದೆ.
25 ಎಕರೆಗೆ ವರದಾನ
ಇದರಿಂದಾಗಿ ಇಲ್ಲಿನ ಸುಮಾರು 20-25 ಮಂದಿಯ ಸುಮಾರು 25 ಎಕರೆ ಪ್ರದೇಶದಲ್ಲಿ ಹಿಂಗಾರು ಹಂಗಾಮಿನ ಭತ್ತದ ಕೃಷಿಗೆ ತೊಡಕಾಗಿದೆ. ಕೆಲವರಂತೂ ಇಲ್ಲಿ ಉಪ್ಪು ನೀರಿನ ಸಮಸ್ಯೆಯಿಂದಾಗಿ ಹಿಂಗಾರು ಹಂಗಾಮಿನಲ್ಲಿ ಭತ್ತದ ಕೃಷಿಯನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಇನ್ನು ಕೃಷಿಗೆ ಮಾತ್ರವಲ್ಲ, ಬೇಸಗೆಯಲ್ಲಿ ಈ ಭಾಗದಲ್ಲಿ ನೀರಿನ ಸಮಸ್ಯೆಯೂ ಇದ್ದು, ಈ ಕೆರೆಗೆ ನೀರು ಹಾಯಿಸಿದರೆ, ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳ ಬಾವಿಯ ಅಂತರ್ಜಲ ಮಟ್ಟವೂ ಸುಧಾರಿಸಲಿದೆ.
ಮನವಿ ಸಲ್ಲಿಕೆ
ಅಲ್ಲಿನ ಗ್ರಾಮಸ್ಥರು ಈ ಕುರಿತಂತೆ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿದರೆ, ಖಂಡಿತವಾಗಿಯೂ ಈ ಬಗ್ಗೆ ಸಂಬಂಧಪಟ್ಟ ವಾರಾಹಿ ನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. – ಸುಧೀಶ್ ಶೆಟ್ಟಿ, ಅಧ್ಯಕ್ಷರು, ಗುಲ್ವಾಡಿ ಗ್ರಾ.ಪಂ.
ಪರಿಶೀಲನೆ
ಗುಲ್ವಾಡಿಯಲ್ಲಿ ಈಗಾಗಲೇ ಒಂದೆರಡು ಕಡೆಗಳಲ್ಲಿ ಸೌಕೂರು ಏತ ನೀರಾವರಿ ಯೋಜನೆಯ ನೀರನ್ನು ಹಾಯಿಸಲು ಕ್ರಮಕೈಗೊಳ್ಳಲಾಗಿದೆ. ಬೈಲ್ಮನೆ ಕೆರೆಗೆ ನೀರು ಹಾಯಿಸುವ ಸಂಬಂಧ ಅಲ್ಲಿಗೆ ಭೇಟಿ, ನೀಡಿ ಪರಿಶೀಲಿಸಲಾಗುವುದು. – ಪ್ರಸನ್ನ ಶೇಟ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ವಾರಾಹಿ ನಿಗಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.