ಇಂದಿನಿಂದ ಬೆಳಗಲಿದೆ ದೀಪಗಳ ಸಾಲು; ಚಂದದ ಗೂಡು ದೀಪಗಳಿಗೆ ಹೆಚ್ಚಿದ ಬೇಡಿಕೆ


Team Udayavani, Nov 13, 2020, 2:04 AM IST

kudಇಂದಿನಿಂದ ಬೆಳಗಲಿದೆ ದೀಪಗಳ ಸಾಲು; ಚಂದದ ಗೂಡು ದೀಪಗಳಿಗೆ ಹೆಚ್ಚಿದ ಬೇಡಿಕೆ

ವಾಸುದೇವ ಭಟ್‌ ಅವರು ತಯಾರಿಸಿದ ದೇಸೀ ಗೂಡುದೀಪಗಳು.

ಕುಂದಾಪುರ: ದೀಪಾವಳಿ ಹಬ್ಬ ಮನೆ-ಮನಗಳಲ್ಲಿ ಸಡಗರ ಮೂಡಿಸುತ್ತಿದೆ. ಮಾರುಕಟ್ಟೆಯಲ್ಲಿ ಬಹುತೇಕ ಎಲ್ಲ ವ್ಯಾಪಾರಗಳೂ ಚಿಗಿತುಕೊಂಡಿದ್ದು ದೀಪಾವಳಿಯನ್ನು ಜನರೂ ಉಲ್ಲಾಸದಿಂದ ಕಳೆಯಲು ಸಜ್ಜಾಗಿದ್ದಾರೆ.

“ಬೆಳಕಿನ ಹಬ್ಬ ದೀಪಾವಳಿ’ ಈ ಶಬ್ದವೇ ಸಡಗರ, ಸಂಭ್ರಮವನ್ನು ಸೂಚಿಸುತ್ತದೆ. ಎಳೆಯರಿಂದ ಹಿರಿಯರ ತನಕ, ಹೊಸದಾಗಿ ಮದುವೆಯಾದವರಿಂದ ಆರಂಭಿಸಿ ಹಳೆ ದಂಪತಿಯ ತನಕ ಸಂಭ್ರಮ ಮತ್ತು ನಿರೀಕ್ಷೆಗಳಿಂದ ಕಾದಿರುವ ಹಬ್ಬ. ದೀಪಾವಳಿ ಅಂದರೆ ಹಬ್ಬಮಾತ್ರವಲ್ಲ; ಅದು ಸಮಗ್ರ ಕುಟುಂಬಕ್ಕೆ ಆನಂದ ಮತ್ತು ಚೆ„ತನ್ಯವನ್ನು ನೀಡುವ ಸಂದರ್ಭ. ಸಮಗ್ರ ಕುಟುಂಬವನ್ನು ತನ್ನ ಪರಿಸರದ ಜತೆ ಬೆಸೆದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಂತೆ ಮಾಡುವ ಸಂದರ್ಭವೂ ಹೌದು.

ಯಾವಾಗ ಆರಂಭ
ಅಶ್ವಯುಜ ಕೃಷ್ಣ ತ್ರಯೋದಶಿ (ಧನತ್ರಯೋದಶಿ), ಅಶ್ವಯುಜ ಕೃಷ್ಣ ಚತುರ್ದಶಿ (ನರಕಚತುರ್ದಶಿ), ಅಮಾವಾಸ್ಯೆ (ಲಕ್ಷ್ಮೀ ಪೂಜೆ) ಮತ್ತು ಆಶ್ವಯುಜ ಶುಕ್ಲ ಪಾಡ್ಯ (ಬಲಿಪಾಡ್ಯ) ಈ ನಾಲ್ಕು ದಿನಗಳ ಕಾಲ ದೀಪಾವಳಿಯನ್ನು ಆಚರಿಸಲಾಗುತ್ತದೆ. ಕೆಲವರು ತ್ರಯೋದಶಿಯನ್ನು ದೀಪಾವಳಿಯಲ್ಲಿ ಸೇರಿಸದೆ ಉಳಿದ 3 ದಿನಗಳನ್ನು ದೀಪಾವಳಿಯೆಂದು ಆಚರಿಸುತ್ತಾರೆ. ಗೋವತ್ಸದ್ವಾದಶಿ ಮತ್ತು ಸಹೋದರ ಬಿದಿಗೆಯು ದೀಪಾವಳಿಯ ಸಮಯದಲ್ಲಿಯೇ ಬರುತ್ತದೆ. ಆದುದರಿಂದ ಇದನ್ನು ದೀಪಾವಳಿಯೆಂದೇ ಪರಿಗಣಿಸಲಾಗುತ್ತದೆ.

ಈ ಸಲ ಕೆಲವರು ನ. 13ರಂದು ಚತುರ್ದಶಿ ಆರಂಭ ಮಾಡಿಕೊಂಡು 15ಕ್ಕೆ ಹಬ್ಬ ಮುಗಿಸುತ್ತಾರೆ. ಇನ್ನು ಕೆಲವರು 16ಕ್ಕೆ ಪಾಡ್ಯ ಆಚರಿಸುತ್ತಾರೆ. ಕೆಲವು ಪಂಚಾಂಗದ ಪ್ರಕಾರ ನ.16ರಂದು ಪಾಡ್ಯದ ಅವಧಿ 10.33ಗಳಿಗೆಯಿದ್ದು ಉಪರಿ ಬಿದಿಗೆ ಬಂದ ಕಾರಣ ಪಾಡ್ಯ ಆಚರಣೆ 15ರಂದೇ ಬರುತ್ತದೆ ಎನ್ನಲಾಗುತ್ತಿದೆ.

ಮಾರುಕಟ್ಟೆ ಚೇತರಿಕೆ
ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಹಾಗೆಯೇ ಸ್ವದೇಶೀ ಗೂಡುದೀಪಗಳ ಬೇಡಿಕೆ ಕಳೆದ ವರ್ಷದಂತೆಯೇ ಇದೆ. ಈಗಾಗಲೇ ಬಹುತೇಕ ಅಂಗಡಿಗಳಲ್ಲಿ ಒಂದು ಸುತ್ತು ವ್ಯಾಪಾರ ಮುಗಿದಿದೆ. ಇನ್ನಷ್ಟು ಆರ್ಡರ್‌ ಹಾಕಬೇಕೇ ಬೇಡವೇ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಚೌತಿ, ನವರಾತ್ರಿಗೆ ಹೋಲಿಸಿದರೆ ದೀಪಾವಳಿ ವ್ಯಾಪಾರಿಗಳ ಗಲ್ಲಾದಲ್ಲಿ ಬೆಳಕು ಕಾಣಿಸುವಂತೆ ಮಾಡಿದೆ.

ಆತ್ಮನಿರ್ಭರ ವ್ಯಾಪಾರ
ಗೂಡುದೀಪಗಳ ತಯಾರಿಕೆಗೆ ಸ್ಥಳೀಯವಾಗಿ ಒತ್ತು ನೀಡಲಾಗುತ್ತಿದೆ. ಹಣತೆ ತಯಾರಿ, ಖರೀದಿಗೂ ವ್ಯಾಪಾರಿಗಳು ಸ್ಥಳೀಯರಿಗೆ ಪ್ರಾಮುಖ್ಯ ನೀಡುತ್ತಿದ್ದಾರೆ. ಗೋಮಯ ದೀಪ ಇನ್ನೂ ಇಲ್ಲಿನ ಮಾರುಕಟ್ಟೆಗೆ ಬಂದಿಲ್ಲ. ಮಣ್ಣಿನ ಹಣತೆಗೆ ಹೆಚ್ಚಿನ ಬೇಡಿಕೆಯಿದೆ ಎನ್ನುತ್ತಾರೆ ವ್ಯಾಪಾರಿಗಳು. “ಉದಯವಾಣಿ’ ಈ ಬಾರಿ ಗೂಡುದೀಪದ ಸ್ಪರ್ಧೆ ಆಯೋಜಿಸಿದ್ದು , ಗೂಡುದೀಪ ತಯಾರಿ ಕುರಿತಾಗಿಯೂ ಓದುಗರಿಗೆ ಮಾಹಿತಿ ನೀಡಿದೆ.

ದೇಸೀದೀಪ
ನಾವು ಚೀನ ಗೂಡುದೀಪಗಳನ್ನು ತರುತ್ತಿಲ್ಲ. ದೇಸೀ ದೀಪಗಳಿಗೆ ಆದ್ಯತೆ ನೀಡುತ್ತಿದ್ದೇವೆ. ಬೇಡಿಕೆ ಕಡಿಮೆಯಾಗಿಲ್ಲ. ಎಲ್ಲ ಸಂಕಷ್ಟ ಮುಗಿದು ನಾಡಿನ ಜನತೆ ದೀಪಾವಳಿ ಸಂಭ್ರಮದಿಂದ ಆಚರಿಸುವಂತಾಗಿದೆ.
-ಶೋಭಾ ಭಂಡಾರ್‌ಕಾರ್‌ ವ್ಯಾಪಾರಿ, ಕುಂದಾಪುರ

ಟಾಪ್ ನ್ಯೂಸ್

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Untitled-1

Missing case: ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ; ದೂರು ದಾಖಲು

9

Kaup: ಬೀಚ್‌ನಲ್ಲಿನ್ನು ಪ್ಯಾರಾ ಮೋಟರಿಂಗ್‌

8(1

Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ

7

Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Untitled-1

Missing case: ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ; ದೂರು ದಾಖಲು

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.