government bus ವಂಚಿತ ಕೊಲ್ಲೂರು ಮಹಿಳಾ ಯಾತ್ರಿಕರಲ್ಲಿ ನಿರಾಸೆ!
Team Udayavani, Jun 25, 2023, 8:10 AM IST
ಕೊಲ್ಲೂರು: ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಇದ್ದರೂ ಕರಾವಳಿಯ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಕೊಲ್ಲೂರು ಮತ್ತು ಉಡುಪಿ ಜಿಲ್ಲೆಯ ಹಲವಾರು ದೇವಸ್ಥಾನಗಳಿಗೆ ಸರಕಾರಿ ಬಸ್ ಸಂಪರ್ಕವೇ ಇಲ್ಲದ ಕಾರಣ ಮಹಿಳೆಯರ ನಿರಾಸೆಗೆ ಕಾರಣವಾಗಿದೆ.
ಧರ್ಮಸ್ಥಳ, ಸುಬ್ರಹ್ಮಣ್ಯ, ಉಡುಪಿ ಮುಂತಾದೆಡೆ ಬಹಳಷ್ಟು ಸರಕಾರಿ ಬಸ್‌ಗಳು ಓಡಾಡುತ್ತವೆ. ಹಾಗಾಗಿ ರಾಜ್ಯದ ವಿವಿಧ ಜಿಲ್ಲೆಗಳ ಮಹಿಳೆಯ ಆ ಕ್ಷೇತ್ರಗಳಿಗೆ ಉಚಿತವಾಗಿ ಯಾತ್ರೆಗೈಯುತ್ತಿದ್ದಾರೆ. ಆದರೆ ಉಡುಪಿಯಿಂದ ಕೋಟ ಅಮೃತೇಶ್ವರಿ ದೇಗುಲ, ಮಂದಾರ್ತಿ, ಆನೆಗುಡ್ಡೆ, ಕೋಟೇಶ್ವರ, ಹಟ್ಟಿಯಂಗಡಿ, ಸೌಕೂರು, ಬಗ್ವಾಡಿ, ಮಾರಣಕಟ್ಟೆ ಹಾಗೂ ಕೊಲ್ಲೂರು, ಬೈಂದೂರು ಕ್ಷೇತ್ರಗಳಿಗೆ ತೆರಳುವ ಮಹಿಳೆಯರಿಗೆ ಸರಕಾರಿ ಬಸ್‌ಗಳ ಸೌಲಭ್ಯ ಇಲ್ಲ.
ಕೊಲ್ಲೂರು-ಧರ್ಮಸ್ಥಳ ನಡುವೆ ಇದ್ದ 2 ಕೆಎಸ್ಸಾರ್ಟಿಸಿ ಬಸ್‌ಗಳು ಮತ್ತು ಕೊಲ್ಲೂರು-ಮೈಸೂರು ನಡುವೆ ಇದ್ದ ಬಸ್ ಕೂಡ ರದ್ದಾಗಿದೆ. ಈ ಮಾರ್ಗವಾಗಿ ಉದ್ಯೋಗ ನಿಮಿತ್ತ ನಿತ್ಯ ಸಂಚರಿಸುವ ಮಹಿಳೆಯರು ಕೂಡ ಹಣ ತೆತ್ತು ಸಂಚರಿಸುವ ಅನಿವಾರ್ಯ ಎದುರಾಗಿದೆ.
ಹೆಚ್ಚುವರಿಗೆ ಬಸ್‌ಗೆ ಬೇಡಿಕೆ
ಉಚಿತ ಪ್ರಯಾಣದಿಂದ ವಂಚಿತರಾಗಿರುವ ಉಡುಪಿ ಜಿಲ್ಲೆಯ ಮಹಿಳಾ ಪ್ರಯಾಣಿಕರು ಹೆಚ್ಚುವರಿ ಸಾರಿಗೆ ಬಸ್‌ಗಳನ್ನು ಈ ಮಾರ್ಗವಾಗಿ ಸಂಚರಿಸಲು ಕ್ರಮ ಕೈಗೊಳ್ಳುವಂತೆ ಕೆಎಸ್ಸಾರ್ಟಿಸಿಯನ್ನು ಆಗ್ರಹಿಸಿದ್ದಾರೆ.
ಕನಿಷ್ಠ 8 ಸಾವಿರ ಯಾತ್ರಿಕರು
ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ ಕೊಲ್ಲೂರು ಸಹಿತ ಉಡುಪಿ ಜಿಲ್ಲೆಯ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಸಾವಿರಾರು ಮಹಿಳಾ ಯಾತ್ರಾರ್ಥಿಗಳು ಆಗಮಿಸುತ್ತಾರೆ. ಅದರಲ್ಲೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ
ಪ್ರತೀ ದಿನ ಕನಿಷ್ಠ 8 ಸಾವಿರ ಭಕ್ತರು ಆಗಮಿಸುತ್ತಿದ್ದು, ಅವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು. ಉತ್ತರ ಕರ್ನಾಟಕದ ಅನೇಕ ಭಕ್ತರು ಸರಕಾರಿ ಬಸ್‌ಗಳಲ್ಲಿ ಉಡುಪಿಗೆ ಆಗಮಿಸಿ ಅಲ್ಲಿಂದ ಖಾಸಗಿ ಬಸ್‌ಗಳಲ್ಲಿ ವಿವಿಧ ದೇವಸ್ಥಾನಗಳಿಗೆ ತೆರಳುತ್ತಾರೆ. ಕೊಲ್ಲೂರಿಗೆ ಕೆಎಸ್ಸಾರ್ಟಿಸಿ ಬಸ್ ಇಲ್ಲದಿರುವುದರಿಂದ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.
ಕೊಲ್ಲೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಾಗಲು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಬಸ್ ಸೌಲಭ್ಯ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಬೈಂದೂರು ಕ್ಷೇತ್ರದಲ್ಲಿ ಸರಕಾರಿ ಬಸ್ ಸೌಲಭ್ಯ ಹೆಚ್ಚಿಸುವಂತೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು.
– ಗುರುರಾಜ ಗಂಟಿಹೊಳೆ, ಶಾಸಕರು, ಬೈಂದೂರು ಕ್ಷೇತ್ರ
ಹುಬ್ಬಳ್ಳಿಯಿಂದ ಉಡುಪಿ ತನಕ ಸರಕಾರಿ ಬಸ್‌ನಲ್ಲಿ ಬಂದೆವು. ಆದರೆ ಉಡುಪಿಯಿಂದ ಕೊಲ್ಲೂರಿಗೆ ಸಾಗಲು ಸರಕಾರಿ ಬಸ್ ಸೌಲಭ್ಯವಿಲ್ಲದಿರುವುದು ಶಕ್ತಿ ಯೋಜನೆಯ ಸೌಲಭ್ಯದಿಂದ ನಮ್ಮನ್ನು ವಂಚಿತರಾಗುವಂತೆ ಮಾಡಿದೆ. ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು.
– ಸಿಂಗಾರಮ್ಮ,
ಹುಬ್ಬಳ್ಳಿ, ಪ್ರಯಾಣಿಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.