ಹಾಲಾಡಿ ಬಸ್ ನಿಲ್ದಾಣಕ್ಕೆ ಅಭಿವೃದ್ಧಿ ‘ಭಾಗ್ಯ’
ಬಸ್ ನಿಲ್ದಾಣ ಸಂಪೂರ್ಣ ಕಾಂಕ್ರೀಟ್ ಕಾಮಗಾರಿ, ಇಂಟರ್‌ಲಾಕ್ ಅಳವಡಿಕೆ ; ರಿಕ್ಷಾ ನಿಲ್ದಾಣವು ಅಭಿವೃದ್ಧಿ
Team Udayavani, Nov 22, 2022, 4:58 PM IST
ಹಾಲಾಡಿ: ಮಲೆನಾಡು, ಕುಂದಾಪುರ, ಉಡುಪಿ ಹೀಗೆ ಹತ್ತಾರು ಊರುಗಳನ್ನು ಬೆಸೆಯುವ ಪ್ರಮುಖ ಪೇಟೆಯಾದ ಹಾಲಾಡಿಯ ಬಸ್ ನಿಲ್ದಾಣದ ಅಭಿವೃದ್ಧಿ ಬೇಡಿಕೆಯೂ ಕೊನೆಗೂ ಸಾಕಾರಗೊಂಡಿದೆ. ಇಲ್ಲಿನ ಬಸ್ ನಿಲ್ದಾಣದ ಅಭಿವೃದ್ಧಿಗೆ ಹಲವು ವರ್ಷಗಳಿಂದ ಬೇಡಿಕೆ ಇತ್ತು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಮುತುವರ್ಜಿಯಲ್ಲಿ ಹಾಲಾಡಿಯ ಬಸ್ ನಿಲ್ದಾಣ, ರಿಕ್ಷಾ ನಿಲ್ದಾಣದ ಕಾಂಕ್ರೀಟ್ ಕಾಮಗಾರಿ ಹಾಗೂ ಕೆಲವೆಡೆ ಇಂಟರ್‌ಲಾಕ್ ಅಳವಡಿಕೆಗೆ ಅನುದಾನ ಮಂಜೂರಾಗಿತ್ತು. ಅದರ ಕಾಮಗಾರಿಯು ನಡೆದಿದ್ದು, ಈಗ ಪೂರ್ಣಗೊಂಡಿದೆ. ಕಾಂಕ್ರೀಟ್ ಕಾಮಗಾರಿಗಾಗಿ 15 ಲಕ್ಷ ರೂ. ಹಾಗೂ ಇಂಟರ್‌ಲಾಕ್‌ಗೆ 2.70 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಪ್ರಮುಖ ಪೇಟೆ
ಹಾಲಾಡಿಯು ಕುಂದಾಪುರ, ಕೋಟೇಶ್ವರ, ಅಮಾಸೆಬೈಲು, ಸಿದ್ದಾಪುರ, ಶಂಕರನಾರಾಯಣ, ಮಂಗಳೂರು, ಉಡುಪಿ, ಮಣಿಪಾಲ, ಶಿವಮೊಗ್ಗ, ತೀರ್ಥಹಳ್ಳಿ, ಆಗುಂಬೆ, ಹೆಬ್ರಿ ಮೊದಲಾದ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಪೇಟೆಯಾಗಿದೆ. ಇದಲ್ಲದೆ ಹಾಲಾಡಿ ಮೂಲಕವೇ ಬೈಂದೂರು – ವಿರಾಜಪೇಟೆ ರಾಜ್ಯ ಹೆದ್ದಾರಿಯು ಹಾದುಹೋಗುತ್ತದೆ. ಈ ಭಾಗಗಳಿಗೆ ಸಂಚರಿಸುವ ಬಸ್‌ಗಳೆಲ್ಲ ಇಲ್ಲಿನ ಬಸ್ ನಿಲ್ದಾಣಕ್ಕೆ ಬಂದೇ ಹೋಗುತ್ತದೆ. ನಿತ್ಯ ನೂರಾರು ಮಂದಿ ಈ ಬಸ್ ನಿಲ್ದಾಣವನ್ನು ಆಶ್ರಯಿಸಿದ್ದಾರೆ.
ಹತ್ತಾರು ಬಸ್
ಈ ಹಾಲಾಡಿ ಬಸ್ ನಿಲ್ದಾಣವಾಗಿ ಕುಂದಾಪುರ- ಆಗುಂಬೆ, ಮಂಗಳೂರು, ಉಡುಪಿ – ಶಿವಮೊಗ್ಗ, ಕುಂದಾಪುರ – ತೀರ್ಥಹಳ್ಳಿ, ಕುಂದಾಪುರ – ಹೆಬ್ರಿ, ಕುಂದಾಪುರ – ಅಮಾಸೆಬೈಲು, ಕುಂದಾಪುರ – ಶೇಡಿಮನೆ, ಸಿದ್ದಾಪುರ – ಶಂಕರನಾರಾಯಣ- ಹಾಲಾಡಿ- ಕುಂದಾಪುರ, ಧರ್ಮಸ್ಥಳ – ಕಾರ್ಕಳ – ಕುಂದಾಪುರ ಹೀಗೆ ನಿತ್ಯ ಹತ್ತಾರು ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತವೆ.
ಸರ್ಕಲ್ ನಿರ್ಮಾಣ ನನೆಗುದಿಗೆ
ಜನರ ಬೇಡಿಕೆಯಂತೆ ಹಾಲಾಡಿಯ ಬಸ್ ನಿಲ್ದಾಣದ ಅಭಿವೃದ್ಧಿಯಾಗಿದೆ. ಅದೇ ರೀತಿ ಅನೇಕ ವರ್ಷಗಳಿಂದ ಇಲ್ಲಿನ 4 ರಸ್ತೆಗಳು ಸಂಧಿಸುವಲ್ಲಿ ವ್ಯವಸ್ಥಿತ ರೀತಿಯ ಸರ್ಕಲ್ (ವೃತ್ತ) ನಿರ್ಮಾಣವಾಗಬೇಕು ಅನ್ನುವುದು ಸಾರ್ವಜನಿಕರ ಬೇಡಿಕೆಯಾಗಿತ್ತು. ಇದಕ್ಕಾಗಿ ಪ್ರತಿಭಟನೆ, ಹೋರಾಟಗಳು ನಡೆದಿದ್ದವು. ಆದರೆ “ಬ್ಲಾಕ್ ಸ್ಪಾಟ್’ ನಡಿ ಒಂದಷ್ಟು ಅಭಿವೃದ್ಧಿಯಾಗಿದೆ. ಆದರೆ ಸರ್ಕಲ್ ನಿರ್ಮಾಣವಾದರೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಕೆಲವೆಡೆಗಳಲ್ಲಿ ವೇಗ ನಿಯಂತ್ರಕಗಳ ಅಗತ್ಯವೂ ಇದೆ ಎನ್ನುವುದು ಜನರ ಅಭಿಪ್ರಾಯವಾಗಿದೆ.
ಸುಗಮ ಸಂಚಾರಕ್ಕೆ ಅನುಕೂಲ: ಶಾಸಕರ ಶಿಫಾರಸಿನಂತೆ ಹಾಲಾಡಿಯ ಬಸ್ ನಿಲ್ದಾಣ, ರಿಕ್ಷಾ ನಿಲ್ದಾಣದ ಕಾಂಕ್ರೀಟ್ ಕಾಮಗಾರಿಗೆ 15 ಲಕ್ಷ ರೂ. ಹಾಗೂ ಇಂಟರ್ ಲಾಕ್ ಅಳವಡಿಕೆಗೆ 2.70 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಆ ಅನುದಾನದಲ್ಲಿ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ನಡೆದಿದೆ. ಇದರಿಂದ ಬಸ್‌ಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. – ಜನಾರ್ದನ, ಹಾಲಾಡಿ ಗ್ರಾ.ಪಂ. ಉಪಾಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.