ಸಾಧನೆಗೆ ಅಡ್ಡಿಯಾಗದ ನ್ಯೂನತೆ: ಕರುಳು ಕಾಯಿಲೆಯಿದ್ದರೂ 580 ಅಂಕ ಪಡೆದ ಬಗ್ವಾಡಿಯ ಶ್ರಾವ್ಯಾ
Team Udayavani, Jun 2, 2022, 7:20 AM IST
ಕುಂದಾಪುರ: ವೈಕಲ್ಯ, ನ್ಯೂನತೆ ಅನ್ನುವುದು ಮನಸ್ಸಿಗೇ ವಿನಾ ದೇಹಕ್ಕಲ್ಲ. ಬದುಕಿ ಸಾಧಿಸುವ ಛಲವಿದ್ದರೆ, ಯಶಸ್ಸು ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಹಕ್ಲಾಡಿ ಗ್ರಾಮದ ಬಗ್ವಾಡಿಯ ರಾಜು ಪೂಜಾರಿ ಮತ್ತು ಸುಜಾತಾ ದಂಪತಿಯ ಪುತ್ರಿ ಶ್ರಾವ್ಯಾ ಆರ್. ಜ್ವಲಂತ ನಿದರ್ಶನ.
ಕಳೆದ ಜುಲೈಯಿಂದ 3 ತಿಂಗಳು, ಮತ್ತೆ ಅಕ್ಟೋಬರ್‌ನಿಂದ 3 ತಿಂಗಳು ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿದ್ದು, ಶಾಲೆ ಮೆಟ್ಟಿಲು ಹತ್ತಲಾರದೆ, ವರ್ಷವಿಡೀ ಕೇವಲ ನೋಟ್ಸ್ ಜೆರಾಕ್ಸ್ ಪ್ರತಿಯನ್ನು ಮಲಗಿಕೊಂಡೇ ಓದಿ, ಎಸೆಸೆಲ್ಸಿ ಪರೀಕ್ಷೆ ಬರೆದ ಶ್ರಾವ್ಯಾಗೆ ಸಿಕ್ಕ ಅಂಕಗಳು 580. ಅಂದರೆ ಶೇ. 92.64.
ಎಲ್ಲ ಮಕ್ಕಳಂತೆ ಚುರುಕಾಗಿದ್ದ ಶ್ರಾವ್ಯಾ ಕರುಳು ಸಂಬಂಧಿ ಅನಾ ರೋಗ್ಯ ಅಂದರೆ ಐಬಿಡಿ ಕ್ರೋಮ್ಸ್ ಎಂಬ ಕಾಯಿಲೆಗೆ ತುತ್ತಾಗಿದ್ದು, ದೇಹದ ತೂಕ ಕೂಡ ಕಳೆದುಕೊಂಡು ಕೇವಲ 12 ಕೆ.ಜಿ.ಗೆ ಇಳಿದಿದ್ದರು. ತಂದೆ ರಾಜು ಪೂಜಾರಿ ಹಿಂದೆ ಬಾಗಲಕೋಟೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಈಗ ಹೆಮ್ಮಾಡಿ ಯಲ್ಲಿ ಪುಟ್ಟ ಅಂಗಡಿ ನಡೆಸುತ್ತಿದ್ದಾರೆ. ಅಲ್ಲಿ 1ನೇ ತರಗತಿ, ಬಳಿಕ ಆತ್ರಾಡಿ ಮಕ್ಕಳ ಕೂಟ ಶಾಲೆಗೆ ದಾಖಲಾಗಿ ಈಗ ಎಸೆಸೆಲ್ಸಿಯನ್ನು ಉನ್ನತ ಅಂಕಗಳೊಂದಿಗೆ ಪೂರೈಸಿದ್ದಾರೆ. ಅಲ್ಲಿನ ಶಾಲಾ ಸಂಚಾಲಕ ಸುಭಾಸ್ ಶೆಟ್ಟಿ ಹಾಗೂ ದೀಪಿಕಾ ಶೆಟ್ಟಿ ಅವರು ಶ್ರಾವ್ಯಾಗೆ ನೋಟ್ಸ್ ಹಾಗೂ ಆನ್‌ಲೈನ್ ಪಾಠದ ಜೆರಾಕ್ಸ್ ಪ್ರತಿ ನೀಡಿ ಸಹಕರಿಸಿದ್ದಾರೆ.
ವಿಕೋಪ ಸಂತ್ರಸ್ತರಿಗೆ
ಸ್ಪಂದಿಸಿದ್ದ ಶ್ರಾವ್ಯಾ
ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದ ಸಂದರ್ಭದಲ್ಲಿ 8ನೇ ತರಗತಿ ಓದುತ್ತಿದ್ದ ಶ್ರಾವ್ಯಾ ಸಂತ್ರಸ್ತರ ಪರ ಪೋಷಕರು, ಶಿಕ್ಷಣ ಪ್ರೇಮಿಗಳು, ದಾನಿಗಳ ಮೂಲಕ 60 ಸಾವಿರ ರೂ. ಹಣ ಸಂಗ್ರಹಿಸಿ ಮಾನವೀಯತೆ ಮೆರೆದಿದ್ದು, ಆಗ ಈ ಬಗ್ಗೆ ಸುದ್ದಿಯಾಗಿತ್ತು.
ವಿಜ್ಞಾನದ ಆಸಕ್ತಿ
ಪಿಯುಸಿಯಲ್ಲಿ ಪಿಸಿಎಂಬಿ ತೆಗೆದುಕೊಂಡು ಸ್ವಂತ ಕಾಲಮೇಲೆ ನಿಲ್ಲಬೇಕು ಎನ್ನುವ ಕನಸು ಕಟ್ಟಿ ಕೊಂಡಿರುವ ಶ್ರಾವ್ಯಾಗೆ ಅನಾ ರೋಗ್ಯ ಸವಾಲಾಗಿದ್ದು, ಆರ್ಥಿಕ ನೆರವಿನ ಜತೆಗೆ ನೈತಿಕ ಬೆಂಬಲವೂ ಬೇಕಾಗಿದೆ. ನೆರವಾಗುವವರಿಗಾಗಿ ಶ್ರಾವ್ಯಾ ಅವರ ಮನೆಯ ಮೊಬೈಲ್ ಸಂಖ್ಯೆ 7022088015.
ಕಲಿಕಾ ಯಶೋಗಾಥೆ: ಸಾಧಕರನ್ನು ಹೆಸರಿಸಿ
ವಿವಿಧ ಸಮಸ್ಯೆ-ಸಂಕಷ್ಟಗಳ ನಡುವೆಯೂ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿ ರುವ ವಿದ್ಯಾರ್ಥಿಗಳ ಸಾಧನೆಯನ್ನು ವಿವರಿ ಸುವ ಉದಯವಾಣಿಯ ಅಂಕಣವಿದು. ದುಡಿಮೆಯೊಂದಿಗೆ ಶಾಲೆಗೆ ಹೋಗಿ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಬಗ್ಗೆ, ತೀರಾ ಬಡತನದಲ್ಲಿ ಎಲ್ಲ ಅಡೆ-ತಡೆಗಳನ್ನು ಮೀರಿ ಸಾಧನೆ ಮಾಡಿದ ವಿದ್ಯಾರ್ಥಿಗಳು ನಿಮ್ಮ ಸುತ್ತಮುತ್ತಲಿನಲ್ಲಿದ್ದರೆ ನಮಗೆ ತಿಳಿಸಿ. ವಿದ್ಯಾರ್ಥಿಯ ಹೆಸರು, ಶಾಲೆಯ ಹೆಸರು, ಊರು, ಸಂಪರ್ಕ ಸಂಖ್ಯೆಯನ್ನು ವಾಟ್ಸ್‌ಆ್ಯಪ್ ಮಾಡಿ. ಅರ್ಹರ ಸಾಧನೆಯನ್ನು ಪ್ರಕಟಿಸಲಾಗುವುದು.
ವಾಟ್ಸ್‌ಆ್ಯಪ್ ಸಂಖ್ಯೆ: 7616774529
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.