ನೆರೆಗೆ ದ್ವೀಪವಾದ ನಾವುಂದದ ಸಾಲ್ಪುಡಾ; ಜನಜೀವನ ಸ್ತಬ್ಧ

50ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತ; ಎಕರೆಗಟ್ಟಲೆ ಗದ್ದೆ ಜಲಾವೃತ

Team Udayavani, Sep 21, 2020, 8:44 PM IST

50ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತ; ಎಕರೆಗಟ್ಟಲೆ ಗದ್ದೆ ಜಲಾವೃತ

ಸಾಲ್ಪುಡಾ ಪ್ರದೇಶದ ಹತ್ತಾರು ಎಕರೆ ಗದ್ದೆಗಳು ಸಂಪೂರ್ಣ ಮುಳುಗಡೆಯಾಗಿರುವುದು.

ಕುಂದಾಪುರ: ಉತ್ತರಾ ನಕ್ಷತ್ರದ ಮಳೆಯ ಅಬ್ಬರದಿಂದಾಗಿ ನಾವುಂದ ಗ್ರಾಮದ ಸಾಲ್ಪುಡಾ ಪ್ರದೇಶ ಅಕ್ಷರಶಃ ದ್ವೀಪದಂತಾಗಿದೆ. ರವಿವಾರ ರಾತ್ರಿಯಿಂದ ಬೆಳಗ್ಗಿನವರೆಗೂ ನಿರಂತರವಾಗಿ ಭಾರೀ ಗಾಳಿ – ಮಳೆ ಸುರಿದ ಪರಿಣಾಮ ಸೌಪರ್ಣಿಕಾ ನದಿ ಪಾತ್ರದ ಸಾಲ್ಪುಡಾದಲ್ಲಿ ನೆರೆ ಸೃಷ್ಟಿಯಾಗಿದೆ. ಸೋಮವಾರ ಮಳೆ ಕಡಿಮೆ ಇದ್ದುದರಿಂದ ನಿಧಾನವಾಗಿ ನೆರೆ ಇಳಿಯುತ್ತಿದೆ.

ಮಲೆನಾಡು, ಕೊಲ್ಲೂರು ಮತ್ತಿತರ ಭಾಗಗಳಲ್ಲಿ ಸೋಮವಾರ ಮಳೆ ಕಡಿಮೆ ಯಿದ್ದರೂ, ರವಿವಾರ ಸಂಜೆಯಿಂದ ಆರಂಭಗೊಂಡು ರಾತ್ರಿಯಿಡೀ ಮಳೆ ಸುರಿದ ಕಾರಣ ಸೌಪರ್ಣಿಕಾ ನದಿ ತೀರದ ನಾವುಂದ ಭಾಗದ ಸಾಲುºಡಾ, ಸಸಿಹಿತ್ಲು, ಬಾಂಗಿನ್‌ಮನೆ, ಕಂಡಿಕೇರಿ, ಚೋದ್ರಂಗಡಿ, ದೇವಾಡಿಗರ್‌ ಕೇರಿ, ಮೂಡಾಮನೆ, ಚಟ್ನಿಹಿತ್ಲು ಪ್ರದೇಶದಲ್ಲಿ ಭಾರೀ ನೆರೆ ಸೃಷ್ಟಿಯಾಗಿದೆ. ಇದರಿಂದ 50 ಕ್ಕೂ ಹೆಚ್ಚು ಮನೆಗಳ ಜನರು ಮನೆಯಿಂದ ಹೊರಗೆ ಬಾರದ ಪರಿಸ್ಥಿತಿ ಉಂಟಾಗಿತ್ತು. ರಸ್ತೆಯಲ್ಲಿಯೂ ಜನ ಸಂಚಾರಕ್ಕೆ ದೋಣಿಯನ್ನೇ ಆಶ್ರಯಿಸು ವಂತಾಯಿತು. ಇನ್ನು ನಾವುಂದ ಕುದ್ರುವಿನ ನಿವಾಸಿಗಳಿಗೆ ನದಿಯಲ್ಲಿಯೂ ಭಾರೀ ನೀರು ಇದ್ದುದರಿಂದ ದಿಗ್ಬಂಧನ ವಿಧಿಸಿದಂತಾಗಿದೆ.

ಹತ್ತಾರು ಎಕರೆ ಗದ್ದೆ ಜಲಾವೃತ
ಸಾಲ್ಪುಡಾ, ಕಂಡಿಕೇರಿ ಮನೆ, ಸಸಿಹಿತ್ಲು ಪ್ರದೇಶ ಸೇರಿದಂತೆ ಈ ಭಾಗದ ಹತ್ತಾರು ಎಕರೆ ಪ್ರದೇಶಗಳಲ್ಲಿ ಭತ್ತದ ನಾಟಿ ಮಾಡಿರುವ ಗದ್ದೆಗಳು ಜಲಾವೃತಗೊಂಡಿವೆ. ಈಗ ಭತ್ತದ ಪೈರು ಮೊಳಕೆಯೊಡೆದು ಫಸಲು ಬರುವ ಸಮಯವಾಗಿದ್ದು, ಈ ವೇಳೆಯೇ ಹೀಗೆ ಮುಳುಗಿದರೆ ಕೊಳೆತು ಹೋಗುವ ಆತಂಕ ಇಲ್ಲಿನ ರೈತರದ್ದಾಗಿದೆ.

ದೋಣಿಯೇ ಆಸರೆ
ನಾವುಂದದ ಹೆದ್ದಾರಿಯಿಂದ ಅರೆಹೊಳೆ ಕಡೆಗೆ ಸಂಚರಿಸುವ ರಸ್ತೆ ಸಂಪರ್ಕ ನೆರೆಯಿಂದಾಗಿ ಸಂಪೂರ್ಣ ಕಡಿತಗೊಂಡಿದೆ. ಜನ ಸಾಲುºಡಾದಿಂದ ನಾವುಂದಕ್ಕೆ ಬರಲು ದೋಣಿಯನ್ನೇ ಆಶ್ರಯಿಸುವಂತಾಗಿದೆ. ಪಂಚಾಯತ್‌ನಿಂದ ಕೊಟ್ಟಿರುವ ಒಂದು ದೋಣಿ ಮಾತ್ರವಿದ್ದು, ಬೆಳಗ್ಗೆ ಹಾಗೂ ಸಂಜೆ ವೇಳೆ ಕೆಲಸಕ್ಕೆ, ಪೇಟೆ ಕಡೆಗೆ ಹೋಗುವವರು ಹೆಚ್ಚು ಜನ ಇದ್ದು, ಇದರಿಂದ ಜನ ಸಂಚಾರಕ್ಕೆ ಕಷ್ಟವಾಗುತ್ತಿದೆ. ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿದ್ದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ತುರ್ತಾಗಿ ಒಂದು ದೋಣಿ ನೀಡುವ ಭರವಸೆಯಿತ್ತಿದ್ದರು.

ವರ್ಷದ ನಾಲ್ಕನೇ ನೆರೆ
ಈ ಬಾರಿಯ ಮುಂಗಾರಿನಲ್ಲಿ ಇದು ನಾವುಂದ ಸಾಲುºಡಾದಲ್ಲಿ ಕಾಣುತ್ತಿರುವ 4ನೇ ನೆರೆಯಾಗಿದೆ. ಒಮ್ಮೆಗೆ ನೆರೆ ಬಂದರೆ 5ರಿಂದ 10 ದಿನಗಳವರೆಗೆ ಗದ್ದೆ ಪೂರ್ತಿ ನೀರು ನಿಂತಿರುತ್ತದೆ. ಆಗಾಗ ನೆರೆಯಿಂದಾಗಿ ಗದ್ದೆಗಳು ಮುಳುಗಡೆಯಾಗುತ್ತಿರುವುದರಿಂದ ಈ ಬಾರಿ ಉತ್ತಮ ಫಸಲು ಕಷ್ಟ. ಈ ಬಾರಿ ಭತ್ತದ ಸಸಿ ಒಳ್ಳೆಯದಾಗಿ ಬೆಳೆದಿತ್ತು. ಆದರೆ ಫಸಲು ಬರುವ ಸಮಯವೇ ಹೀಗೆ ಮುಳುಗಿದ್ದರಿಂದ ಸಂಪೂರ್ಣ ನಾಶವಾದಂತೆ ಎನ್ನುತ್ತಾರೆ ಕಂಡಿಕೇರಿ ಮನೆಯ ನಾರಾಯಣ ಪೂಜಾರಿ.

ನದಿ ಕೊರೆತ: ಅಪಾಯದಲ್ಲಿ ಮನೆಗಳು
ನಾವುಂದ ಗ್ರಾಮದ ಸಾಲ್ಪುಡಾ ಸಮೀಪದ ಹೊಳೆಬದಿ ಕಂಡಿಕೇರಿ, ಚಟ್ನಿಹಿತ್ಲು ಮನೆಯ ಸೌಪರ್ಣಿಕಾ ನದಿ ಪಾತ್ರದ 4-5 ಮನೆಗಳು ನದಿ ಕೊರೆತದಿಂದಾಗಿ ಅಪಾಯದಲ್ಲಿವೆ. ಇಲ್ಲಿ ಕಳೆದ ಬಾರಿ 150 ಮೀ. ನದಿ ದಂಡೆ ನಿರ್ಮಾಣ ಮಾಡಲಾಗಿದೆ. ಆದರೆ ಅದನ್ನು ಇನ್ನು ಸ್ವಲ್ಪ ದೂರದವರೆಗೆ ವಿಸ್ತರಿಸಿದ್ದರೆ ಈ ಮನೆಗಳಿಗೆ ಆತಂಕ ಇರುತ್ತಿರಲಿಲ್ಲ. ಈ ಬಗ್ಗೆ ಮನವಿ ಕೊಟ್ಟಿದ್ದೇವೆ. ನಮ್ಮದು ನದಿ ತಡದಲ್ಲೇ ಮನೆಯಿದ್ದು, ಮಳೆ ನೀರು ಏರುತ್ತಿರುವಾಗ ಮನೆಯಲ್ಲಿರಲು ತುಂಬಾ ಭಯವಾಗುತ್ತದೆ. ನದಿ ದಂಡೆ ನಿರ್ಮಿಸಿದರೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ಚಟ್ನಿಹಿತ್ಲು ನಿವಾಸಿ ಸಾಕು.

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

Kota-Shrinivas

Manipal: ಕೇಂದ್ರ ಸರಕಾರದ ಯೋಜನೆ ಫ‌ಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ

puttige-5

Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ

UP-Puttige

Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.