ಒಂದನೇ ಬುಕ್ಕ ರಾಯನ ಶಿಲಾ ಶಾಸನ ಪತ್ತೆ
Team Udayavani, Mar 27, 2022, 11:11 AM IST
ಕುಂದಾಪುರ: ಯಡಾಡಿ- ಮತ್ಯಾಡಿ ಗ್ರಾಮದ ಶಿರಿಮಠದ ಹೈಗುಳಿ-ಯಕ್ಷಿ ದೈವಸ್ಥಾನವಿರುವ ಗದ್ದೆಯಲ್ಲಿ ವಿಜಯನಗರ ಕಾಲದ ಒಂದನೇ ಬುಕ್ಕರಾಯನಿಗೆ ಸಂಬಂಧಪಟ್ಟ ಶಿಲಾ ಶಾಸನವೊಂದು ಪತ್ತೆಯಾಗಿದೆ.
ಕುಂದಾಪುರದ ದಿನೇಶ್ ಪುತ್ರನ್ ವಿಠಲವಾಡಿ ಮಾಹಿತಿಯ ಮೇರೆಗೆ ಉಡುಪಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ಅಧ್ಯಯನ ನಿರ್ದೇಶಕ ಎಸ್.ಎ. ಕೃಷ್ಣಯ್ಯ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತಣ್ತೀ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ, ಕಿಶನ್ ಕುಮಾರ್ ಮೂಡುಬೆಳ್ಳೆ, ಹೇಮಾ ಶೆಟ್ಟಿ ಪತ್ತೆ ಹಚ್ಚುವ ಕಾರ್ಯ ಮಾಡಿದ್ದಾರೆ. ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು 5 ಅಡಿ ಎತ್ತರ ಮತ್ತು 2 ಅಡಿ ಅಗಲವನ್ನು ಹೊಂದಿದೆ. ಶಾಸನದ ಮೇಲ್ಭಾಗದಲ್ಲಿ ಶಿವಲಿಂಗವನ್ನು ಪೂಜಿಸುತ್ತಿರುವ ವ್ಯಕ್ತಿ ಮತ್ತು ಇದರ ಇಕ್ಕೆಲಗಳಲ್ಲಿ ದೀಪ, ನಂದಿ, ರಾಜಕತ್ತಿ ಹಾಗೂ ಸೂರ್ಯ-ಚಂದ್ರರ ಕೆತ್ತನೆಯಿದೆ.
ಶಾಸನದ ಹೆಚ್ಚಿನ ಅಕ್ಷರಗಳು ಕಾಣದಾಗಿದ್ದು, ಶಾಸನವು ಕ್ರಿಸ್ತ ಶಕ 1356ರ ಕಾಲಮಾನಕ್ಕೆ ಸೇರಿದ್ದಾಗಿದೆ. ಶಾಸನದಲ್ಲಿ ವಿಜಯನಗರ ದೊರೆ ವೀರ ಬುಕ್ಕಣ್ಣ ಒಡೆಯರ ಉಲ್ಲೇಖವಿದ್ದು, ಈ ಸಂದರ್ಭದಲ್ಲಿ ಬಾರಕೂರು ರಾಜ್ಯವನ್ನು ಮಹಾಪ್ರಧಾನ ಮಲೆಯ ದಂಡನಾಯಕ ಆಳ್ವಿಕೆ ಮಾಡುತ್ತಿದ್ದ ಎಂದು ತಿಳಿಯುತ್ತದೆ. ಮುಖ್ಯವಾಗಿ ಈ ಶಾಸನವು ಬ್ರಾಹ್ಮಣರಿಗೆ ನೀಡಿದ ಭೂದಾನದ ಬಗ್ಗೆ, ದಾನದ ಭೂಮಿಯ ಚತುಸ್ಸೀಮೆಗಳ ವಿವರವನ್ನು ನೀಡುತ್ತದೆ. ಶಾಸನದಲ್ಲಿ ಕೋಟೇಶ್ವರ ದೇವರ ಮತ್ತು ಹರ ಮಹಾದೇಶ್ವರ ದೇವರ ಉಲ್ಲೇಖವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.