Karkala: ಗರಿಗೆದರಿದ ದೀಪಾವಳಿ ಸಂಭ್ರಮ; ಪೇಟೆಗಳಲ್ಲಿ ಖರೀದಿ ಚಟುವಟಿಕೆ ಜೋರು
ಗೂಡುದೀಪ, ಪಟಾಕಿಗಳ ಆಕರ್ಷಣೆ
Team Udayavani, Oct 30, 2024, 1:21 PM IST
ಕಾರ್ಕಳ: ಎಲ್ಲೆಡೆ ದೀಪಾವಳಿ ಸಂಭ್ರಮ ಗರಿಗೆದರಿದೆ. ಅ.31ರಿಂದ ಅಧಿಕೃತವಾಗಿ ದೀಪಾವಳಿ ಆಚರಣೆಗಳು ನಡೆಯಲಿವೆಯಾದರೂ ಜನರ ಸಿದ್ಧತೆಗಳು ಆರಂಭಗೊಂಡಿವೆ. ಮಳಿಗೆಗಳಲ್ಲಿ, ಮಾಲ್‌ಗಳಲ್ಲಿ ಆಫರ್‌ಗಳು ಜನರನ್ನು ಕೈಬೀಸಿ ಕರೆಯುತ್ತಿವೆ. ಹೀಗಾಗಿ ಖರೀದಿ ಚಟುವಟಿಕೆ ಆರಂಭಗೊಂಡಿದೆ. ಅಂಗಡಿಗಳಲ್ಲಿ ಬಗೆಬಗೆಯ ಆಕಾಶಬುಟ್ಟಿಗಳು ಗಮನ ಸೆಳೆಯುತ್ತಿವೆ. ಪಟಾಕಿ ಅಂಗಡಿಗಳು ತಲೆ ಎತ್ತಿವೆ. ಕಾರ್ಕಳ, ಕುಂದಾಪುರ, ಬೈಂದೂರು, ಹೆಬ್ರಿ ಪಟ್ಟಣಗಳಲ್ಲದೆ ಎರಡನೇ ಹಂತದ ಪೇಟೆಗಳಲ್ಲೂ ದೀಪಾವಳಿ ಖರೀದಿ ಸಂಭ್ರಮ ಶುರುವಾಗಿದೆ. ವಾರಾಂತ್ಯದ ರಜೆಯ ಜತೆಗೆ ಹಬ್ಬದ ರಜೆ ಸೇರಿಕೊಂಡಿರುವುದರಿಂದ ಹಬ್ಬದ ಸಂಭ್ರಮ ಇನ್ನಷ್ಟು ಹೆಚ್ಚಿದೆ.
ಬಟ್ಟೆ, ಇಲೆಕ್ಟ್ರಾನಿಕ್ಸ್, ಫರ್ನಿಚರ್, ಗೃಹೋಪಕರಣ, ವಾಹನ, ಸಿಹಿ ತಿಂಡಿ, ಸಹಿತ ವಿವಿಧ ಉಡುಗೋರೆ ಮಾರಾಟದ ಅಂಗಡಿಗಳು, ಸಂಸ್ಥೆಯವರು ಗ್ರಾಹಕರಿಗೆ ಭರ್ಜರಿ ರಿಯಾಯಿತಿಗಳನ್ನು ನೀಡುವ ಘೋಷಣೆ ಮಾಡಿದ್ದಾರೆ. ಸಂಸ್ಥೆಯ ಉದ್ಯೋಗಿ, ಕಾರ್ಮಿಕರು, ಸ್ನೇಹಿತರು, ಕುಟುಂಬ ಸದಸ್ಯರಿಗೆ ಸಿಹಿ ತಿಂಡಿ ನೀಡುವ ಸಲುವಾಗಿ ವಿವಿಧ ಬೇಕರಿ, ಕ್ಯಾಟರಿಂಗ್ ಅವರಿಗೆ ಮುಂಚಿತ ಆರ್ಡರ್‌ಗಳನ್ನು ನೀಡಿದ್ದಾರೆ. ಹೆಚ್ಚುವರಿ ಸಿಹಿ ತಿಂಡಿ ಪೊಟ್ಟಣ ತಯಾರಿಸುವ ಕಾರ್ಯವು ಎಲ್ಲೆಡೆ ಭರದಿಂದ ಸಾಗುತ್ತಿದೆ. ಶುಕ್ರವಾರದವರೆಗೂ ವ್ಯಾಪಾರ ವಹಿವಾಟು ಹೆಚ್ಚಿರುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.
ಕಣ್ಮನ ಸೆಳೆವ ಗೂಡುದೀಪಗಳು
ಪೇಟೆಗಳ ಪ್ರಮುಖ ಅಂಗಡಿಗಳ ಎದುರು ಗೂಡುದೀಪಗಳನ್ನು ನೇತು ಹಾಕಲಾಗಿದೆ. ಬಣ್ಣ-ಬಣ್ಣಗಳಿಂದ ಇದು ಕಂಗೊಳಿಸುತ್ತಿದ್ದು, ವೈವಿಧ್ಯಮಯವಾಗಿ ಕಂಗೊಳಿಸುತ್ತಿದೆ. ಅದೇ ರೀತಿ ಮಿನಿಯೇಚರ್‌ಗಳು, ಹಣತೆ, ಕ್ಯಾಂಡಲ್, ಪಟಾಕಿ ಸಹಿತ ಇತರ ಪರಿಕರಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹಬ್ಬದ ಪ್ರಯುಕ್ತ ಹೂವಿನ ಮಾರಾಟ ಇನ್ನಷ್ಟೇ ಆರಂಭಗೊಳ್ಳಬೇಕಿದೆ.
ತರಕಾರಿ ದರದಲ್ಲಿ ಏರಿಳಿತ
ಹಬ್ಬ ಸಮೀಪಿಸುತ್ತಿದ್ದಂತೆ ತರಕಾರಿ ದರವು ಕೊಂಚ ಏರಿಳಿತ ಕಾಣುತ್ತಿದೆ. ಅಲ್ಲದೆ ಬೆಂಗಳೂರಿನ ಮಳೆ ಕಾರಣ ಸೊಪ್ಪು, ಕೆಲವು ತರಕಾರಿ ಪೂರೈಕೆಯಲ್ಲಿಯೂ ವ್ಯತ್ಯಾಸವಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಯಶವಂತ್.
ಕೆಲವು ಕಡೆಗಳಲ್ಲಿ ದರದಲ್ಲಿ ವ್ಯತ್ಯಾಸವಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ತರಕಾರಿ ಸಾಮಾನ್ಯ ದರ ಕೆ.ಜಿ. ಗೆ ಇಂತಿದೆ. ಟೊಮ್ಯಾಟೊ 50 ರೂ., ಮೂಲಂಗಿ 80 ರೂ., ಹಿರೇಕಾಯಿ 80 ರೂ., ಬೆಂಡೆ 80 ರೂ., ಸೌತೆ 32 ರೂ., ಬೀಟ್‌ರೂಟ್ 50 ರೂ., ಮುಳ್ಳು ಸೌತೆ 40 ರೂ., ಕ್ಯಾಬೇಜ್ 50 ರೂ., ಅಲಸಂಡೆ 60 ರೂ., ಅರಿಶಿನ ಎಲೆ ಕಟ್ಟಿಗೆ 30 ರೂ., ಊರು ಬೆಂಡೆ 140 ರೂ., ಬೀನ್ಸ್ 100-120 ರೂ., ಮಟ್ಟುಗುಳ್ಳ 140 ರೂ., ದೊಣ್ಣೆ ಮೆಣಸು 100 ರೂ., ಹಸಿ ಮೆಣಸು 50 ರೂ., ಆಲುಗಡ್ಡೆ 40 ರೂ., ಗೆಣಸು 80 ರೂ. ದರವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕುಂಬಾರರ ಬದುಕಿನಲ್ಲಿಲ್ಲ ದೀಪಾವಳಿ ಬೆಳಕು: ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಂಗಾಣಿ ಹಣತೆ
ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ
Amritsar; ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಗ್ಯಾಂಗ್ ಸ್ಟರ್ ಗುಂಡಿಗೆ ಬಲಿ
UV Fusion: ಪ್ರಕೃತಿ ಅವಶ್ಯ ಮನುಜನಿಗೆ
Siddaramaiah; ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಟಿ.ಜೆ.ಅಬ್ರಹಾಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.