ಸ್ವಂತ ಕಟ್ಟಡವಿಲ್ಲದೆ ಪರದಾಟ; ಬಾಡಿಗೆ ಸಂಕೀರ್ಣದಲ್ಲಿ ಕಚೇರಿ
ನೂತನ ಬೀಜಾಡಿ ಗ್ರಾ.ಪಂ. ಅಸ್ತಿತ್ವಕ್ಕೆ ಬಂದು 7 ವರುಷ
Team Udayavani, Sep 19, 2022, 12:09 PM IST
ಕೋಟೇಶ್ವರ: ನೂತನ ಪಂಚಾಯತ್ ಆಗಿ 7 ವರ್ಷ ಸಂದರೂ ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ಸಂಕೀರ್ಣದಲ್ಲಿ ಕಚೇರಿ ನಡೆಸುತ್ತಿರುವ ಬೀಜಾಡಿ ಗ್ರಾ.ಪಂ.ಗೆ ಸ್ವಂತ ಕಟ್ಟಡ ಒದಗಿಸುವಲ್ಲಿ ಜಿಲ್ಲಾಡಳಿತ ಇನ್ನೂ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಗ್ರಾಮಸಭೆ ನಡೆಸಲು ಖಾಸಗಿ ಕಟ್ಟಡ ಅವಲಂಬನೆ
ಗ್ರಾ.ಪಂ.ಕಚೇರಿಯ ಬಾಡಿಗೆ ಕಟ್ಟಡ ದಲ್ಲಿದ್ದು, ಗ್ರಾಮಸಭೆ ಸಹಿತ ವಿವಿಧ ಸಭೆ ಸಮಾರಂಭಗಳಿಗೆ ಮತ್ತೂಂದು ಕಟ್ಟಡ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಗ್ರಾಮಸ್ಥರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲದೇ ಇಲ್ಲಿಯ ಹೊರಾವರಣ ದಲ್ಲಿ ಕಾಯಬೇಕಾದ ಪರಿಸ್ಥಿತಿ ಇದೆ.ಮಳೆ ಗಾಲದಲ್ಲಂತೂ ಪರಿಸ್ಥಿತಿ ಹೇಳತೀರದು.
ಬೀಜಾಡಿ ಗ್ರಾ.ಪಂ.ಗೆ ಸ್ವಂತ ಕಟ್ಟಡ ನಿರ್ಮಿಸಲು ಜಿಲ್ಲಾಧಿಕಾರಿ ಉಪ ವಿಭಾಗಾ ಧಿಕಾರಿ, ತಹಶೀಲ್ದಾರರು ಸ್ಥಳ ಪರಿಶೀಲನೆ ನಡೆಸಿ ಅನುಮತಿ ನೀಡಿ ದ್ದರೂ, ಸ್ಥಳ ಗುರುತಿಸಿದ್ದರೂ ಕಟ್ಟಡ ನಿರ್ಮಾಣಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.
ಗೋಪಾಡಿ ಗ್ರಾ.ಪಂ.ನಿಂದ ಬೇರ್ಪಟ್ಟ ನೂತನ ಬೀಜಾಡಿ ಗ್ರಾ.ಪಂ.
ಕಳೆದ 7 ವರ್ಷಗಳ ಹಿಂದೆ ಗೋಪಾಡಿ ಹಾಗೂ ಬೀಜಾಡಿ ಒಂದೇ ಗ್ರಾ.ಪಂ. ಆಗಿತ್ತು. ಗೋಪಾಡಿ ಗ್ರಾ.ಪಂ.ಕಚೇರಿಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರ ಎಲ್ಲ ವಿಧಧ ಸಮಸ್ಯೆಗೆ ಪರಿಹಾರ ಒದಗಿಸಲಾಗುತ್ತಿತ್ತು. ಜನಸಂಖ್ಯೆ ಆಧಾರದಲ್ಲಿ ಆಡಳಿತಾತ್ಮಕ ಕಾನೂನಿನ ಚೌಕಟ್ಟಿನಡಿ ಪ್ರತ್ಯೇಕಗೊಂಡ ಬೀಜಾಡಿ ಗ್ರಾ.ಪಂ. ಸ್ವಂತ ಸೂರಿಲ್ಲದೇ ಇತರರನ್ನು ಆಶ್ರಯಿಸಿ ಕೆಲವು ವರ್ಷ ವ್ಯಯಿಸಲಾಗಿದ್ದು, ಇನ್ನೂ ಒದಗದ ಭಾಗ್ಯ ದಿಂದ ಹತಾಶರಾಗಿದ್ದಾರೆ.ಇದಕ್ಕೊಂದು ಶಾಶ್ವತ ಪರಿಹಾರಕ್ಕೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.
ಕಡಲ್ಕೊರೆತದ ಭೀತಿ
ಕಡಲ ತಡಿಯಲ್ಲಿ ವಾಸವಾಗಿರುವ ಈ ಭಾಗದ ಮೀನುಗಾರರು ಹಾಗೂ ಇತರರಿಗೆ ಮಳೆಗಾಲದಲ್ಲಿ ಕಡಲ್ಕೊರೆತದಿಂದಾಗಿ ವಾಸ್ತವ್ಯ ಪ್ರದೇಶದ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗುತ್ತಿರುವುದರಿಂದ ಬೆಳೆ ಹಾನಿಯಾಗುತ್ತಿದೆ. ತಡೆಗೋಡೆ ನಿರ್ಮಿಸಿ ದಲ್ಲಿ ಒಂದಿಷ್ಟು ಸಮಸ್ಯೆ ಬಗೆಹರಿಸಲು ಸಾಧ್ಯ ಎನ್ನುವುದು ಮೀನುಗಾರರ ಅಭಿಮತ.
ಪ್ರಾಥಮಿಕ ಆ. ಕೇಂದ್ರದ ಕೊರತೆ
ಸುಮಾರು 2 ಸಾವಿರದಷ್ಟು ಜನ ವಾಸ ವಿರುವ ಬೀಜಾಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲದಿರುವುದು ದೂರದ ಕುಂಭಾಶಿ, ಕೋಟೇಶ್ವರ ಪ್ರಾಥಮಿಕ ಕೇಂದ್ರ ಅವಲಂಬಿಸಬೇಕಾಗಿದೆ. ಮೀನುಗಾರಿಕಾ ಸಂಪರ್ಕ ರಸ್ತೆಯನ್ನು ಇನ್ನಷ್ಟು ಅಭಿವೃದ್ಧಿ ಗೊಳಿಸಿದಲ್ಲಿ ಸುಗಮ ವಾಹನ ಸಂಚಾರಕ್ಕೆ ಆದ್ಯತೆ ನೀಡಿದಂತಾಗುತ್ತದೆ. ಕೋಟೇಶ್ವರ, ಕುಂದಾಪುರ, ಕುಂಭಾಶಿ, ಕೋಡಿ, ತೆಕ್ಕಟ್ಟೆ ವರೆಗಿನ ಇಲ್ಲಿನ ಕರಾವಳಿಯ ಸಂಪರ್ಕ ರಸ್ತೆ ಇನ್ನಷ್ಟು ಅಭಿವೃದ್ಧಿಗೊಳ್ಳಬೇಕಿದೆ.
ತಹಶೀಲ್ದಾರರಿಗೆ ಮನವಿ: ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಲಿ ಬೀಜಾಡಿ ಗ್ರಾ.ಪಂ.ಗೆ ಸ್ವಂತ ಕಟ್ಟಡಕ್ಕಾಗಿ ಸ್ಥಳ ಸೂಚಿಸಲು ಜಿಲ್ಲಾಧಿಕಾರಿಗಳು ಸಹಿತ ಉಪ ವಿಭಾಗಾಧಿಕಾರಿಗಳು , ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳ ಆದೇಶಕ್ಕಾಗಿ ಕಾಯಲಾಗುತ್ತಿದೆ. –ಸುಮತಿ ಮೊಗವೀರ, ಅಧ್ಯಕ್ಷರು, ಗ್ರಾ.ಪಂ.ಬೀಜಾಡಿ. ಬೀಜಾಡಿ
ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಲಿ ಬೀಜಾಡಿ ಗ್ರಾ.ಪಂ.ನ ನೆಗುದಿಗೆ ಬಿದ್ದಿರುವ ಸ್ವಂತ ಕಟ್ಟಡದ ಜಾಗ ಗುರುತಿಸಲು ಕಂದಾಯ ಇಲಾಖೆ, ಜನಪ್ರತಿನಿಧಿ ಗಳು ಕ್ರಮ ಕೈಗೊಂಡಲ್ಲಿ ಗ್ರಾಮಸ್ಥರ ಬಹುಕಾಲದ ಬೇಡಿಕೆ ಈಡೇರಲಿದೆ. –ಅಶೋಕ ಪೂಜಾರಿ, ಬೀಜಾಡಿ, ತಾ.ಪಂ.ಮಾಜಿ ಸದಸ್ಯರು
-ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.