ಮಂದಗತಿಯಲ್ಲಿ ಎಲ್ಲೂರು ಸಬ್‌ ಸ್ಟೇಷನ್‌ ಕಾಮಗಾರಿ

ಅರಣ್ಯ, ಮೆಸ್ಕಾಂ ಇಲಾಖೆಗಳ ಸೀಮಾ ರೇಖೆ ಗೊಂದಲ ನಿವಾರಣೆಗೆ ಜಂಟಿ ಸರ್ವೆ

Team Udayavani, Sep 16, 2020, 7:31 AM IST

eLLUR

ಹಾಲ್ಕಲ್‌ ಸಮೀಪದ ಎಲ್ಲೂರು ಸಬ್‌ ಸ್ಟೇಷನ್‌ ನಿರ್ಮಾಣ ಕಾಮಗಾರಿ.

ಕೊಲ್ಲೂರು: ಬಹಳಷ್ಟು ವರ್ಷಗಳಿಂದ ಲೋವೋಲ್ಟೆàಜ್‌ ಬಾಧೆಯಿಂದ ಬಳಲುತ್ತಿರುವ ಕೊಲ್ಲೂರು, ಜಡ್ಕಲ್‌, ಮುದೂರು, ಹಾಲ್ಕಲ್‌, ಇಡೂರು ಪರಿಸರದ ನಿವಾಸಿಗಳಿಗೆ ಎಲ್ಲೂರು ಸಬ್‌ ಸ್ಟೇಷನ್‌ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿರುವುದು ನಿರಾಸೆ ಉಂಟುಮಾಡಿದೆ.

ಕಳೆದ 5 ವರ್ಷಗಳಿಂದ ಎಲ್ಲೂರು ಸಬ್‌ ಸ್ಟೇಷನ್‌ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದರೂ ಈ ವರೆಗೆ ಅದು ಪೂರ್ತಿಯಾಗಿಲ್ಲ. ಅರಣ್ಯ ಹಾಗೂ ಮೆಸ್ಕಾಂ ಇಲಾಖೆಗಳ ನಡುವಿನ ತಾಂತ್ರಿಕ ಸಮಸ್ಯೆ ನಿಭಾಯಿಸುವಲ್ಲಿ 2 ಇಲಾಖೆಗಳು ಒಡಂಬಡಿಕೆಗೆ ಬಾರದಿರುವುದು ಇನ್ನಷ್ಟು ಜಟಿಲವಾಗಿ ಉಳಿದಿದೆ.

ಅರಣ್ಯ ಇಲಾಖೆಯ ಅನುಮತಿಯ ನಿರೀಕ್ಷೆ
ಬೈಂದೂರು ಮೆಸ್ಕಾಂ ಇಲಾಖೆಯ ಅ ಧಿಕಾರಿಗಳು 3 ಬಾರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ ವಿದ್ಯುತ್‌ ಕಂಬಗಳ ಜೋಡಣೆ ಹಾಗೂ ವಿದ್ಯುತ್‌ ತಂತಿಗಳ ಅಳವಡಿಕೆಗೆ ಅನುಮತಿ ನೀಡುವಂತೆ ವಿನಂತಿಸಿದ್ದರು. ಆದರೆ ಅರಣ್ಯ ಇಲಾಖೆ ಕೇಳಿರುವ ಜಿಪಿಎಸ್‌ ಮ್ಯಾಪ್‌ ಸ್ಟ್ರಕ್ಚರ್‌ ಹಾಗೂ ಇನ್ನಿತರ ವಿಚಾರಗಳಿಗೆ ಅನು ಮತಿ ದೊರೆಯದಿರುವುದು ಮತ್ತಷ್ಟು ವಿಳಂಬಕ್ಕೆ ಕಾರಣವಾಗಿದೆ.

ಡಿ.ಎಫ್‌.ಒ. ಹಾಗೂ ಮೆಸ್ಕಾಂ ಅ ಧಿಕಾರಿಗಳು ಇದೀಗ ಜಂಟಿ ಸರ್ವೆ ಮಾಡಿದ್ದು ಅಭಯಾರಣ್ಯ ಕಡಿಮೆ ಇರುವ ಕಂಬದಕೋಣೆಯ ಮಾರ್ಗವಾಗಿ ಕಾಲ್ತೋಡು ಮೂಲಕ ವಿದ್ಯುತ್‌ ತಂತಿ ಸಂಪರ್ಕ ವ್ಯವಸ್ಥೆಗೆ ಅನುಮತಿ ದೊರಕಿದ್ದು ಕಾಮಗಾರಿ ಆರಂಭಗೊಂಡಿದೆ.

ಅರಣ್ಯ ಇಲಾಖೆಯ 16 ಹೆಕ್ಟೇರ್‌ ಭೂಮಿ
ಬೈಂದೂರು ಹಾಗೂ ಕಂಬದಕೋಣೆ ಮಾರ್ಗವಾಗಿ ಕೊಲ್ಲೂರಿಗೆ ಸಾಗುವ ಮುಖ್ಯ ರಸ್ತೆಯ ಬಹುತೇಕ ಭೂಮಿ ಅರಣ್ಯ ಇಲಾಖೆಯ ಸ್ವಾಮ್ಯದಲ್ಲಿದೆ. ಅರಣ್ಯ ಇಲಾಖೆಯ ಕಟ್ಟು ನಿಟ್ಟಾದ ಕಾನೂನು ಮೆಸ್ಕಾಂ ಇಲಾಖೆಗೆ ನುಂಗಲಾರದ ತುತ್ತಾಗಿದೆ. ಯೋಜನೆ ಅನುಷ್ಠಾನಗೊಳಿಸಲು ತಾಂತ್ರಿಕ ಕಾರಣಗಳು ತಡೆಯಾಗಿದ್ದರೂ ಕಂಬದ ಕೋಣೆಯ ಮಾರ್ಗವಾಗಿ ಎಲ್ಲೂರು ಸಬ್‌ ಸ್ಟೇಷನ್‌ ಕಾಮಗಾರಿ ಪೂರ್ಣಗೊಳಿಸಿ ಕಾರ್ಯಾರಂಭಗೊಳಿಸಲು ಇಲಾಖೆಯ ಪ್ರಯತ್ನ ನಡೆಯುತ್ತಿದೆ.

10 ಕೋ.ರೂ. ವೆಚ್ಚದ ಯೋಜನೆ
2017ರಲ್ಲಿ ಆರಂಭಗೊಂಡ ಎಲ್ಲೂರು ಸಬ್‌ ಸ್ಟೇಷನ್‌ ನಿರ್ಮಾಣ ಕಾಮಗಾರಿ ಆಮೆನಡಿಗೆ ಯಲ್ಲಿ ಸಾಗುತ್ತಿರುವುದು ಈ ಭಾಗದ ನಿವಾಸಿಗಳಿಗೆ ನಿರಾಶೆ ಉಂಟುಮಾಡಿದೆ. ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆಯೇ ಎಂಬ ಶಂಕೆ ಮೂಡಿಬರುತ್ತಿದೆ. ಹಾಲ್ಕಲ್‌ನಲ್ಲಿ ಸಬ್‌ ಸ್ಟೇಷನ್‌ ಆರಂಭಗೊಂಡಲ್ಲಿ 3 ಫೀಡರ್‌ ಗಳ ಬಳಕೆ ಮೂಲಕ ಕೊಲ್ಲೂರು, ಹಾಲ್ಕಲ್‌, ಜಡ್ಕಲ್‌, ಮುದೂರು, ಮೈಕಳ, ತಗ್ಗರ್ಸೆ ಹಾಗೂ ಎಲ್ಲೂರು ಭಾಗದ ಗ್ರಾಮಸ್ಥರಿಗೆ ಪೂರ್ಣ ಪ್ರಮಾಣದ ವಿದ್ಯುತ್‌ ಒದಗಿಸಿದಂತಾಗುವುದು.

ಅಧಿಕಾರಿಗಳಿಗೆ ಸೂಚನೆ
ಎಲ್ಲೂರು ಸಬ್‌ ಸ್ಟೇಷನ್‌ ನಿರ್ಮಾಣ ಕಾಮಗಾರಿ ತ್ವರಿತಗತಿಯಲ್ಲಿ ನಡೆಸಿ ಪೂರ್ಣಗೊಳಿಸಿ ಕೊಲ್ಲೂರು, ಗೋಳಿಹೊಳೆ, ಜಡ್ಕಲ್‌, ಮುದೂರು ಮುಂತಾದ ಭಾಗದ ನಿವಾಸಿಗಳಿಗೆ ಹಗಲಿರುಳು ಪೂರ್ಣ ಪ್ರಮಾಣದ ವಿದ್ಯುತ್‌ ಸರಬರಾಜು ಒದಗಿಸುವಂತೆ ಅಧಿ ಕಾರಿಗಳಿಗೆ ಸೂಚನೆ ನೀಡಿದ್ದೇನೆ, ಅನುಷ್ಠಾನಗೊಳಿಸಲು ವಿಳಂಬವಾದಲ್ಲಿ ಸರಕಾರದ ಗಮನ ಸೆಳೆಯಲಾಗುವುದು.
-ಬಿ.ಎಂ. ಸುಕುಮಾರ್‌ ಶೆಟ್ಟಿ, ಶಾಸಕರು ಬೈಂದೂರು

8 ತಿಂಗಳಲ್ಲಿ ಕಾರ್ಯಾರಂಭ
ಆರಣ್ಯ ಇಲಾಖೆಗೆ 3 ಬಾರಿ ಮನವಿ ಸಲ್ಲಿಸಿ ಅಗತ್ಯದ ದಾಖಲೆಗಳನ್ನು ನೀಡಲಾಗಿದೆ. ಇದೀಗ ಕಂಬದಕೋಣೆ ಮಾರ್ಗವಾಗಿ ಕಾಲ್ತೋಡು ಮೂಲಕ ರಾಜ್ಯ ಹೆದ್ದಾರಿಯಲ್ಲಿ ಸಂಪರ್ಕ ತಂತಿಗಳ ಜೋಡಣೆ ಕಾಮಗಾರಿ ನಡೆಯುತ್ತಿದೆ. ಮುಂದಿನ 8 ತಿಂಗಳಲ್ಲಿ ಎಲ್ಲೂರು ಸಬ್‌ ಸ್ಟೇಷನ್‌ ಕಾರ್ಯಾರಂಭಗೊಳ್ಳುವುದು.
-ರಾಕೇಶ್‌, ಕಾರ್ಯನಿರ್ವಾಹಕ, ಎಂಜಿನಿಯರ್‌ ಮೆಸ್ಕಾಂ

ಡಾ| ಸುಧಾಕರ ನಂಬಿಯಾರ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Udupi-judicial2

Udupi: ʼನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕತೆ, ಸಮಯ, ಹಣವೂ ಉಳಿತಾಯʼ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.