ಹೋರಾಟಕ್ಕೆ ಮತ್ತೆ ಕಾವು


Team Udayavani, Feb 15, 2021, 5:30 AM IST

Untitled-10

ಕೋಟ: ಫಾಸ್ಟ್ಯಾಗ್‌ ಕಡ್ಡಾಯವಾಗ ಲಿರುವ ಜತೆಗೆ ಕ್ಯಾಶ್‌ಲೈನ್‌ಗಳು, ಸ್ಥಳೀಯರಿಗೆ ಇರುವ ಟೋಲ್‌ ವಿನಾಯಿತಿಗಳು ಕೂಡ ಬಂದ್‌ ಆಗಲಿವೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹಾದು ಹೋಗುವ 2 ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ತಲಪಾಡಿಯಲ್ಲಿ ಸ್ಥಳೀಯ ಪಂಚಾ ಯತ್‌ ವ್ಯಾಪ್ತಿ, ಹೆಜಮಾಡಿಯಲ್ಲಿ ಸ್ಥಳೀಯ ಗ್ರಾಮದವರು ಮತ್ತು ಪಡುಬಿದ್ರಿಯಲ್ಲಿ ಸ್ಥಳೀಯ ಟ್ಯಾಕ್ಸಿಗಳಿಗೆ ಶುಲ್ಕ ವಿನಾಯಿತಿ ಇದೆ. ಬೈಂದೂರು- ಶಿರೂರಿನಲ್ಲಿ ಸ್ಥಳೀಯ 5 ಕಿ.ಮೀ. ವ್ಯಾಪ್ತಿ, ಸಾಸ್ತಾನದಲ್ಲಿ ಕೋಟ ಜಿ.ಪಂ. ವ್ಯಾಪ್ತಿಯ ಎಲ್ಲ ವಾಹನಗಳಿಗೆ ವಿನಾಯಿತಿ ಇದೆ. ಆದರೆ ಫಾಸ್ಟ್ಯಾಗ್‌ ಕಡ್ಡಾಯವಾದ ಬಳಿಕ ಈ ಎಲ್ಲ ರಿಯಾಯಿತಿ ಗಳನ್ನು ರದ್ದುಪಡಿಸುವುದಾಗಿ ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ. 20 ಕಿ.ಮೀ. ವ್ಯಾಪ್ತಿಯ ಖಾಸಗಿ ಕಾರುಗಳಿಗೆ ನೀಡ ಲಾಗುವ 275 ರೂ. ಮಾಸಿಕ ಪಾಸ್‌ ವ್ಯವಸ್ಥೆ ಮಾತ್ರ ಇರಲಿದೆ ಎಂದಿದ್ದಾರೆ.

ವಿನಾಯಿತಿ ಮುಂದುವರಿಸಿ: ಆಗ್ರಹ ವಿನಾಯಿತಿಯನ್ನು ಮುಂದುವರಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ. ಈ ನಿಟ್ಟಿನಲ್ಲಿ ಸ್ಥಳೀಯರಿಂದ ಹೋರಾಟ ಆರಂಭಗೊಂಡಿದೆ.

ಶುಲ್ಕ ವಿನಾಯಿತಿಗೆ ಪಟ್ಟು ಹಿಡಿಯಲು ಕಾರಣ :

ಸ್ಥಳೀಯ ವಾಣಿಜ್ಯ, ಖಾಸಗಿ ವಾಹನಗಳು ದಿನಕ್ಕೆ ಹತ್ತಾರು ಬಾರಿ ಟೋಲ್‌ ಮೂಲಕ ಸಂಚರಿಸಬೇಕಿದೆ. ಪ್ರತೀ ಬಾರಿ ಟೋಲ್‌ ಪಾವತಿಸುವುದು ವೆಚ್ಚದ ದೃಷ್ಟಿಯಿಂದಲೂ ಪ್ರಾಯೋಗಿಕ ವಾಗಿಯೂ ಅಸಾಧ್ಯ. ಸ್ಥಳೀಯ 20 ಕಿ.ಮೀ. ವ್ಯಾಪ್ತಿಯ ಖಾಸಗಿ ಕಾರುಗಳಿಗೆ ಮಾಸಿಕ ಪಾಸ್‌ ವ್ಯವಸ್ಥೆ ಇದ್ದರೂ ತಿಂಗಳ ಪ್ರಥಮ ದಿನವೇ ಕಡ್ಡಾಯವಾಗಿ ಪಾಸ್‌ ಪಡೆಯಬೇಕೆಂಬ ನಿಯಮವಿದೆ. ತಿಂಗಳ ಕೊನೆಯ 2 ದಿನಗಳಿರುವಾಗ ಪಾಸ್‌ ಖರೀದಿಸಿದರೆ ಎರಡೇ ದಿನಗಳಲ್ಲಿ ಪಾಸ್‌ ಅವಧಿ ಮುಗಿಯಲಿದೆ. ಇದರಿಂದ ಯಾವುದೇ ಲಾಭವಿಲ್ಲ ಎನ್ನುವುದು ಸ್ಥಳೀಯರ ವಾದ.

ಸಾಸ್ತಾನದ ರಾ.ಹೆ. ಹೋರಾಟ ಸಮಿತಿಯವರು ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ. ನಮ್ಮ ಮನವಿಯನ್ನು ತಿರಸ್ಕರಿಸಿ ಫೆ. 15ರ ಮಧ್ಯರಾತ್ರಿಯಿಂದ ಸ್ಥಳೀಯರಿಂದಲೂ ಟೋಲ್‌ ವಸೂಲಿ ಆರಂಭಿಸಿದಲ್ಲಿ ಕರ ನಿರಾಕರಿಸಿ ವಾಹನಗಳನ್ನು ಟೋಲ್‌ನಲ್ಲೇ ನಿಲ್ಲಿಸಲು ಕರೆ ನೀಡುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ರವಿವಾರ ಸಂಜೆ ಹೆದ್ದಾರಿ ಜಾಗೃತಿ ಸಮಿತಿಯ ಸದಸ್ಯರು, ಜಿಲ್ಲೆಯ ಮೂರು ಟೋಲ್‌ಗ‌ಳ ಪ್ರಬಂಧಕ ಶಿವಪ್ರಸಾದ್‌ ರೈ ಮತ್ತು ಸಿಬಂದಿಯ ಜತೆ ಕೋಟ ಪೊಲೀಸ್‌ ಠಾಣಾಧಿಕಾರಿಗಳು, ಬ್ರಹ್ಮಾವರ ವೃತ್ತ ನಿರೀಕ್ಷಕರ ಸಮ್ಮುಖದಲ್ಲಿ ಮಾತುಕತೆ ನಡೆಯಿತು. ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ದಿಶಾ ಸಭೆ ನಡೆಸಿ ಪರಿಹಾರ ಸೂಚಿಸುವುದಾಗಿ ತಿಳಿಸಿದ್ದು, ಆ ಸಭೆಯ ಬಳಿಕ ವಿನಾಯಿತಿ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಅಲ್ಲಿಯ ತನಕ ಸ್ಥಳೀಯರಿಗೆ ಶುಲ್ಕ ಕಡ್ಡಾಯಗೊಳಿಸಬಾರದು ಎಂದು ಜಾಗೃತಿ ಸಮಿತಿಯವರು ಆಗ್ರಹಿಸಿದ್ದಾರೆ. ಈ ಬಗ್ಗೆ ಉನ್ನತ ಅಧಿಕಾರಿಗಳ ಜತೆ ಚರ್ಚೆ ನಡೆಸಿ ನಿರ್ಧಾರ ತಿಳಿಸುವುದಾಗಿ ಟೋಲ್‌ ಅಧಿಕಾರಿಗಳು ಹೇಳಿದ್ದಾರೆ.

ದ.ಕ., ಉಡುಪಿ ಟೋಲ್‌:  ಪ್ರಸ್ತುತ ಫಾಸ್ಟ್ಯಾಗ್‌ ಸಂಚಾರ

ಪ್ರದೇಶ   ಫಾಸ್ಟ್ಯಾಗ್‌ ಸಂಚಾರ ಪ್ರಮಾಣ (ಶೇ.)

ಹೆಜಮಾಡಿ              72

ಸಾಸ್ತಾನ 71

ತಲಪಾಡಿ 60

ಬೈಂದೂರು ಶಿರೂರು              68

ಬ್ರಹ್ಮರಕೂಟ್ಲು          89

ಸುರತ್ಕಲ್‌               90

ಫ್ರೀ ಲೇನ್‌ ಹೊರತುಪಡಿಸಿ

ಸ್ಥಳೀಯರಿಗೆ ಶುಲ್ಕ ವಿನಾಯಿತಿ ಮುಂದುವರಿಯ ಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದು, ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಭೆ ನಡೆಯುವ ತನಕ ಟೋಲ್‌ ಕಡ್ಡಾಯಗೊಳಿಸಬಾರದು. ಮನವಿಯನ್ನು ತಿರಸ್ಕರಿಸಿದರೆ ಸ್ಥಳೀಯರು ಕರ ನಿರಾಕರಿಸಲಿದ್ದಾರೆ.. ಪ್ರತಾಪ್‌ ಶೆಟ್ಟಿ ಸಾಸ್ತಾನ,  ಹೆದ್ದಾರಿ ಜಾಗೃತಿ ಸಮಿತಿ ಪ್ರಮುಖರು

ಕೇಂದ್ರ ಸರಕಾರದ ಆದೇಶದಂತೆ ಫಾಸ್ಟ್ಯಾಗ್‌ ಕಡ್ಡಾಯವಾಗುತ್ತಿದೆ. ಹಿಂದಿನ ಎಲ್ಲ ರಿಯಾಯಿತಿಗಳನ್ನು ರದ್ದುಪಡಿಸಲಾಗುವುದು. ಸ್ಥಳೀಯ ಖಾಸಗಿ ಕಾರಿನವರು ಮಾಸಿಕ ಪಾಸ್‌ ಖರೀದಿಸಬೇಕು. ಇನ್ನೂ

ಫಾಸ್ಟ್ಯಾಗ್‌ಅಳವಡಿಸಿಕೊಳ್ಳದವರು ಟೋಲ್‌ಗ‌ಳಲ್ಲಿ ವಾಹನದ ಆರ್‌.ಸಿ., ಆಧಾರ್‌, ಪಾನ್‌ಕಾರ್ಡ್‌ ಪ್ರತಿ ಹಾಜರುಪಡಿಸಿ ಸ್ಥಳದಲ್ಲೇ ಫಾಸ್ಟ್ಯಾಗ್‌ ಪಡೆಯಬಹುದು.  ಶಿಶುಮೋಹನ್‌,  ಎನ್‌ಎಚ್‌ಎಐ ಯೋಜನ ನಿರ್ದೇಶಕ

 

ಟಾಪ್ ನ್ಯೂಸ್

CM-Sidda

Contractor Case: ಸಚಿವ ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಪ್ರಶ್ನೆಯೇ ಉದ್ಭವಿಸಲ್ಲ: ಸಿಎಂ

Mumbai: ಸಂಚಾರ ನಿಯಮ ಉಲ್ಲಂಘನೆ: ಹೊಸ ವರ್ಷದ ಮುನ್ನಾ ದಿನ 89 ಲಕ್ಷ ರೂ. ದಂಡ ಸಂಗ್ರಹ

Mumbai: ಹೊಸ ವರ್ಷದ ಮುನ್ನಾದಿನ 17,800 ವಾಹನ ಚಾಲಕರಿಗೆ ದಂಡ, 89 ಲಕ್ಷ ರೂ. ಸಂಗ್ರಹ

Hubballi

Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು

Delhi: ಕೇಜ್ರಿವಾಲ್‌ ಚುನಾವಣೆಯಲ್ಲಿ ನೀಡಿದ್ದ ಒಂದೂ ಭರವಸೆ ಈಡೇರಿಸಿಲ್ಲ: ಬಿಜೆಪಿ ವಾಗ್ದಾಳಿ

Delhi: ಕೇಜ್ರಿವಾಲ್‌ ಚುನಾವಣೆಯಲ್ಲಿ ನೀಡಿದ್ದ ಒಂದೂ ಭರವಸೆ ಈಡೇರಿಸಿಲ್ಲ: ಬಿಜೆಪಿ ವಾಗ್ದಾಳಿ

rajnath 2

2025 ‘ಸುಧಾರಣೆಗಳ ವರ್ಷ’ಎಂದು ಘೋಷಣೆ ಮಾಡಿದ ರಕ್ಷಣ ಸಚಿವಾಲಯ

Video: ಚಿಂದಿ ಆಯುವ ಮಕ್ಕಳ ಕೈಯಲ್ಲಿ 500 ರ ಕಂತೆ ಕಂತೆ ನೋಟು… ವಿಡಿಯೋ ವೈರಲ್

Video: ಚಿಂದಿ ಆಯುವ ಮಕ್ಕಳ ಕೈಯಲ್ಲಿ 500 ರ ಕಂತೆ ಕಂತೆ ನೋಟು… ವಿಡಿಯೋ ವೈರಲ್

BBK11: ಬಿಗ್‌ ಬಾಸ್‌ ಮನೆಯಲ್ಲಿ ಚೈತ್ರಾ ಬಿರುಗಾಳಿ ಎಂದ ಉಗ್ರಂ ಮಂಜು ತಂದೆ

BBK11: ಬಿಗ್‌ ಬಾಸ್‌ ಮನೆಯಲ್ಲಿ ಚೈತ್ರಾ ಬಿರುಗಾಳಿ ಎಂದ ಉಗ್ರಂ ಮಂಜು ತಂದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Kaup: ಎಲ್ಲೂರು ಘಟಕದಲ್ಲಿ ಉಚ್ಚಿಲದ ತ್ಯಾಜ್ಯ ವಿಲೇವಾರಿ ಬೇಡಿಕೆ

10

Udupi: ಹುಲ್ಲು ಕೊಯ್ಯುವ ಯಂತ್ರಕ್ಕೆ ಸಿಲುಕಿದ್ದ ಹೆಬ್ಬಾವಿಗೆ ಶಸ್ತ್ರಚಿಕಿತ್ಸೆ

9

Kota: ಬಡವರ ಪಾಲಿಗೆ ಬಾಂಧವ್ಯದ ನೆರಳು

7

Belman ಪೇಟೆಯಲ್ಲಿ ಬಾಯ್ದೆರೆದ ಚರಂಡಿಗಳು!

6

Karkala ಪೇಟೆ ಸುತ್ತಮುತ್ತ ಬೀದಿನಾಯಿಗಳ ಹಾವಳಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CM-Sidda

Contractor Case: ಸಚಿವ ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಪ್ರಶ್ನೆಯೇ ಉದ್ಭವಿಸಲ್ಲ: ಸಿಎಂ

Murdeshwar:ಅಶುಭ- ಪ್ರವಾಸಿಗರಿಲ್ಲದೆ ಮುರ್ಡೇಶ್ವರ ಕಿನಾರೆ ಭಣ ಭಣ!

Murdeshwar:ಅಶುಭ- ಪ್ರವಾಸಿಗರಿಲ್ಲದೆ ಮುರ್ಡೇಶ್ವರ ಕಿನಾರೆ ಭಣ ಭಣ!

KD Movie: ಕೆಡಿ ಶಿವ ಮೊಗದಲ್ಲಿ 25 ಮಿಲಿಯನ್‌ ನಗು 

KD Movie: ಕೆಡಿ ಶಿವ ಮೊಗದಲ್ಲಿ 25 ಮಿಲಿಯನ್‌ ನಗು 

Mumbai: ಸಂಚಾರ ನಿಯಮ ಉಲ್ಲಂಘನೆ: ಹೊಸ ವರ್ಷದ ಮುನ್ನಾ ದಿನ 89 ಲಕ್ಷ ರೂ. ದಂಡ ಸಂಗ್ರಹ

Mumbai: ಹೊಸ ವರ್ಷದ ಮುನ್ನಾದಿನ 17,800 ವಾಹನ ಚಾಲಕರಿಗೆ ದಂಡ, 89 ಲಕ್ಷ ರೂ. ಸಂಗ್ರಹ

Hubballi

Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.