“ಭಾವ ಸಂವೇದನೆಗಳು ಹೆಚ್ಚು ಪರಿಣಾಮಕಾರಿ’
Team Udayavani, Apr 21, 2019, 6:30 AM IST
ತೆಕ್ಕಟ್ಟೆ: ಸಂವಹನಕ್ಕೆ ಭಾಷೆಗಿಂತಲೂ ಭಾವ ಮುಖ್ಯ. ಬೇರೆ ಬೇರೆ ಭಾಷೆಗಳನ್ನಾಡುವ ವ್ಯಕ್ತಿಗಳ ನಡುವೆ ಸಂವಹನ ಏರ್ಪಡುವುದಾದರೆ ಅದು ಭಾವಾಭಿನಯದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಭಾಷಾ ಅಭಿವ್ಯಕ್ತಿಗಿಂತಲೂ ಭಾವ ಸಂವೇದನೆಗಳು ಹೆಚ್ಚು ಪರಿಣಾಮಕಾರಿ ಎಂದು ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯೆ, ಕಲಾವಿದೆ ಅಶ್ವಿನಿ ಕೊಂಡದಕುಳಿ ಹೇಳಿದರು.
ಅವರು ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿನ ಯಶಸ್ವಿ ಕಲಾವೃಂದ ಹಾಗೂ ಕೈಲಾಸ ಕಲಾಕ್ಷೇತ್ರದ ನೇತƒತ್ವದ ನಡೆದ ರಜಾರಂಗು 2019 ಶಿಬಿರದಲ್ಲಿ ಯಕ್ಷ ಕಲೆಯಲ್ಲಿ ನವರಸಾಭಿನಯ ಎನ್ನುವ ವಿಷಯವನ್ನು ಉದ್ದೇಶಿಸಿ ಮಾತನಾಡಿದರು.
ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ, ಶಾಂತ ರಸಗಳ ಅಭಿನಯದ ಪರಿಚಯದೊಂದಿಗೆ ಕೊನೆಯಲ್ಲಿ ಧರಣಿ ಮಂಡಲ ಮಧ್ಯದೊಳಗೆ ರೂಪಕವನ್ನು ಪ್ರದರ್ಶಿಸಿ ಶಿಬಿರಾರ್ಥಿಗಳನ್ನು ತನ್ನೆಡೆಗೆ ಸೆಳೆಯುವಲ್ಲಿ ಯಶಸ್ವಿಯಾದರು.
ಇದೇ ಸಂದರ್ಭದಲ್ಲಿ ಭಾಗವತ ಲಂಬೋದರ ಹೆಗಡೆಯವರು ಕಲಾವಿದೆ ಅಶ್ವಿನಿ ಕೊಂಡದಕುಳಿ ಯವರನ್ನು ಗುರುತಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕೊçಕೂರು ಸೀತಾರಾಮ ಶೆಟ್ಟಿ, ಉಪನ್ಯಾಸಕ ಮೋಹನ್‌ಚಂದ್ರ ಪಂಜಿಗಾರು, ವೆಂಕಟೇಶ್ ವೈದ್ಯ ಕೊಮೆ, ಪ್ರಶಾಂತ್ ಮಲ್ಯಾಡಿ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ರಂಗ ಶಿಕ್ಷಕ ರೋಹಿತ್ ಎಸ್. ಬೆ„ಕಾಡಿ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.