ವಿಧಾನಪರಿಷತ್ ಚುನಾವಣೆಗೆ ಅಂತಿಮ ಸಿದ್ಧತೆ
Team Udayavani, Dec 10, 2021, 3:20 AM IST
ಕುಂದಾಪುರ: ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳಿಂದ ಆಯ್ಕೆಯಾಗುವ ವಿಧಾನ ಪರಿಷತ್ ಸದಸ್ಯತ್ವಕ್ಕೆ ಡಿ.10ರಂದು ನಡೆಯುವ ಚುನಾವಣೆಗೆ ಗುರುವಾರ ಎಲ್ಲ ವಿಧದ ಸಿದ್ಧತೆಗಳೂ ನಡೆದವು.
ಸಹಾಯಕ ಕಮಿಷನರ್ ಕೆ. ರಾಜು ಅವರ ಮಾರ್ಗದರ್ಶನದಲ್ಲಿ, ತಹಶೀಲ್ದಾರ್ ಕಿರಣ್ ಗೌರಯ್ಯ ಅವರು ಚುನಾವಣ ಸಿದ್ಧತೆಗಳನ್ನು ಪರಿಶೀಲಿಸಿದರು. ತಾಲೂಕಿನಲ್ಲಿ 45 ಮತಗಟ್ಟೆಗಳಿದ್ದು 296 ಪುರುಷ, 318 ಮಹಿಳಾ ಮತದಾರರು ಸೇರಿ ಒಟ್ಟು 614 ಮತದಾರರಿದ್ದಾರೆ.
45 ಮತಗಟ್ಟೆಗಳಲ್ಲಿ 45 ಪ್ರಥಮ ಮತಗಟ್ಟೆ ಅಧಿಕಾರಿ, 8 ಹೆಚ್ಚುವರಿ, 45 ಸಹಾಯಕ ಮತಗಟ್ಟೆ ಅಧಿಕಾರಿ, 8 ಹೆಚ್ಚುವರಿ, 45 ಮೈಕ್ರೋ ಅಬ್ಸರ್ವರ್ಸ್, 8 ಹೆಚ್ಚುವರಿ, 45 ಡಿ ದರ್ಜೆ ಗುಮಾಸ್ತರು, ಎಲ್ಲ ಮತಗಟ್ಟೆಗಳಿಗೂ ಪೊಲೀಸರು ಚುನಾವಣ ಪ್ರಕ್ರಿಯೆಗೆ ನೇಮಕವಾಗಿದ್ದಾರೆ. ಪುರಸಭೆಯಲ್ಲಿ 23 ಸದಸ್ಯರು, 5 ನಾಮನಿರ್ದೇಶಿತರು, ಶಾಸಕರ ಮತ ಚಲಾವಣೆ ಇದೆ.
ತಾಲೂಕಿನಲ್ಲಿ ಅತ್ಯಂತ ಕನಿಷ್ಠ ಮತದಾರರು ಇರುವ ಪಂಚಾಯತ್ ಎಂದರೆ ಯಡಮೊಗೆ ಪಂಚಾಯತ್. ಇಲ್ಲಿ 6 ಸದಸ್ಯರ ಪೈಕಿ ಇಬ್ಬರು ಜೈಲಿನಲ್ಲಿದ್ದು 4 ಮಂದಿಯಷ್ಟೇ ಮತದಾನ ಮಾಡಬೇಕಿದೆ.
ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆ ಅಲ್ಲದ ಕಾರಣ ಮತಪೆಟ್ಟಿಗೆಗಳು, ಬ್ಯಾಲೆಟ್ ಪೇಪರ್, ಅಂಕೆ ನಮೂದಿಸಲು ಪೆನ್ನು ಇತ್ಯಾದಿಗಳನ್ನು ಎಲ್ಲ ಮತಗಟ್ಟೆಗಳಿಗೆ ಕೊಂಡೊಯ್ಯಲಾಗಿದೆ. ಬೆಳಗ್ಗೆಯೇ ಎಲ್ಲ ಮತಗಟ್ಟೆಗಳನ್ನು ಚುನಾವಣ ಸಿಬಂದಿ ತಲುಪಿದ್ದಾರೆ.
ಕಾರ್ಕಳದಲ್ಲಿ ಮಸ್ಟರಿಂಗ್ ಕಾರ್ಯ :
ಕಾರ್ಕಳ: ವಿಧಾನ ಪರಿಷತ್‌ಗೆ ಡಿ. 10ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿ ಗುರುವಾರ ಕಾರ್ಕಳ ತಾಲೂಕು ಕಚೇರಿಯಲ್ಲಿ ಮಸ್ಟರಿಂಗ್ ಕಾರ್ಯ ತಾಲೂಕು ಚುನಾವಣಾಧಿಕಾರಿ ಮೇಲುಸ್ತುವಾರಿ ಯಲ್ಲಿ ನಡೆಯಿತು.
ಭದ್ರತಾ ನಿರತ ಪೊಲೀಸರು, ಚುನಾವಣೆ ಕರ್ತವ್ಯ ನಿರ್ವಹಿಸಲಿರುವ ಅಧಿಕಾರಿಗಳು, ಸಹಾಯಕರು ಸಿದ್ಧತೆಗಳನ್ನು ಮಾಡಿಕೊಂಡು ಮತಯಂತ್ರ ಹಾಗೂ ಚುನಾವಣ ವಸ್ತುಗಳೊಂದಿಗೆ ಮತಗಟ್ಟೆಗೆ ತೆರಳಿದರು. ಕಾರ್ಕಳ ತಾಲೂಕಿನ 27 ಗ್ರಾಮ ಪಂಚಾಯತ್‌ಗಳ ಮತಗಟ್ಟೆ ಹಾಗೂ ಪುರಸಭೆ ಮತಗಟ್ಟೆ ಸೇರಿ 28 ಮತಗಟ್ಟೆಗಳು ತೆರೆದಿವೆ. ಈ ಹಿನ್ನೆಲೆಯಲ್ಲಿ ಬಿಗು ಪೊಲೀಸ್ ಬಂದೊಬಸ್ತ್ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.