ಕುದ್ರುಬೈಲು: ಇಳಿಮುಖವಾಗದ ನೆರೆ ; ಸುರಕ್ಷಿತ ಸ್ಥಳಕ್ಕೆ ತೀರ ಪ್ರದೇಶದ ನಿವಾಸಿಗಳ ಸ್ಥಳಾಂತರ
Team Udayavani, Jul 9, 2022, 10:35 PM IST
ತೆಕ್ಕಟ್ಟೆ : ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುದ್ರುಬೈಲು ಪರಿಸರ ಸಂಪೂರ್ಣ ಜಲಾವೃತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಇಲ್ಲಿನ ನಿವಾಸಿಗಳನ್ನು ಜು.9 ರಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಕುದ್ರುಬೈಲು ಪರಿಸರದಲ್ಲಿ ನೆರೆ ನೀರಿನ ಪ್ರಮಾಣ ಏರಿಕೆಯಾಗಿ ಮನೆಗಳಿಗೆ ನೀರು ನುಗ್ಗಿರುವ ಪರಿಣಾಮ ಇಲ್ಲಿನ ಮೇಲ್ತಾರುಮನೆ ರಘುರಾಮ ಶೆಟ್ಟಿ, ಕುದ್ರುಮನೆ ನಿವಾಸಿಗಳಾದ ನಾಗೇಶ್ ದೇವಾಡಿಗ ಹಾಗೂ ವಸಂತಿ ದೇವಾಡಿಗ ಕುಟುಂಬ ಸದಸ್ಯರು ತಮ್ಮ ಮನೆಯ ಜಾನುವಾರು ಸಹಿತ ನೆರೆ ನೀರಿನಲ್ಲಿಯೇ ಸುರಕ್ಷಿತ ಸ್ಥಳಾಂತರಗೊಂಡಿದ್ದಾರೆ.ತುರ್ತು ರಕ್ಷಣಾ ಕಾರ್ಯದಲ್ಲಿ ಹಿರಿಯ ಕೃಷಿಕ ರವೀಂದ್ರ ಶೆಟ್ಟಿ ದೇವಸ, ಮೇಲ್ತಾರುಮನೆ ಶ್ರೀನಾಥ ಶೆಟ್ಟಿ, ವಸಂತ್ ದೇವಾಡಿಗ, ದರ್ಶನ್ ಅವರ ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ. ಮಳೆಯ ತೀವ್ರತೆ ಕಡಿಮೆಯಾದರೂ ಕೂಡಾ ಮಾಲಾಡಿ, ಮಲ್ಯಾಡಿ, ಹಲ್ತೂರು, ಉಳ್ತೂರು, ಕುದ್ರುಬೈಲು, ಗುಳ್ಳಾಡಿ ಹೊಳೆ ಸಾಲು ತೀರ ಪ್ರದೇಶದಲ್ಲಿ ನೆರೆ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಇದನ್ನೂ ಓದಿ : ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬರಲಿವೆ ಆಫ್ರಿಕನ್ ಚೀತಾಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Cooking Oil: ಅಡುಗೆ ಎಣ್ಣೆ ಆಮದು ಸವಾಲು
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.