ಫ್ಲೈಓವರ್ ನೀರು ಸರ್ವಿಸ್ ರಸ್ತೆ ವಾಹನಗಳ ಮೇಲೆ!
Team Udayavani, Aug 2, 2021, 4:10 AM IST
ಕುಂದಾಪುರ: ಫ್ಲೈಓವರ್ ಮೂಲಕ ವಾಹನಗಳು ಹೋಗುವಾಗ ಸರ್ವಿಸ್ ರಸ್ತೆಯಲ್ಲಿ ಹೋಗುವ ವಾಹನಗಳ ಮೇಲೆ ನೀರ ಸಿಂಚನ. ಹಂಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವರೆಗೆ ಫ್ಲೈಓವರ್, ಅಂಡರ್‌ಪಾಸ್‌ನ ಎರಡೂ ಬದಿ ಜಲಲ ಜಲಲ ಜಲಧಾರೆ.
ಜಲಸೇಚನ: ಇದು ಹೆದ್ದಾರಿ ಗುತ್ತಿಗೆದಾರರ ಕೊಡುಗೆ. ಫ್ಲೈಓವರ್ ಮೇಲೆ ಘನ ವಾಹನ ವಿರಲಿ, ಲಘು ವಾಹನಗಳೇ ಇರಲಿ ಮಳೆಗಾಲದಲ್ಲಿ ಚಲಿಸಿದರೆ ಸರ್ವಿಸ್ ರಸ್ತೆಯಲ್ಲಿ ಹೋಗುವ ಎಲ್ಲ ವಾಹನಗಳ ಮೇಲೂ ನೀರಿನ ಅಭಿಷೇಕ. ಪರಿಣಾಮವಾಗಿ ಲಘುವಾಹನಗಳ ಕನ್ನಡಿ ಮೇಲೆ ಅಚಾನಕ್ ಆಗಿ ನೀರು ಹಾರಿ ತಬ್ಬಿಬ್ಟಾಗುವ ಚಾಲಕನಿಂದ ಅಪಘಾತವಾಗುವ ಸಾಧ್ಯತೆಯೂ ಅಧಿಕ. ದ್ವಿಚಕ್ರ ವಾಹನ ಸವಾರರೂ ಇಂತಹ ಅನಿರೀಕ್ಷಿತ ಜಲಧಾರೆಯಿಂದ ಕಂಗಾಲಾಗುವ ದೃಶ್ಯ ಮಳೆ ಬಂದಾಗಲೆಲ್ಲ ಕಂಡು ಬರುತ್ತಿದೆ. ಅಂಡರ್‌ಪಾಸ್, ಫ್ಲೈಓವರ್ ರಸ್ತೆಯ ನೀರನ್ನು ಪೈಪ್‌ಗ್ಳ ಮೂಲಕ ನೇರ ಸರ್ವಿಸ್ ರಸ್ತೆಗೆ ಹರಿಯಬಿಡಲಾಗುತ್ತಿದೆ. ಅದು ಎಲ್ಲ ಕಡೆ ಜಲಪಾತದಂತೆ ಕಾಣುತ್ತಿದೆ. ಸರ್ವಿಸ್ ರಸ್ತೆಯಿಂದಲೂ ನೀರು ಹರಿಯಲು ಸರಿಯಾದ ಚರಂಡಿ ಎಲ್ಲ ಕಡೆ ಇರದ ಕಾರಣ ಸರ್ವಿಸ್ ರಸ್ತೆಯಲ್ಲೂ ನೀರು ತುಂಬಿ ಹೊಳೆಯಂತಾಗಿರುತ್ತದೆ. ಇಂತಹ ದೃಶ್ಯ ಬಸ್ರೂರು ಮೂರು ಕೈ, ಟಿ.ಟಿ. ರೋಡ್ ಬಳಿ, ಹರ್ಷ ಹೊಟೇಲ್ ಬಳಿ ಹೆಚ್ಚಾಗಿ ಕಂಡು ಬರುತ್ತಿದೆ.
ಬೇಡಿಕೆ : ಪುರಸಭೆ ವ್ಯಾಪ್ತಿಯೊಳಗೆ ಅಂಡರ್‌ಪಾಸ್ -ಫ್ಲೈಓವರ್‌ಗಳ ಓಡಾಟದ ನಡುವೆ ಸರ್ವಿಸ್ ರಸ್ತೆಗೆ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಈಗಾಗಲೇ ಇಲಾಖೆಗೆ, ಅಧಿ ಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ನೀಡ ಲಾಗಿದೆ. ನಗರಕ್ಕೆ ವಾಹನಗಳ ಪ್ರವೇಶಕ್ಕೆ ಅವಕಾಶ ವನ್ನೇ ನೀಡದಿರು ವುದರ ಅಡ್ಡ ಪರಿಣಾಮ ಈಗಾಗಲೇ ಕಾಣಲಾರಂಭಿಸಿದೆ. ಹೆದ್ದಾರಿ ಮೂಲಕ ಹೋಗುವ ವಾಹನಗಳ ಸಂಪರ್ಕ ನಗರದ ಜತೆ ತಪ್ಪಿದಂತಾಗಿದೆ. ವಾಣಿಜ್ಯ, ವ್ಯವಹಾರದ ಮೇಲೆ ಇದು ದುಷ್ಪರಿಣಾಮ ಬೀರುತ್ತಿದೆ. ಬೊಬ್ಬರ್ಯನಕಟ್ಟೆ ಬಳಿ ಸರ್ವಿಸ್ ರಸ್ತೆಗೆ ಪ್ರವೇಶ ಅವಕಾಶ ಕೊಡದ ಹೊರತು ಪರಿಹಾರ ಇಲ್ಲ ಎಂಬ ಅನಿವಾರ್ಯ ಬಂದಿದೆ. ಲಾಕ್‌ಡೌನ್‌ಗೆ ಮುನ್ನ ಕಾಮಗಾರಿ ಅರ್ಧದಲ್ಲಿ ಬಿಟ್ಟು ಹೋದ ಗುತ್ತಿಗೆದಾರರು ಅನಂತರದ ದಿನಗಳಲ್ಲಿ ಇತ್ತ ಕಡೆ ತಲೆ ಹಾಕಿಲ್ಲ. ಬಾಕಿ ಉಳಿದ ಕಾಮಗಾರಿ ಪ್ರಶ್ನಾರ್ಥವಾಗಿದೆ.
ದಾರಿ ತಪ್ಪಿಸುವ ಫಲಕ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಬರಲು ಅಲ್ಲಲ್ಲಿ ದಾರಿ ಕೊಡಲಾಗಿದೆ. ಕೋಟೇಶ್ವರ ದಿಂದ ಅಂಕದಕಟ್ಟೆ, ಹಂಗಳೂರು ವರೆಗೆ ಎರಡೂ ಬದಿಗಳಲ್ಲಿ ಒಟ್ಟು 18 ಕಡೆ ಹೆದ್ದಾರಿ ಯಿಂದ ಹೊರಬರಬಹುದು. ಈ 18ರಲ್ಲಿ ಅನೇಕವು ಪಾದಚಾರಿಗಳಿಗೆ, ಇನ್ನುಳಿದವು ವಾಹನಗಳ ಪ್ರವೇಶಕ್ಕೆ. ಅಂಗಡಿ, ಮಳಿಗೆ, ಆಸ್ಪತ್ರೆ, ಮನೆಗಳಿಗೆ ಹೋಗಲು ಕಬ್ಬಿಣದ ಬೇಲಿಯನ್ನು ತೆಗೆದು ಈ ದಾರಿ ನೀಡಲಾಗಿದೆ. ಉಡುಪಿ ಕಡೆಯಿಂದ ಬರುವಾಗ ಅಂಕದಕಟ್ಟೆ ಶಾಲೆ ಬಳಿಯೇ ಕುಂದಾಪುರ ಎಂದು ಎಡಬದಿಗೆ ತಿರುಗುವ ಫಲಕ ಅಳವಡಿಸ ಲಾಗಿದೆ. ಈ ಫಲಕ ಅನುಸರಿಸಿ ಅದೆಷ್ಟೋ ವಾಹನಗಳು ದಾರಿ ತಪ್ಪಿ ಹೋದುದು ಇದೆ. ಅದಾದ ಬಳಿಕ ಐಟಿಐ ಬಳಿ ಕುಂದಾಪುರ ಎಂದು ಫಲಕ ಇದೆ. ಅಲ್ಲಿ ಪ್ರವೇಶಕ್ಕೆ ಅವಕಾಶವೇ ಇಲ್ಲ. ಅನಂತರ ಮಸೀದಿ ಬಳಿಯೂ ಕುಂದಾಪುರ ಫಲಕ ಇದೆ. ಹೀಗೆ ಮೂರು ಮೂರು ಕಡೆ ಕುಂದಾಪುರ ಪ್ರವೇಶ ಎಂದು ಫಲಕ ಇದ್ದರೂ ಅವೆಲ್ಲವೂ ಗ್ರಾಮಾಂತರ ವ್ಯಾಪ್ತಿ. ಕುಂದಾಪುರ ಪುರಸಭೆ ವ್ಯಾಪ್ತಿ ಆರಂಭವಾದ ಬಳಿಕ ಒಂದೇ ಒಂದು ಫಲಕವೂ ಇಲ್ಲ, ಪ್ರವೇಶಕ್ಕೆ ಅನುಕೂಲವೂ ಇಲ್ಲ! ಅಸಲಿಗೆ ಮೂರೂ ಫಲಕ ಇರುವುದು ಕುಂದಾಪುರದಲ್ಲಿ ಅಲ್ಲ. ಹಂಗಳೂರಿನಲ್ಲಿ.
ಹೆದ್ದಾರಿ ಕಾಮಗಾರಿ ಪೂರ್ಣವಾದ ಬಳಿಕ ಗುತ್ತಿಗೆದಾರರು ಅದನ್ನು ಇಲಾಖೆಗೆ ಬಿಟ್ಟುಕೊಡಬೇಕಿದೆ. ಅಲ್ಲಿಯವರೆಗೆ ಸರ್ವಿಸ್ ರಸ್ತೆ ಏಕಮುಖ ಸಂಚಾರವಾಗಿರುತ್ತದೆ. ನಿರ್ಬಂಧ ತೆರವಾದ ಬಳಿಕ ಬಸೂÅರು ಮೂರುಕೈಯಿಂದ ಶಾಸ್ತ್ರಿ ಸರ್ಕಲ್‌ವರೆಗೆ ಸರ್ವಿಸ್ ರಸ್ತೆಯನ್ನು ಏಕಮುಖ ಮಾಡಲು ಮನವಿ ಮಾಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಉಳಿದ ಕಡೆ ಸರ್ವಿಸ್ ರಸ್ತೆ ದ್ವಿಮುಖ ಸಂಚಾರಕ್ಕೆ ಅವಕಾಶ ಇರುತ್ತದೆ. ಹಾಗಿದ್ದಾಗ ಕೆಎಸ್‌ಆರ್‌ಟಿಸಿ ಬಸ್‌ನವರಿಗೆ ದೂರಲು ಅವಕಾಶ ಇಲ್ಲ. ಪ್ರಸ್ತುತ ಬಸ್‌ನಿಲ್ದಾಣಕ್ಕೆ ತೆರಳುವುದು ಮತ್ತೆ ಶಾಸ್ತ್ರಿ ಸರ್ಕಲ್‌ಗೆ
ಬರಬೇಕಾದ ಕಾರಣ ಡೀಸೆಲ್, ಸಮಯ ಎಲ್ಲ ವ್ಯರ್ಥ. ಇದಕ್ಕಾಗಿಯೇ ಅವರು ಶಾಸ್ತ್ರಿ ಸರ್ಕಲ್‌ಗೆ ಬರದೆ ಕುಂದಾಪುರದ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡದೆ ನೇರ ಫ್ಲೈಓವರ್ ಮೂಲಕ ಸಾಗುತ್ತಿದ್ದಾರೆ.
ಕಾಮಗಾರಿ ಪೂರ್ಣಗೊಳಿಸಲು, ಹೆದ್ದಾರಿಯಿಂದ ನೀರು ಹರಿಯುವುದು, ಬೊಬ್ಬರ್ಯನಟ್ಟೆಯಲ್ಲಿ ಪ್ರವೇಶ ಅವಕಾಶ ನೀಡುವುದು ಸೇರಿದಂತೆ ಚರ್ಚಿಸಲು 15 ದಿನಗಳ ಒಳಗೆ ಸಭೆ ಕರೆಯಲಾಗುವುದು. -ಕೆ. ರಾಜು, ಉಪವಿಭಾಗಾಧಿಕಾರಿ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.