ನಾರ್ವೆ ಮಾಜಿ ಸಚಿವರ ಟ್ವಿಟರ್‌ನಲ್ಲಿ ಮರವಂತೆ ಚಿತ್ರ
Team Udayavani, May 19, 2022, 7:05 AM IST
ಕುಂದಾಪುರ: ಉತ್ತರ ಯುರೋಪ್‌ನ ನಾರ್ವೆ ದೇಶದ ಮಾಜಿ ಸಚಿವ ಎರಿಕ್ ಸೊಲ್ಹೆಮ್ ಅವರು ಮರವಂತೆಯ ಸಮುದ್ರ ತೀರದ ಚಿತ್ರವನ್ನು ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಎರಿಕ್ ಸೊಲ್ಹೆಮ್ ಅವರು ನಾರ್ವೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ವಿಶೇಷ ಸಲಹೆಗಾರ ರಾಗಿದ್ದು ರಾಜಕೀಯ ಪ್ರವೇಶಿಸಿ ಅಂತಾರಾಷ್ಟ್ರೀಯ ಅಭಿವೃದ್ಧಿ ಸಚಿವರಾಗಿ, ಪರಿಸರ ಸಚಿವರಾಗಿ 2012ರ ವರೆಗೆ ಸೇವೆ ಸಲ್ಲಿಸಿದ್ದಾರೆ.
ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ವಿಶೇಷ ಸಲಹೆಗಾರರಾಗಿ ತಮ್ಮ ಹಿಂದಿನ ಸ್ಥಾನಕ್ಕೆ ಮರಳಿದರು. 2016ರಿಂದ 2018ರ ವರೆಗೆ ವಿಶ್ವಸಂಸ್ಥೆಯ ಅಂಡರ್-ಸೆಕ್ರೆಟರಿ-ಜನರಲ್ ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು.
ಬೇರೆ ಬೇರೆ ದೇಶಗಳ ವಿಶೇಷ ಎನಿಸುವ ಚಿತ್ರ, ವೀಡಿಯೊ ತುಣುಕುಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಅವರು ಶೇರ್ ಮಾಡಿಕೊಂಡಿದ್ದು ಭಾರತದ ಅನೇಕ ಸ್ವಚ್ಛತೆ, ಗ್ರಾಮಾಂತರ ಪ್ರದೇಶದ ವಿಶೇಷಗಳು, ವೈರಲ್ ವೀಡಿಯೊಗಳು, ಚಿತ್ರ, ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಮೇ 17ರಂದು ಮರವಂತೆಯ ಚಿತ್ರವನ್ನು ಸೈಕಲಿಂಗ್ ಮಾಡಬಹುದಾದ ವಿಶ್ವದ ಅತ್ಯಂತ ಚಂದದ ರಸ್ತೆ, ಭಾರತದ ಉಡುಪಿ ಜಿಲ್ಲೆಯ ಮರವಂತೆಯಲ್ಲಿದೆ ಎಂದು ಹಂಚಿಕೊಂಡಿದ್ದಾರೆ. ಇದನ್ನು ಒಂದೇ ದಿನದಲ್ಲಿ 81 ಸಾವಿರ ಮಂದಿ ಇಷ್ಟಪಟ್ಟು, 7 ಸಾವಿರ ಮಂದಿ ಮರುಹಂಚಿಕೊಂಡಿದ್ದಾರೆ.
World’s Most Beautiful Cycling Route ?♀️ ?
Udupi, Karnataka, India ??. pic.twitter.com/BNU5fVdMlA— Erik Solheim (@ErikSolheim) May 17, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.