Gangolli ಅಗ್ನಿ ಅವಘಡ ಸಂತ್ರಸ್ತರಿಗೆ ಗರಿಷ್ಠ ಪರಿಹಾರದ ಭರವಸೆ
ಗಂಗೊಳ್ಳಿಗೆ ಮೀನುಗಾರಿಕೆ ರಾಜ್ಯ ನಿರ್ದೇಶಕರ ಭೇಟಿ
Team Udayavani, Nov 26, 2023, 12:11 AM IST
ಗಂಗೊಳ್ಳಿ: ಬೋಟ್ ಅಗ್ನಿ ದುರಂತ ಪ್ರಕರಣದಲ್ಲಿ ಪರಿಹಾರ ನೀಡುವ ಬಗ್ಗೆ ಸಚಿವರ ಬಳಿ ಚರ್ಚೆನಡೆದಿದ್ದು, ಆದಷ್ಟು ಬೇಗ ಮೀನುಗಾರರಿಗೆ ಸರಕಾರದಿಂದ ಗರಿಷ್ಠಪರಿಹಾರ ನೀಡಲು ಪ್ರಯತ್ನಿಸ ಲಾಗುತ್ತಿದೆ ಎಂದು ರಾಜ್ಯ ಮೀನು ಗಾರಿಕೆ ಇಲಾಖೆಯ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ್ ಹೇಳಿದರು.
ಅಗ್ನಿ ದುರಂತ ಸಂಭವಿಸಿದ ಗಂಗೊಳ್ಳಿಯ ಮ್ಯಾಂಗನೀಸ್ ವಾರ್ಫ್ ಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಮೀನುಗಾರರ ಜತೆ ಸಮಾಲೋಚನೆ ನಡೆಸಿದರು.
ಹೊಸ ಬೋಟ್ ನಿರ್ಮಿಸಲು ಬ್ಯಾಂಕ್‌ನಿಂದ ಸಾಲ ಪಡೆಯುವ ಸಂದರ್ಭ ಸಹಕರಿಸುವಂತೆ ಬ್ಯಾಂಕುಗಳಿಗೆ ಮನವಿ ಮಾಡಲಾಗುವುದು. ಮುಂದಿನ ಋತು ಆರಂಭದಲ್ಲಿ ಹೊಸ ಬೋಟ್ ನಿರ್ಮಾಣಗೊಂಡು ಮೀನುಗಾರರು ಹೊಸ ಬದುಕು ಕಟ್ಟಿಕೊಳ್ಳಲು ಸಿದ್ಧರಾಗಬೇಕು ಎಂದರು.
ಹೂಳೆತ್ತುವಿಕೆ
ಬಂದರಿನ ಹೂಳೆತ್ತುವಿಕೆ ನಾಳೆಯೇ ಆರಂಭವಾಗಲಿದೆ. ಜೆಟ್ಟಿ ಕುಸಿತಕ್ಕೆ ಸಂಬಂಧಿಸಿ ಹಿಂದಿನ ಮೀನುಗಾರಿಕೆ ಇಲಾಖೆ ನಿರ್ದೇಶಕರ ನೇತೃತ್ವದ ಸಮಿತಿಯ ವರದಿ ಬಂದಿದ್ದು, ಸರಕಾರಕ್ಕೆ ಸಲ್ಲಿಸಲಾಗುವುದು. 12 ಕೋ. ರೂ. ವೆಚ್ಚದ ಪುನರ್ ನಿರ್ಮಾಣದಲ್ಲಿ ಬಾಕಿ ಉಳಿದಿರುವ 73 ಲಕ್ಷ ರೂ. ವೆಚ್ಚದ ಕಾಮಗಾರಿ ನಡೆಸಲು ಮತ್ತು ಕುಸಿದು ಬಿದ್ದಿರುವ ಜೆಟ್ಟಿಯ ಅವಶೇಷ ತೆರವಿಗೆ ಅನುಮತಿಗೆ ಮನವಿ ಮಾಡಲಾಗಿದೆ. ಬಾಕಿ ಕಾಮಗಾರಿಯ ಅಂದಾಜು ಪಟ್ಟಿಗೆ ಸೂಚಿಸಲಾಗಿದೆ ಎಂದರು.
ಮತ್ಸ್ಯಸಂಪದ: 22 ಕೋ.ರೂ.
ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಸುಮಾರು 22 ಕೋ. ರೂ. ವೆಚ್ಚದಲ್ಲಿ ಬಂದ ರಿನ ಪುನರ್ ನವೀಕರಣ ಕಾಮಗಾರಿಗೆ ಮಂಜೂರಾತಿ ದೊರೆತಿದ್ದು, ಶೀಘ್ರ ಅನುದಾನ ಬಿಡುಗಡೆಯಾಗ ಬಹುದು. 2 ಹರಾಜು ಕೊಠಡಿ, ವಿಶ್ರಾಂತಿ ಕೊಠಡಿ, ಸಾರ್ವಜನಿಕ ಶೌಚಾಲಯ, ಓವರ್‌ಹೆಡ್ ಟ್ಯಾಂಕ್, ಆವರಣ ಗೋಡೆ ನಿರ್ಮಾಣ, ಸಿಸಿ ಕೆಮರಾ ಅಳವಡಿಕೆ ಸಹಿತ ಅನೇಕ ಕಾಮ ಗಾರಿಗಳು ನಡೆಯಲಿದೆ ಎಂದರು.
ಭರವಸೆ ಇಡಬಹುದೇ?
ದುರಂತ ಸಂಭವಿಸಿ 15 ದಿನ ಕಳೆದರೂ ಸರಕಾರದಿಂದ ಯಾವುದೇ ಪರಿಹಾರ ದೊರೆತಿಲ್ಲ. ಸಚಿವರು, ಶಾಸಕರು, ಅಧಿಕಾರಿಗಳೆಲ್ಲ ಬಂದ ರೂ ಏನೂ ಆಗಿಲ್ಲ. ಹೊಸ ಬೋಟ್‌ಗೆ ಸುಮಾರು 1 ಕೋಟಿ ರೂ. ಬೇಕು. ನಾವೆಲ್ಲ ಮೊದಲೇ ಸೋತಿದ್ದೇವೆ. ಇಂತಹ ಸಂದರ್ಭದಲ್ಲಿ ಸರಕಾರ ದಿಂದ ಪರಿಹಾರ ದೊರೆಯುವ
ಬಗ್ಗೆ ಭರವಸೆ ಇಟ್ಟುಕೊಳ್ಳ ಬಹುದೇ ಎಂದು ಮೀನು ಗಾರ ಮುಖಂಡ ರಮೇಶ್ ಕುಂದರ್ ಮತ್ತು ವಿಕ್ರಮ್ ಪ್ರಶ್ನಿಸಿದರು.
ಕೆಎಫ್‌ಡಿಸಿ ಆಡಳಿತ ನಿರ್ದೇಶಕ ಗಣೇಶ ಕೆ., ಅಪರ ನಿರ್ದೇಶಕ ಹರೀಶ್ ಕುಮಾರ್, ಜಂಟಿ ನಿರ್ದೇಶಕರಾದ ವಿವೇಕ ಆರ್., ಸಿದ್ಧಯ್ಯ, ಅಧಿಕಾರಿ ಗಳಾದ ಅಂಜನಾದೇವಿ, ಸಂಜೀವ ಅರಕೇರಿ, ಸುಮಲತಾ, ದಿವಾಕರ ಖಾರ್ವಿ, ರೆನಿಟಾ ಡಿ’ಸೋಜಾ, ಎಂಜನಿಯರ್‌ಗಳಾದ ಶೋಭಾ ಕೆ., ಜಯರಾಜ್, ಗಂಗೊಳ್ಳಿ ಮೀನುಗಾರರ ಸಹಕಾರಿ ಸಂಘದ ನಿರ್ದೇಶಕರಾದ ಚಂದ್ರ ಖಾರ್ವಿ, ರಾಜೇಶ ಸಾರಂಗ್, ಮುಖಂಡರಾದ ರಾಘವೇಂದ್ರ ಮೇಸ್ತ, ರಾಘವೇಂದ್ರ ಮಡಿವಾಳ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.