Gangolli: ಸಮುದ್ರ ತೀರದಲ್ಲಿ ಜಾನುವಾರುಗಳ ಕಳೇಬರ ಪತ್ತೆ
Team Udayavani, Nov 1, 2024, 7:32 AM IST
ಗಂಗೊಳ್ಳಿ: ಗಂಗೊಳ್ಳಿ ಗ್ರಾಮದ ಲೈಟ್‌ಹೌಸ್ ಕಡಲ ತೀರದಲ್ಲಿ ಬುಧವಾರ ಸಂಜೆ ಸುಮಾರು ಮೂರು ಜಾನುವಾರುಗಳ ಕಳೇಬರ ಪತ್ತೆಯಾಗಿದ್ದು, ಅಕ್ರಮ ಗೋಹತ್ಯೆ ಶಂಕೆ ವ್ಯಕ್ತವಾಗಿದೆ.
ಗೋಣಿ ಚೀಲದಲ್ಲಿ ತುಂಬಿದ ಸ್ಥಿತಿಯಲ್ಲಿ ಜಾನುವಾರು ಕಳೇಬರ ಪತ್ತೆಯಾಗಿದ್ದು, ಕಡಲ ತೀರದ ವಿವಿಧೆಡೆ ಜಾನುವಾರು ರುಂಡ ಪತ್ತೆಯಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಗಂಗೊಳ್ಳಿಯಲ್ಲಿ ಅಕ್ರಮ ಗೋಹತ್ಯೆ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಡಲ ತೀರದಲ್ಲಿ ಜಾನುವಾರು ಕಳೇಬರ ಪತ್ತೆಯಾಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಗಂಗೊಳ್ಳಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಹಿಂದೂಗಳ ಧಾರ್ಮಿಕ ಹಬ್ಬಗಳ ಸಂದರ್ಭ ಇಂತಹ ಕೃತ್ಯಗಳನ್ನು ನಡೆಸಿ ಹಿಂದೂಗಳ ಭಾವನೆಗಳನ್ನು ಕೆರಳಿಸುವ ಕೆಲಸ ನಡೆಯುತ್ತಿದೆ. ಅಕ್ರಮವಾಗಿ ಗೋವುಗಳನ್ನು ಹತ್ಯೆ ಮಾಡಿ ಅದರ ಕಳೇಬರಗಳನ್ನು ಕಡಲಿಗೆ ಎಸೆದು ವಿಕೃತಿ ಮೆರೆಯುತ್ತಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿನ ಕಾನೂನು ಕ್ರಮ ಜರಗಿಸುವಂತೆ ಮನವಿ ಮಾಡಿದ್ದಾರೆ. ಈ ಹಿಂದೆಯೇ ಹಲವು ಬಾರಿ ಮನವಿ ಮಾಡಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಜರಗಿಸುವಂತೆ ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ.
ಕಳೆದ ನಾಲ್ಕೈದು ತಿಂಗಳಿನಲ್ಲಿ ಗಂಗೊಳ್ಳಿ ಗ್ರಾಮದ ಕಡಲ ತೀರದಲ್ಲಿ ಕಂಡು ಬಂದಿರುವ ಮೂರನೇ ಪ್ರಕರಣ ಇದಾಗಿದೆ. ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
New Delhi: ಹಬ್ಬದ ಋತು; ದೇಶದಲ್ಲಿ 4.5 ಲಕ್ಷ ವಾಹನಗಳ ದಾಖಲೆ ಮಾರಾಟ!
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
Ranchi: ಹೇಮಂತ್ ಸೊರೇನ್ ವಯಸ್ಸು 5 ವರ್ಷದಲ್ಲಿ 7 ವರ್ಷ ಹೆಚ್ಚಳ!; ಬಿಜೆಪಿ
Dhananjay: ಮದುವೆಗೆ ಸಿದ್ದವಾದ್ರು ಡಾಲಿ; ದುರ್ಗದ ಹುಡುಗಿಯ ಕೈ ಹಿಡಿಯಲಿದ್ದಾರೆ ಧನಂಜಯ
Goddess Lakshmi: ಲಕ್ಷ್ಮೀ ಆರಾಧನೆಯ ಪರ್ವ ಸಮಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.